For Quick Alerts
  ALLOW NOTIFICATIONS  
  For Daily Alerts

  ಬ್ರೆಟ್ ಲೀ ಜೊತೆ ತಾರೆ ಪ್ರೀತಿ ಜಿಂಟಾ ರಹಸ್ಯ ರಾತ್ರಿ!

  By Rajendra
  |

  ಬೆಂಕಿಯಿಲ್ಲದೆ ಹೊಗೆ ಬರಲು, ಹೊಗೆಯಿಲ್ಲದೆ ಬೆಂಕಿ ಬರಲು ಸಾಧ್ಯವೆ!? ಬಾಲಿವುಡ್ ತಾರೆ ಪ್ರೀತಿ ಜಿಂಟಾ ವಿಷಯದಲ್ಲೂ ಹಾಗೆ ಆಗಿದೆ. ಆಸ್ಟ್ರೇಲಿಯಾ ಕ್ರಿಕೆಟಿಗೆ ಬ್ರೆಟ್ ಲೀ ಜೊತೆ ನನಗೆ ಸುತಾರಾಂ ಸಂಬಂಧವಿಲ್ಲ ಎಂದು ಹಿಂದೊಮ್ಮೆ ಪ್ರೀತಿ ಜಿಂಟಾ ಪತ್ರಕರ್ತರ ಕಿವಿಗೆ ಹೂವಿಟ್ಟಿದ್ದರು. ಈಗ ಬ್ರೆಟ್ ಲೀ ಮತ್ತು ಪ್ರೀತಿ ರಹಸ್ಯರಾತ್ರಿ ಕಳೆದಿದ್ದಾಗಿ ಸುದ್ದಿ.

  ಇವರಿಬ್ಬರೂ ಮೇ.24ರಂದು ಆಲೀವ್ ಎಂಬ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಳೆದಿದ್ದಾರೆ ಎನ್ನುತ್ತವೆ ಮೂಲಗಳು. ಈ ಸುದ್ದಿ ತಿಳಿದ ಚಿತ್ರರಂಗದ ಚಿತ್ರಗುಪ್ತರು ಕ್ಯಾಮೆರಾ ಸಮೇತ ರೆಸ್ಟೋರೆಂಟ್‌ಗೆ ದೌಡಾಯಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೆ ಹೋಟೆಲ್ ಸಿಬ್ಬಂದಿ ಇವರಿಬ್ಬರಿಗೂ ಸಂಜ್ಞೆ ಕೊಟ್ಟಾಗಿತ್ತು.

  ರೆಸ್ಟೋರೆಂಟ್ ಹಿಂಬಾಗಿಲಿನ ಮೂಲಕ ಪ್ರೀತಿ ಜಂಪ್ ಆಗಿದ್ದಾರೆ. ಚಿತ್ರಗುಪ್ತರು ಬರುವಷ್ಟರಲ್ಲಿ ಮುಂಬಾಗಿಲಿನ ಬಳಿ ಬ್ರೆಟ್ ಲೀ ನಿಂತಿದ್ದರಂತೆ. ಪ್ರೀತಿ ಜಿಂಟಾ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ ದೀಪಿಕಾ ಪಡುಕೋಣೆ ಜೊತೆ ಜೂಟಾಟ ಆಡುತ್ತಿದ್ದಂತಿದೆ ಬ್ರೆಟ್ ಲೀ. (ಏಜೆನ್ಸೀಸ್)

  English summary
  Actress Preity Zinta and Australian speedster Brett Lee have been denying having any relationship all this while but they seem to be finding tough to stay away from each other. The latest we hear is that they had a secret night-out recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X