For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ರಮ್ಯಾ ಸ್ಪರ್ಧೆ ನಿಜವೇ?

  By Rajendra
  |
  <ul id="pagination-digg"><li class="previous"><a href="/gossips/26-actress-ramya-break-up-with-her-boyfriend-aid0052.html">« Previous</a>

  ಅದೇನೆಂದರೆ ರಮ್ಯಾ ಮತ್ತು ಆಕೆಯ ಬಾಯ್‌ಫ್ರೆಂಡ್ ರಫೆಲ್ ನಡುವಿನ ಅಫೇರ್ ಮುಗಿದುಹೋಗಿದೆ. ರಫೆಲ್ ನಿಧಾನವಾಗಿ ಆಕೆಯಿಂದ ದೂರಾಗುತ್ತಿದ್ದಾನೆ. ಆತ ಡ್ರಿಂಕ್ಸ್ ಮಾಡದಂತೆ, ಸಿಗರೇಟು ಸೇದದಂತೆ ರಮ್ಯಾ ಕಟ್ಟುನಿಟ್ಟು ಮಾಡಿದ್ದಳು. ಇದರಿಂದ ಆತ ಬೇಸರಗೊಂಡು ತನ್ನ ದೇಶಕ್ಕೆ ವಾಪಸಾಗುತ್ತಿದ್ದಾನೆ ಎಂಬ ಸುದ್ದಿ ಕೇಳಿ ಬಂದಿದೆ.

  ಗಾಂಧಿನಗರದಲ್ಲಿ ಈ ಗುಸು ಗುಸು ಸುದ್ದಿ ಹುಟ್ಟಿಕೊಂಡ ಬೆನ್ನಿಗೇ ರಾಜ್ಯದ ಯುವ ಕಾಂಗ್ರೆಸ್ ಪಡಸಾಲೆಯಲ್ಲಿ ಮತ್ತೊಂದು ರೀತಿಯ ಮಾತು ಕೇಳಿ ಬರುತ್ತಿದೆ. ಏನಾದರೂ ಮಾಡಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂಬ ಆಸೆ ಹೊಂದಿರುವ ರಮ್ಯಾ ಆ ನಿಟ್ಟಿನಲ್ಲಿ ಈಗಾಗಲೆ ಕಾರ್ಯಾಚರಣೆಗೆ ಇಳಿದಿದ್ದಾರೆ.

  ನಟಿ ರಮ್ಯಾಗೆ ಹೆದರಿರುವ ಮಂಡ್ಯದ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಆಪರೇಶನ್ ಕಮಲಕ್ಕೊಳಗಾಗಿ ಇಡುಗಂಟು ಮಾಡಿಕೊಂಡು ಮನೆ ಸೇರುವ ಹುನ್ನಾರ ನಡೆಸಿದ್ದಾರೆ. ರಮ್ಯಾ ಮದುವೆಯ ಆಸೆಯನ್ನೂ ಬಿಟ್ಟು ರಾಜಕೀಯದತ್ತ ಗಮನ ಹರಿಸಿದ್ದಾರೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದ ಮಾತು. 'ಕಠಾರಿ ವೀರ' ಚಿತ್ರದ ನಿರ್ಮಾಪಕ ಮುನಿರತ್ನ ಪ್ರಕಾರ ಚಿತ್ರೀಕರಣ ನಡೆಯುತ್ತಿರುವ ಹೈದರಾಬಾದಿನ ರಾಮೋಜಿರಾವ್ ಸಿಟಿಯಲ್ಲಿ ರಮ್ಯಾ ಮತ್ತು ರಫೆಲ್ ಜೊತೆಯಾಗಿಯೇ ಇದ್ದಾರೆ.

  ಅವರಿಬ್ಬರ ನಡುವೆ ಸಂಬಂಧ ಜೊತೆಯಾಗಿಯೇ ಇದೆ. 2012ರ ಜನವರಿ ಮೊದಲ ವಾರದಲ್ಲಿ ಅವರಿಬ್ಬರೂ ಜೊತೆಯಾಗಿಯೇ ಪೋರ್ಚುಗಲ್‌ಗೆ ಹೋಗಲಿದ್ದಾರೆ. ಅಂತೆಕಂತೆಗಳ ಕಾಲಿ ಸುದ್ದಿ ಶುದ್ಧ ಸುಳ್ಳು ಎಂಬುದು ಮುನಿರತ್ನ ಮಾತು. ಈ ಎಲ್ಲ ಗೊಂದಲಗಳ ಬಗ್ಗೆ ರಮ್ಯಾ ಪ್ರತಿಕ್ರಿಯೆ ಕೇಳಲು ಕರೆ ಮಾಡಿದರೆ ಆಕೆ ನಾಟ್ ರೀಚಬಲ್! (ಕೃಪೆ: ಹಾಯ್ ಬೆಂಗಳೂರು)

  <ul id="pagination-digg"><li class="previous"><a href="/gossips/26-actress-ramya-break-up-with-her-boyfriend-aid0052.html">« Previous</a>
  English summary
  One more rumor doing rounds in Sandalwood is the actress Ramya probably contest to assembly elections from Mandya constitution. Earlier the actress contested for the state Youth Congress from booth number 3 in Shanthinagar, which comes under Bangalore Central Lok Sabha constituency.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X