»   » ತಾರೆ ಜಮೀನ್ ಪರ್ ಕದ್ದಿರುವ ಕಥೆಯೇ ?

ತಾರೆ ಜಮೀನ್ ಪರ್ ಕದ್ದಿರುವ ಕಥೆಯೇ ?

Subscribe to Filmibeat Kannada

ಅಮೀರ್ ಖಾನ್ ಅವರ ಚೊಚ್ಚಲ ನಿರ್ದೇಶನದ ಹಾಗೂ ಭಾರಿ ಜನಪ್ರಿಯ ಚಿತ್ರ 'ತಾರೆ ಜಮೀನ್ ಪರ್' ಕಥೆಯನ್ನು ತನ್ನ 'ವಂಡರ್ ಲ್ಯಾಂಡ್ ಆಫ್ ನಂಬರ್ಸ್ ' ಎನ್ನುವ ಪುಸ್ತಕದಿಂದ ಕದಿಯಲಾಗಿದೆ ಎಂದು ಖ್ಯಾತ ಬರಹಗಾರ್ತಿ, ಗಣಿತಜ್ಞೆ ಶಕುಂತಲಾ ದೇವಿ ಗಂಭೀರ ಆರೋಪ ಮಾಡಿದ್ದಾರೆ.

ಇದುವರೆಗೆ 22 ಪುಸ್ತಕಗಳನ್ನು ಬರೆದಿರುವ ಶಕುಂತಲಾ , 'ವಂಡರ್ ಲ್ಯಾಂಡ್ ಆಫ್ ನಂಬರ್ಸ್ ' ಎನ್ನುವ ಪುಸ್ತಕದಲ್ಲಿ 9 ವರ್ಷದ ಇಶಾನ್ ಅವಸ್ಥಿ ಎನ್ನುವ ಹುಡುಗಿ ಓದುವ ಸಮಸ್ಯೆ ಯಿಂದ ಬಳಲುತ್ತಿರುವ ಕಥೆಯ ಬಗ್ಗೆ ಹೇಳುತ್ತಾರೆ. ತಾರೆ ಜಮೀನ್ ಪರ್ ಚಿತ್ರದಲ್ಲಿ ಇದೇ ತರದ ಪಾತ್ರವನ್ನು ದರ್ಶಿಲ್ ಸಫಾರಿ ಎನ್ನುವ ಹುಡುಗ ಮಾಡಿದ್ದ. ಈ ಬಗ್ಗೆ ಮಾತನಾಡುತ್ತ ಚಿತ್ರದ ಎಲ್ಲ ಸನ್ನಿವೇಶಗಳನ್ನು ತನ್ನ ಪುಸ್ತಕದಿಂದ ಸಂದರ್ಭಕ್ಕೆ ಬೇಕಾದ ಹಾಗೆ ನಕಲು ಮಾಡಲಾಗಿದೆ ಎಂದು ದೂರಿದ್ದಾರೆ.

ನಾನು ಈ ಬಗ್ಗೆ ಅಮೀರ್ ಖಾನ್ ಅವರಿಂದ ಕ್ಷಮಾಪಣಾ ಪತ್ರ ನಿರೀಕ್ಷಿಸುತ್ತಿದ್ದೇನೆ. ಆದರೆ ಅಮೀರ್ ಖಾನ್ ಈ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದರು.ತಾರೆ ಜಮೀನ್ ಪರ ಚಿತ್ರ ಭಾರತದ ಪರವಾಗಿ ಆಸ್ಕರ್ ಚಿತ್ರಕ್ಕೆ ನಾಮಕರಣಗೊಂಡಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಗಾಗಿ ಚಿತ್ರವನ್ನು ಇಂಗ್ಲಿಷ್ ಗೆ ಡಬ್ ಮಾಡಲಾಗಿದೆ. ಆದರೆ ಅಮೀರ್ ಖಾನ್ ಮಾತ್ರ ತಾರೆ ಜಮೀನ್ ಪರ್ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada