ದೇವ್ ಚಿತ್ರದ ವಿರುದ್ಧ ಒಕ್ಕಲಿಗರ ಸಂಘ ತೀವ್ರ ಆಕ್ಷೇಪ
ಕನ್ನಡ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೇಲೆ ಒಕ್ಕಲಿಗರ ಮಹಾ ಸಭಾ ದೂರು ದಾಖಲಿಸಿದೆ. ಒಕ್ಕಲಿಗ ಸಮುದಾಯದ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಸಂಘ, ಲಂಕೇಶ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ (ಮಾ.26) ಬೆಳಗ್ಗೆ ದೂರು ದಾಖಲಿಸಿದೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ 'ದೇವ್' ಎಂಬ ಚಿತ್ರದ ಅಡಿಬರಹ 'ಸನ್ ಆಫ್ ಮುದ್ದೇಗೌಡ' ಎಂದಿದ್ದು ಒಕ್ಕಲಿಗ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಾಗೆಯೇ ಚಿತ್ರದ ಪೋಸ್ಟರ್‌ನಲ್ಲಿ ದಿಗಂತ್ ತಮ್ಮ ಪ್ಯಾಂಟನ್ನು ಬಿಚ್ಚಿ ಅಸಭ್ಯವಾಗಿ ಪೋಸು ನೀಡಿದ್ದಾರೆ.
ಅವರ ಈ ವಿಚಿತ್ರ ಭಂಗಿಯ ಕೆಳಗೆ "ಸನ್ ಆಫ್ ಮುದ್ದೇಗೌಡ" ಎಂದು ಬರೆದು ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಸಂಘ ಆರೋಪಿಸಿದೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ದೂರನ್ನು ಸ್ವೀಕರಿಸಿದ್ದು ಮುಂದಿನ ಕ್ರಮಕ್ಕಾಗಿ ಪರಿಶೀಲಿಸುತ್ತಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
One of the representation of Vokkaligara Maha Sabha has files a complaint against Indrajith Lankesh at Karnataka Film Chamber of Commerce today morning. Director is facing allegations of misusing Gowda Community by using the name Mudde Gowda in the film tittle.


Click it and Unblock the Notifications











