»   » ಹೇಮಾಮಾಲಿನಿ ಹೇಳಿಕೆ : ಉತ್ತರ ಭಾರತದವರಿಗೆ ಸಿಟ್ಟು !

ಹೇಮಾಮಾಲಿನಿ ಹೇಳಿಕೆ : ಉತ್ತರ ಭಾರತದವರಿಗೆ ಸಿಟ್ಟು !

Posted By:
Subscribe to Filmibeat Kannada


ಮುಂಬಯಿ : ನಟಿ ಮತ್ತು ಸಂಸದೆ ಹೇಮಾಮಾಲಿನಿ ಹೇಳಿಕೆಯಿಂದ ಉತ್ತರ ಭಾರತೀಯರು ಕೆರಳಿದ್ದಾರೆ. ಹೇಮಾ ಮಾಲಿನಿ ಕೂಡಲೇ ಕ್ಷಮೆ ಯಾಚಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಾಂದರಲ್ಲಿ ಹೇಮಾಮಾಲಿನಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮುಂಬಯಿಯಲ್ಲಿ ಉತ್ತರ ಭಾರತೀಯರಿಗೆ ಸಮಸ್ಯೆಗಳಿದ್ದರೆ, ಅವರು ಇಲ್ಲಿಂದ ಹೋಗಬಹುದು ಎಂದು ಹೇಮಾಮಾಲಿನಿ ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಹುಸೇನ್‌ ದಲ್ವಾಯಿ, ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಹೇಮಾಮಾಲಿನಿ ತಮ್ಮ ಸ್ಥಾನದ ಘನತೆಯನ್ನು ಮರೆತಿದ್ದಾರೆ. ಮುಂಬಯಿಯಲ್ಲಿ ಉತ್ತರ ಭಾರತೀಯರ ಸಂಖ್ಯೆಯೇ ಹೆಚ್ಚು. ವಲಸಿಗರ ಮನನೋಯಿಸುವ ಹೇಳಿಕೆಗಳನ್ನು ಅವರು ನೀಡಬಾರದು ಎಂದು ಆಗ್ರಹಿಸಿದ್ದಾರೆ.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada