»   » ಅಂದು ಪ್ರಿಯಾಂಕ, ಇಂದು ಶ್ರೀದೇವಿ: ಈತನದು ಕೃಷ್ಣಲೀಲೆ !

ಅಂದು ಪ್ರಿಯಾಂಕ, ಇಂದು ಶ್ರೀದೇವಿ: ಈತನದು ಕೃಷ್ಣಲೀಲೆ !

Subscribe to Filmibeat Kannada

ಚೆನ್ನೈ: ಹಿಂದೊಮ್ಮೆ ದೆಹಲಿಯ ಉಚ್ಛ ನ್ಯಾಯಾಲಯದಲ್ಲಿ ನಾನು ಪ್ರಿಯಾಂಕಾ ಗಾಂಧಿಯನ್ನು ಮದುವೆಯಾಗಿರುವೆ ಎಂದು ಹೇಳಿದ ವ್ಯಕ್ತಿ ನೆನಪಿರಬಹುದಲ್ಲವೇ? ಅದೇ ವ್ಯಕ್ತಿ, ಈಗ ಬಾಲಿವುಡ್‌ ನಟಿ ಶ್ರೀದೇವಿಯನ್ನು ವರಿಸಿದ್ದೆ ಎಂದು ಹೇಳುತ್ತಿದ್ದಾನೆ !

ಈತನ ಹೆಸರು ರಾಮಕೃಷ್ಣ ಗೌಡ. ಈ ಮುನ್ನ ಪ್ರಿಯಾಂಕ ಗಾಂಧಿಯಾಂದಿಗೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರ್ಟು ಮೆಟ್ಟಿಲು ಹತ್ತಿದ್ದ ರಾಮಕೃಷ್ಣ , ಈಗ ನಟಿ ಶ್ರೀದೇವಿಯಾಂದಿಗೆ ಸಂಸಾರ ನಡೆಸಲು ಮುಂದಾಗಿದ್ದಾನೆ. ಶ್ರೀದೇವಿಯಾಂದಿಗೆ ನನ್ನ ಮದುವೆಯಾಗಿತ್ತು . ಕೆಲಕಾಲ ನಾವಿಬ್ಬರೂ ಸಂಸಾರವನ್ನೂ ನಡೆಸಿದ್ದೆವು ಎನ್ನುತ್ತಿದ್ದಾನೆ ಈ ಕೃಷ್ಣ ಪರಮಾತ್ಮ.

ರಾಮಕೃಷ್ಣ ಗೌಡ ಹೇಳುತ್ತಿರುವುದಿಷ್ಟು :

1992ರ ಜನವರಿಯಲ್ಲಿ ಶ್ರೀದೇವಿಯನ್ನು ಮದುವೆಯಾಗಿದ್ದೆ. ಅದೇ ವರ್ಷ ಮಾರ್ಚ್‌ ತಿಂಗಳವರೆಗೆ ಮಾತ್ರ ಶ್ರೀದೇವಿ ನನ್ನ ಜೊತೆಗಿದ್ದಳು. ಪ್ರಸ್ತುತ ನನ್ನೊಟ್ಟಿಗೆ ಶ್ರೀದೇವಿ ಸಂಸಾರ ಮಾಡಲು ನ್ಯಾಯಾಲಯ ಅನುವು ಮಾಡಿಕೊಡಬೇಕು.

ರಾಮಕೃಷ್ಣನ ಅರ್ಜಿಯನ್ನು ಕುಟುಂಬ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ.

ಅದಿರಲಿ, ಈ ರಾಮಕೃಷ್ಣ ಗೌಡನ ಮುಂದಿನ ಹೆಂಡತಿ ಯಾರಿರಬಹುದು? ಶಿವಶಿವಾ, ಒಂದು ಸಾಲದೆಂದು ಹೆಸರಿನಲ್ಲಿ ಇಬ್ಬರು ದೇವರ ಹೆಸರನ್ನು ಹೊಂದಿರುವ ಈತನದು ಅದೆಂಥ ಲೀಲೆಯಯ್ಯಾ !?

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada