»   » ನಾಗಾಭರಣ ಬಂಧನಕ್ಕೆ ವಾರೆಂಟ್‌ ನಾಗಾಭರಣ ಬಂಧನಕ್ಕೆ ವಾರೆಂಟ್‌

ನಾಗಾಭರಣ ಬಂಧನಕ್ಕೆ ವಾರೆಂಟ್‌ ನಾಗಾಭರಣ ಬಂಧನಕ್ಕೆ ವಾರೆಂಟ್‌

Posted By:
Subscribe to Filmibeat Kannada

ಬೆಂಗಳೂರು : ಕಾಫಿರೈಟ್‌ ನಿಯಮಗಳನ್ನು ಉಲ್ಲಂಘಿಸಿರುವ ನಿರ್ದೇಶಕ ಟಿ.ಎಸ್‌.ನಾಗಾಭರಣ ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ನಟ ಮತ್ತು ನಿರ್ದೇಶಕ ಕೀರ್ತಿರಾಜ್‌ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಾಗಾಭರಣ ಅವರ ಧೋರಣೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ನ್ಯಾಯಕೋರಿ ಸಿಜೆಎಂ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ನಾಗಾಭರಣ ಅವರ ಬಂಧನಕ್ಕೆ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ ಎಂದು ಕೀರ್ತಿರಾಜ್‌ ತಿಳಿಸಿದ್ದಾರೆ.

ಏನಿದು ಗೊಂದಲ-ಕಿತಾಪತಿ ? : ಈ ಹಿಂದೆ ಚಲನಚಿತ್ರ ಸಹಾಯಕ ನಿರ್ದೇಶಕರಾಗಿದ್ದ ಆರ್‌.ಕೀರ್ತಿರಾಜ್‌, 1957ರಲ್ಲಿ ಎಂ.ಗೋಪಾಲ ಕೃಷ್ಣ ಅಡಿಗರಿಂದ ‘ಅನಾಥೆ’ ಕಾದಂಬರಿಯ ಹಕ್ಕುಗಳನ್ನು ಖರೀದಿಸಿದ್ದರು. ಕಾದಂಬರಿಯನ್ನು ಚಲನಚಿತ್ರ ಮಾಡುವ ಅವರ ಪ್ರಯತ್ನ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಆದರೆ ಈ ಮಧ್ಯೆ, ಅಡಿಗರ ಪತ್ನಿಯಿಂದ ಈ ಕಾದಂಬರಿಯ ಹಕ್ಕುಗಳನ್ನು ನಾಗಾಭರಣ ಖರೀದಿಸಿದ್ದರು. ಉದಯ ಟೀವಿಯಲ್ಲಿ ಅದು ‘ಓ ನನ್ನ ಬೆಳಕೆ’ ಶೀರ್ಷಿಕೆಯಡಿಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಯಿತು.

ಈ ಪ್ರಕ್ರಿಯೆಗಳಿಂದ ಕೆರಳಿರುವ ಕೀರ್ತಿರಾಜ್‌, ನಾಗಾಭರಣ ಅವರ ವಿರುದ್ಧ ಸಿವಿಲ್‌ ಹಾಗೂ ಕ್ರಿಮಿನಲ್‌ ಮೊಕದ್ದಮೆ ಹೂಡಿ, ಒಂದು ಕೋಟಿ ರೂ. ಪರಿಹಾರ ಕೋರಿದ್ದಾರೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada