»   » ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ : ಕೆಎಫ್‌ಸಿಸಿ ಹೆಸರು ಬದಲು ?

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ : ಕೆಎಫ್‌ಸಿಸಿ ಹೆಸರು ಬದಲು ?

Posted By:
Subscribe to Filmibeat Kannada

ಬೆಂಗಳೂರು : ಪ್ರದರ್ಶಕರು ಹಾಗೂ ಚಿತ್ರೋದ್ಯಮದ ಸಮರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಸ್ತಿತ್ವ ಅತಂತ್ರವಾಗುತ್ತಿದ್ದು , ಮಂಡಳಿಯ ರೂಪುರೇಷೆಯನ್ನೇ ಬದಲಿಸಲು ಕನ್ನಡ ಚಿತ್ರೋದ್ಯಮ ಮುಂದಾಗಿದೆ.

ಚಿತ್ರೋದ್ಯಮದ ಪ್ರತಿಭಟನೆ ನಂತರ ಗುರುವಾರ(ನ.25) ಸಂಜೆ ಸಭೆ ನಡೆಸಿದ ಚಿತ್ರೋದ್ಯಮದ ಪ್ರಮುಖರು ಮೂರು ನಿರ್ಣಯಗಳನ್ನು ಪ್ರಕಟಿಸಿದ್ದಾರೆ. ಪರಭಾಷಾ ಚಿತ್ರಗಳ ಪ್ರದರ್ಶನ, ಬಿಡುಗಡೆ, ಪ್ರಿಂಟ್‌ ನಿರ್ಬಂಧ ಸೇರಿದಂತೆ ಅನೇಕ ವಿಷಯಗಳಲ್ಲಿ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಪರವಾಗಿ ನಿಂತಿಲ್ಲ ಎಂದು ದೂರಿರುವ ಚಿತ್ರೋದ್ಯಮದ ಗಣ್ಯರು, ಶುಕ್ರವಾರ(ನ.26) ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಮಂಡಳಿಯ ಹೆಸರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಬದಲಿಸಿ, ಹೊಸ ರೂಪ ನೀಡುವುದು ಪ್ರತಿಭಟನಾಕಾರರ ಉದ್ದೇಶ. ಪರಭಾಷಾ ಚಿತ್ರಗಳನ್ನು ನಿರ್ಬಂಧಿಸುವ ಗಡುವಿನವರೆಗೆ ಕಾದು ನೋಡುವ ನೀತಿಯನ್ನು ಚಿತ್ರೋದ್ಯಮ ಅನುಸರಿಸಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಿ ರಾಜ್ಯದೆಲ್ಲೆಡೆ ವಿಸ್ತರಿಸುವುದು, ನ.29 ರಂದು ಚಿತ್ರರಂಗದ ಬೃಹತ್‌ ಸಭೆ ನಡೆಸುವ ಕಾರ್ಯತಂತ್ರವನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಪ್ರತಿಭಟನೆಯ ಕಾವಿನ ನಡುವೆಯೂ ವೀರ್‌ಝಾರಾ ಪ್ರದರ್ಶನ ನಗರದಲ್ಲಿ ಎಂದಿನಂತೆಯೇ ಮುಂದುವರೆದಿದೆ. ಶುಕ್ರವಾರದಿಂದ ಮತ್ತಷ್ಟು ಹೊಸ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವ ಪ್ರಯತ್ನವನ್ನು ಚಲನಚಿತ್ರ ಪ್ರದರ್ಶಕರು ಮುಂದೂಡಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada