»   » ಚಿತ್ರೋದ್ಯಮದ ಪ್ರತಿಭಟನೆ: ಕಳ್ಳರಿಗೆ ಸುಗ್ಗಿ, ಖ್ಯಾತ ನಟರಿಗೆ ಬಂಧನ!

ಚಿತ್ರೋದ್ಯಮದ ಪ್ರತಿಭಟನೆ: ಕಳ್ಳರಿಗೆ ಸುಗ್ಗಿ, ಖ್ಯಾತ ನಟರಿಗೆ ಬಂಧನ!

Subscribe to Filmibeat Kannada

ಬೆಂಗಳೂರು : ವಿಧಾನಸೌಧದ ಮುಂಭಾಗದಲ್ಲಿ ನ.25ರ ಗುರುವಾರ ನಡೆದ ಕನ್ನಡ ಚಿತ್ರೋದ್ಯಮದ ಮೆರವಣಿಗೆ ಕನ್ನಡಿಗರ ಸಂಭ್ರಮವಷ್ಟೇ ಆಗಿರಲಿಲ್ಲ , ಕಳ್ಳರಿಗೆ ಸುಗ್ಗಿಯೂ ಆಗಿತ್ತು .

ಒಂದೆಡೆ ಜನಸಾಗರದಿಂದ ಪ್ರತಿಭಟನೆ ನಡೆಯುತ್ತಿದ್ದರೆ ಇನ್ನೊಂದೆಡೆ ನೂಕುನುಗ್ಗಲಿನ ನಡುವೆ ಕಳ್ಳರು ತಮ್ಮ ಚಾತುರ್ಯ ಪ್ರದರ್ಶಿಸುತ್ತಿದ್ದರು. ಅನೇಕರ ಜೇಬುಗಳು ಖಾಲಿಯಾದವು. ಕೈಗಡಿಯಾರಗಳು ಕೈಯಿಂದ ಜಾರಿ ಮತ್ತ್ಯಾರ ಕೈಗೋ ಸೇರಿದವು. ಸುದ್ದಿಯಾದದ್ದು ಮಾತ್ರ ಮೊಬೈಲ್‌ ಫೋನ್‌ ಕಳ್ಳತನ. ಇದು ಮಾಹಿತಿ ಯುಗವಯ್ಯಾ!

ಕನಿಷ್ಠ ಮೂವತ್ತು ಮೊಬೈಲ್‌ ಫೋನ್‌ಗಳು ಪ್ರತಿಭಟನೆ ಸಂದರ್ಭದಲ್ಲಿ ಕಳುವಾಗಿವೆ ಅಥವಾ ಕಾಣೆಯಾಗಿವೆ. ಸೆಲ್‌ಫೋನ್‌ ಕಳಕೊಂಡವರಲ್ಲಿ ಹಿರಿಯ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಕೂಡ ಸೇರಿದ್ದಾರೆ.

ಬಂಧನದಲ್ಲಿ ವಿಷ್ಣು , ಉಪ್ಪಿ , ಶಿವು!

ಅಧಿಕೃತ ಬಂಧನವಲ್ಲವಾದರೂ, ಖ್ಯಾತ ನಟರು ಪೊಲೀಸ್‌ ಸರ್ಪಗಾವಲಲ್ಲಿ ಇದ್ದುದಂತೂ ಹೌದು. ಜನಸಾಗರದ ಅಬ್ಬರ ಮೇರೆ ಮೀರಿದಾಗ ವಿಷ್ಣುವರ್ಧನ್‌, ಉಪೇಂದ್ರ, ರವಿಚಂದ್ರನ್‌, ಶಿವರಾಜ್‌ಕುಮಾರ್‌, ದರ್ಶನ್‌, ಸುದೀಪ್‌ ಮುಂತಾದವರನ್ನು ಪೊಲೀಸರು ತಮ್ಮ ನಡುವೆ ಇರಿಸಿಕೊಂಡರು. ಸುಮಾರು 1 ಗಂಟೆ ಕಾಲ ಈ ನಟರು ಪೊಲೀಸರೊಂದಿಗೆ ಹೊಯ್ಸಳ ವಾಹನದಲ್ಲಿ ಇರಬೇಕಾಯಿತು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada