»   » ಗೋವಾ ಚಿತ್ರೋತ್ಸವ : ಅವರಿಗೆ ಸನ್ಮಾನ ನಮಗೆ ಅವಮಾನ

ಗೋವಾ ಚಿತ್ರೋತ್ಸವ : ಅವರಿಗೆ ಸನ್ಮಾನ ನಮಗೆ ಅವಮಾನ

Posted By:
Subscribe to Filmibeat Kannada

ಬೆಂಗಳೂರು : ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 36ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಕನ್ನಡಕ್ಕೆ ಅವಮಾನವೆಸಗಲಾಗಿದೆ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯಮಂಡಳಿ ದೂರಿದೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರ ವಿವಾದಕ್ಕೆ ಕಾರಣವಾಗಿದೆ. ಸಾಕ್ಷ್ಯಚಿತ್ರದಲ್ಲಿ ತಮಿಳಿನ ಶಿವಾಜಿ ಗಣೇಶನ್‌, ಎಂಜಿಆರ್‌, ತೆಲುಗಿನ ಅಕ್ಕಿನೇನಿ ನಾಗೇಶ್ವರರಾವ್‌, ಎನ್‌ಟಿಆರ್‌, ಚಿರಂಜೀವಿ ಮತ್ತಿತರ ನಟರಿಗೆ ಸಂಬಂಧಿಸಿದಂತೆ ಚಿತ್ರ ತುಣುಕುಗಳನ್ನು ಪ್ರಸಾರ ಮಾಡಲಾಯಿತು. ಆದರೆ ಕನ್ನಡ ಚಿತ್ರರಂಗದ ಡಾ.ರಾಜ್‌ಕುಮಾರ್‌ , ವಿಷ್ಣುವರ್ಧನ್‌ ಬಗ್ಗೆ ಚಕಾರವಿರಲಿಲ್ಲ.

ಈ ಚಿತ್ರೋತ್ಸವದಲ್ಲಿ ನಾಡಿನ ಹೆಮ್ಮೆಯ ನಟಿ ತಾರಾ ಪಾಲ್ಗೊಳ್ಳುವ ಸಂಗತಿ ಕನ್ನಡಿಗರಿಗೆ ಹೆಮ್ಮೆ ತಂದಿತ್ತು. ಆದರೆ ಅಲ್ಲಿ ಕನ್ನಡಕ್ಕೆ ಮತ್ತೊಂದು ರೀತಿಯ ಅವಮಾನವಾಗಿದೆ ಎಂದು ಮಂಡಳಿ ದೂರಿದೆ.

ಈ ಸಂಬಂಧ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada