ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್: ದರ್ಶನ್ ಕಿಡಿಕಿಡಿ

ನಿಜವಾಗಿಯೂ ನಡೆದಿರುವುದೇನು ಎಂಬುದನ್ನು ದರ್ಶನ್ ಹೇಳಿದ್ದಾರೆ. "ಸಂತೋಷ ಕೂಟ ನಡೆದ ಮೇಲೆ ಒಬ್ಬ ವ್ಯಕ್ತಿಯ ಕಾಲಿಗೆ ಕೊಂಚ ಪೆಟ್ಟಾಗಿರುವುದು ಹೌದು. ಅವರು ನನ್ನ ಸಹೋದರ ದಿನಕರ್ ಜತೆ ಸಾರಥಿ ಚಿತ್ರದ ಸಂಭ್ರಮ ಆಚರಣೆಗೆಂದು ಮೈಸೂರಿನ ಬನ್ನೂರು ಮತ್ತು ಮಳವಳ್ಳಿ ಚಿತ್ರಮಂದಿರಕ್ಕೆ ಮಿನಿ ಬಸ್ಸಿನಲ್ಲಿ ಬಂದವರು. ವಾಪಸ್ ಹೊರಟಾಗ ನಾವೆಲ್ಲ ಬಸ್ ಹತ್ತಿ ಕುಳಿತ್ತಿದ್ದೇವೆ. ಆದರೆ ಅವರು ಕೆಳಗೆ, ಬಸ್ ಹಿಂದೆ ನಿಂತಿದ್ದರು.
ಚಾಲಕ ವಾಹನವನ್ನು ರಿವರ್ಸ್ ಗೇರ್ ನಲ್ಲಿ ಚಲಿಸುತ್ತಿದ್ದಾಗ ಅಲ್ಲೇ ನಿಂತಿದ್ದ ಆ ವ್ಯಕ್ತಿಯ ಕಾಲ್ಬೆರಳುಗಳ ಮೇಲೆ ಹರಿದಿತ್ತು. ಗೊತ್ತಿಲ್ಲದೇ ಆದ ಪ್ರಮಾದವಾದರೂ ತಕ್ಷಣ ನಾವೆಲ್ಲ ಅವರನ್ನು ಆಸ್ಪತ್ರೆಗೆ ಸೇರಿಸಿ, ಉಪಚರಿಸಿ, ನಂತರವೇ ಹಿಂತಿರುಗಿದ್ದೇವೆ. ಮಾಧ್ಯಮಗಳಿಗೆ ಅದ್ಯಾರು ತಪ್ಪು ಸುದ್ದಿ ಮುಟ್ಟಿಸಿದರೋ? ಸತ್ಯಾಸತ್ಯತೆಯನ್ನು ತಿಳಿಯದೇ ಮಾಧ್ಯಮಗಳೇಕೆ ಅದನ್ನು ಪ್ರಸಾರ ಮಾಡಿವೆ? ಎಂದು ಪ್ರಶ್ನಿಸಿದ್ದಾರೆ.
English summary
Challenging Star Darshan got angry for media's slap breaking news. He told media that what was happened there.


Click it and Unblock the Notifications