ದರ್ಶನ್ ಚಿಂಗಾರಿ ಚಿತ್ರದಿಂದ ಡೈಸಿ ಶಾಗೆ ಗೇಟ್ ಪಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಚಿಂಗಾರಿ' ಚಿತ್ರದ ನಾಯಕಿ ಡೈಸಿ ಶಾಗೆ ಗೇಟ್ ಪಾಸ್ ನೀಡಲಾಗಿದೆ. ದೀಪಿಕಾ ಸ್ಥಾನಕ್ಕೆ ಬೆಂಗಳೂರು ರೂಪದರ್ಶಿ ದೀಪಿಕಾ ಕಾಮಯ್ಯ ಆಗಮಿಸಿದ್ದಾರೆ. ಡೈಸಿ ಶಾಗೆ ಅಭಿನಯದ ಗಂಧಗಾಳಿ ಗೊತ್ತಿಲ್ಲ ಎಂಬುದು ಚಿಂಗಾರಿ ಚಿತ್ರತಂಡದ ಆರೋಪ.
ಚಿತ್ರದಿಂದ ಡೈಸಿ ಶಾರನ್ನು ಕೈಬಿಡಲಾಗಿದೆ ಎಂದು ನಿರ್ದೇಶಕರು ತಿಳಿಸಿದರು. ಇದು ನನಗೆ ಸವಾಲಿನ ಪಾತ್ರವಾದ ಕಾರಣ ಸ್ವೀಕರಿಸಿದ್ದೇನೆ. ಡೈಸಿ ಅಭಿನಯದ ಬಗ್ಗೆ ಚಿತ್ರತಂಡಕ್ಕೆ ಸಮಾಧಾನವಿರಲಿಲ್ಲ. ಹಾಗಾಗಿ ಆಕೆಯನ್ನು ಕೈಬಿಟ್ಟಿದ್ದಾರೆ. ಈ ಅವಕಾಶ ತಮಗೆ ಸಿಕ್ಕಿದ್ದಕ್ಕೆ ಸಂತಸವಾಗಿದೆ ಎಂದಿದ್ದಾರೆ ದೀಪಿಕಾ.
ಈಗಾಗಲೆ ತಮಿಳಿನ ಒಂದು ಚಿತ್ರದಲ್ಲಿ ದೀಪಿಕಾ ಅಭಿನಯಿಸಿದ್ದಾರೆ. ಈಗ ದರ್ಶನ್ ಜೊತೆ ಅವಕಾಶ ಸಿಕ್ಕಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ಚಿಂಗಾರಿ ಚಿತ್ರ ಮಾನವ ಕಳ್ಳಸಾಗಣೆ ಬಗ್ಗೆ ಬೆಳಕು ಚೆಲ್ಲುತ್ತದೆ. ಚಿತ್ರದಲ್ಲಿ ಪಾತ್ರ ಪ್ರಬಲವಾಗಿದೆ ಎಂದಿದ್ದಾರೆ ದೀಪಿಕಾ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Actress Deepika Kamaiah has replaced actress Daisy Shah in Challenging star Darshan's upcoming movie Chingari. The Bangalore model has revealed that the film unit was not happy with Daisy's performance. She says that she suits the role of Darsha's love interest in the movie better.


Click it and Unblock the Notifications











