ಮರ್ಡರ್ 2 ನಲ್ಲಿ ವೇಶ್ಯೆಯಂತೆ ಬಿಂಬಿಸಿದ್ದಕ್ಕೆ ಪಿಂಕಿ ಗರಮ್

ಅನುಮತಿಯಿಲ್ಲದೆ ತನ್ನ ಹೆಸರು ಬಳಸಿ ಮಸಿ ಬಳಿದಿರುವ ಮಹೇಶ್ ಭಟ್ ಬಳಗದ ಮರ್ಡರ್ 2 ಚಿತ್ರತಂಡಕ್ಕೆ ಪಿಂಕಿ ಲೀಗಲ್ ನೋಟಿಸ್ ಕಳಿಸಿದ್ದಾಳೆ. ನಾನು ವೇಶ್ಯೆಯಲ್ಲ. ಉತ್ತಮ ಸಂಸ್ಕಾರವಂತ ಕುಟುಂಬದಿಂದ ಬಂದವಳು. ಸರ್ಕಾರದ ಉನ್ನತ ಹುದ್ದೆಗಳಲ್ಲಿ ನನ್ನ ಪೋಷಕರು ಕರ್ತವ್ಯ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಹೇಳಲಾಗಿದೆ ಇದರಿಂದ ಅನಾಮಿಕ ಕರೆಗಳು ನನ್ನ ಬೆನ್ನ ಹತ್ತಿವೆ. ಮಾನಸಿಕವಾಗಿ ನನ್ನನ್ನು ಚಿತ್ರದ ದೃಶ್ಯ ಕೊಲ್ಲುತ್ತಿದೆ ಎಂದು ಪಿಂಕಿ ಗೋಳು ತೋಡಿಕೊಂಡಿದ್ದಾಳೆ.
ಇಷ್ಟಕ್ಕೂ ಏನಿದೆ ಆ ದೃಶ್ಯದಲ್ಲಿ?: ಪಿಂಪ್ ಒಬ್ಬ ಹುಡುಗಿಯರ ಫೋಟೋಗಳನ್ನು ತೋರಿಸುತ್ತಾ ಇವರು ಹೈ ಕ್ಲಾಸ್ ವೇಶ್ಯೆಯರು ಎಂದು ಇಮ್ರಾನ್ ಹಶ್ಮಿಗೆ ಹೇಳುತ್ತಾನೆ. ಈ ಫೋಟೋಗಳಲ್ಲಿ ನನ್ನ ಭಾವಚಿತ್ರವೂ ಎದ್ದು ಕಾಣುತ್ತದೆ. ನಂತರ ಈ ಹೈಟೆಕ್ ವೇಶ್ಯೆಯರು ಈಗ ಕಣ್ಮರೆಯಾಗಿದ್ದಾರೆ ಎಂದು ಹೇಳುತ್ತಾನೆ.
ಚಿತ್ರದಲ್ಲಿ ನನ್ನ ಒಪ್ಪಿಗೆ ಇಲ್ಲದೆ ಫೋಟೋ ಬಳಸಿರುವುದು ತಪ್ಪಲ್ಲ. ಆದರೆ, ಅದನ್ನು ಬಳಸಿದ ರೀತಿ ತಪ್ಪು. ಹೈ ಕ್ಲಾಸ್ ವೇಶ್ಯಾವಾಟಿಕೆ ಬಗ್ಗೆ ಮಾತನಾಡುತ್ತಾ ನನ್ನ ಫೋಟೋ ತೋರಿಸಿದರೆ ಏನು ಅರ್ಥ. ನನಗಂತೂ ನೆನಸಿಕೊಂಡರೆ ತಲೆ ಚಕ್ಕರ್ ಬರುತ್ತದೆ ಎಂದು ಪಿಂಕಿ ಹೇಳುತ್ತಾರೆ.


Click it and Unblock the Notifications











