»   » ನಟಿ ನಯನತಾರಾ ಹೊಸ ಬಾಯ್‌ಫ್ರೆಂಡ್ ಆರ್ಯ

ನಟಿ ನಯನತಾರಾ ಹೊಸ ಬಾಯ್‌ಫ್ರೆಂಡ್ ಆರ್ಯ

Posted By:
Subscribe to Filmibeat Kannada

ತನ್ನ ಹಳೆ ಬಾಯ್‌ಫ್ರೆಂಡ್ ಪ್ರಭುದೇವ ಜೊತೆ ಟೂ ಬಿಟ್ಟ ಬಳಿಕ ನಯನತಾರಾ ಜೋಡಿ ಇಲ್ಲದ ಒಂಟಿ ಹಕ್ಕಿಯಂತೆ ಮೂಕ ವೇದನೆ ಅನುಭವಿಸುತ್ತಿದ್ದರು. ಇನ್ನೇನು ಮದುವೆಗೆ ಗಟ್ಟಿಮೇಳ ಮೊಳಗುವುದರಲ್ಲಿತ್ತು. ಅಷ್ಟರಲ್ಲಾಗಲೆ ಇಬ್ಬರೂ ನಾನೊಂದು ತೀರ ನೀನೊಂದು ಎಂಬಂತಾಗಿದ್ದರು.

ಈಗ ನಯನತಾರಾ ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಒಂಟಿ ಹಕ್ಕಿಗೆ ಜೋಡಿ ಸಿಕ್ಕಿದೆ. ತಮಿಳು ಚಿತ್ರರಂಗ ಯಂಗ್ ಹೀರೋ ಆರ್ಯಗೆ ನಯನಿ ಹತ್ತಿರವಾಗಿದ್ದಾರೆ. ಇವರಿಬ್ಬರ ನಡುವೆ ಈಗ ಹೊಸ ಸ್ನೇಹಗೀತೆ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂಲತಃ ಮಲಯಾಳಿಯಾದ ಆರ್ಯ ಹೆಚ್ಚಾಗಿ ಮಿಂಚಿದ್ದು ತಮಿಳಿನಲ್ಲಿ. ಇತ್ತೀಚೆಗೆ ಆರ್ಯ ಮನೆಗೆ ಭೇಟಿ ನೀಡಿದ ನಯನಿ ಅಲ್ಲಿ ದೀಪ ಹೊತ್ತಿಸಿ ಬಂದಿದ್ದಾರೆ. ಅಂದರೆ ಅಂದು ಹೋಳಿ ಹಬ್ಬ. ತಮ್ಮ ಸಂಬಂಧವೂ ಕಲರ್‌ಫುಲ್ ಆಗಿರಲಿ ಎಂಬ ಉದ್ದೇಶ ಅವರದು. ಇನ್ನೊಂದು ಕಡೆ ಆರ್ಯನಿಗೆ ತನ್ನ ಗರ್ಲ್ ಫ್ರೆಂಡ್ ಅಮಲ ಕೈಕೊಟ್ಟಿದ್ದಾರೆ. (ಏಜೆನ್ಸೀಸ್)

English summary
The buzz in K'town is the new relationship between Arya and Nayanthara. According to sources, this new relationship is caused for the break of Arya - Amala affair.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X