ಪ್ರಕಾಶ್ ರೈ, ಪೋನಿ ತಣ್ಣಗಿರಲಿ; ಲಲಿತಾ ಕುಮಾರಿ
"ಪ್ರಕಾಶ್ ರೈ ಮತ್ತು ಆತನ ಕೈಹಿಡಿದಿರುವ ಪೋನಿ ವರ್ಮಾ ಬಾಳು ಹಸನಾಗಿರಲಿ" ಎಂದು ಪ್ರಕಾಶ್ ರೈ ಮಾಜಿ ಪತ್ನಿ ಲಲಿತಾ ಕುಮಾರಿ ಅವರು ಹಾರೈಸಿದ್ದಾರೆ. ಇದೇ ಮೊದಲ ಬಾರಿಗೆ ಲಲಿತಾ ಕುಮಾರಿ ಮಾಧ್ಯಮಗಳಿಗೆ ಪ್ರಕಾಶ್ ರೈ ಕುರಿತು ಮಾತನಾಡಿದ್ದಾರೆ.
ಕಳೆದೆರಡು ವರ್ಷಗಳಿಂದ ಬಾಲಿವುಡ್ ನ ಖ್ಯಾತ ನೃತ್ಯನಿರ್ದೇಶಕಿ ಪೋನಿ ವರ್ಮಾರನ್ನು ಪ್ರಕಾಶ್ ರೈ ಪ್ರೀತಿಸುತ್ತಿದ್ದರು. ಮೊದಲ ಪತ್ನಿಯೊಂದಿಗಿನ ದಾಂಪತ್ಯದಲ್ಲಿ ಬಿರುಕು ಮೂಡಲು ಇದು ಒಂದು ಕಾರಣ ಎನ್ನಲಾಗಿತ್ತು. ವಿವಾಹ ವಿಚ್ಛೇದನದ ಬಳಿಕ ಪ್ರಕಾಶ್ ರೈ ಮಕ್ಕಳ ಪೋಷಣೆಯ ಜವಾಬ್ದಾರಿ ಲಲಿತಾ ಕುಮಾರಿ ಅವರು ವಹಿಸಲಾಗಿದೆ.
ಇನ್ನು ಮುಂದೆ ನನ್ನ ಬದುಕಿನಲ್ಲಿ ಮಕ್ಕಳೇ ನನ್ನ ಸರ್ವಸ್ವ ಎಂದು ಲಲಿತಾ ಕುಮಾರ್ ಹೇಳಿದ್ದಾರೆ. ವಿವಾಹ ವಿಚ್ಛೇದನದ ಬಳಿಕ ನಟನೆಗೆ ವಿದಾಯ ಹೇಳಿದ್ದ ಲಲಿತಾ ಕುಮಾರಿ ಇದೀಗ ಮತ್ತೆ ಬೆಳ್ಳೆತೆರೆಗೆ ಬಂದಿದ್ದಾರೆ. ಈ ಹಿಂದೆ ತಮಿಳಿನ ಖ್ಯಾತ ಹಾಸ್ಯ ನಟ ಗೌಂಡಮಣಿ ಜೊತೆ ಲಲಿತಾ ಕುಮಾರಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಸತ್ಯರಾಜ್ ಅವರ 'ಮುರಿಯಾದಿ' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.


Click it and Unblock the Notifications











