ಚೊಚ್ಚಲ ಕಂದನ ನಿರೀಕ್ಷೆಯಲಿ ಸಾಗರಕನ್ಯೆ ಶಿಲ್ಪಾ ಶೆಟ್ಟಿ
ಬಾಲಿವುಡ್ ವಲಯದಲ್ಲಿ ಈಗ ಕಂದಮ್ಮಗಳ ಕಲರವ. ನೆನ್ನೆ ಮೊನ್ನೆ ಐಶ್ವರ್ಯ ರೈ ಬಚ್ಚನ್ ಗರ್ಭಿಣಿ ಎಂಬ ಸುದ್ದಿ ಭಾರಿ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಈಗ ಸಾಗರಕನ್ಯೆ ಶಿಲ್ಪಾ ಶೆಟ್ಟಿ ಕೂಡ ಅದೇ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.
2009ರಲ್ಲಿ ರಾಜ್ ಕುಂದ್ರಾ ಕೈಹಿಡಿದ ಶಿಲ್ಪಾ ಶೆಟ್ಟಿ ಈಗ ಗರ್ಭಿಣಿ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಶಿಲ್ಪಾ ಶೆಟ್ಟಿ ಪದೇ ಪದೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುತ್ತಿರುವುದು ಆಕೆ ಈಗ ಗರ್ಭಿಣಿ ಎಂಬ ಅನುಮಾನಗಳನ್ನು ಮತ್ತಷ್ಟು ಗಟ್ಟಿಯಾಗುತ್ತಿವೆ.
ಈ ಹಿಂದೊಮ್ಮೆ ಶಿಲ್ಪಾ ಗರ್ಭಿಣಿ ಎಂಬ ಸುದ್ದಿ ಬಿತ್ತರವಾಗಿತ್ತು. ಬಳಿಕ ಇದೆಲ್ಲಾ ಕೇವಲ ವದಂತಿ ಅಷ್ಟೆ ಎಂಬುದನ್ನು ಶಿಲ್ಪಾ ಸ್ಪಷ್ಟಪಡಿಸಿದ್ದರು. ಈಗ ಮತ್ತೊಮ್ಮೆ ಅಂಥಹದ್ದೇ ಸುದ್ದಿ ಸರಿದಾಡುತ್ತಿದೆ. ಮುಂಬೈ ಬಾಂದ್ರಾದಲ್ಲಿನ ಸ್ತ್ರೀರೋಗ ತಜ್ಞರ ಬಳಿಗೆ ರೆಗ್ಯುಲರ್ ಚೆಕಪ್‌ಗೆ ಶಿಲ್ಪಾ ಹೋಗುತ್ತಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. (ಏಜೆನ್ಸೀಸ್)
More from Filmibeat
English summary
Just on the heels of the news that Bollywood actress Aishwarya Rai Bachchan is pregnant, speculations are rife that Shilpa Shettey too is expecting her first child after marrying Raj Kundra in 2009.
ಶಿಲ್ಪಾ ಶೆಟ್ಟಿ ಗರ್ಭಿಣಿ ಬಾಲಿವುಡ್ ಗಾಸಿಪ್ ಐಶ್ವರ್ಯ ರೈ ಮಗು shilpa shetty pregnant bollywood gossip aishwarya rai


Click it and Unblock the Notifications











