ಜಾನ್ ಪ್ರೇಯಸಿ ಬಿಪ್ಸ್ ಜೊತೆ ರಾಣಾ ಜೂಟಾಟ
ಬಾಲಿವುಡ್ ಸೆಕ್ಸಿಯಸ್ಟ್ ಬ್ಯಾಚುರಲ್ ಜಾನ್ ಅಬ್ರಹಾಂ 115 ಕೆ.ಜಿ ತೂಕದ ಬೈಕೆತ್ತಿ ತಮ್ಮ ತೋಳ್ಬಲ ತೋರಿಸಿದ್ದಾರೆ. ಇತ್ತ ದಕ್ಷಿಣದ ರಾಣಾ ದಗ್ಗುಬಾಟಿ ಎಂಬ ಚಾಕೋಲೇಟ್ ಬಾಯ್ ಜಾನ್ ಪ್ರೇಯಸಿ ಬಿಪಾಶಾ ಬಸುರನ್ನು ಎರಡೂ ಕೈಯಲ್ಲಿ ಎತ್ತಿಮುದ್ದಾಡಿದ ರೋಮಾಂಚಕ ಪ್ರಸಂಗ ಬಾಲಿವುಡ್‌ನಿಂದ ನೇರವಾಗಿ ವರದಿಯಾಗಿದೆ.
ಇವರಿಬ್ಬರೂ ಈ ಹಿಂದೆ 'ಧಮ್ ಮಾರೋ ಧಮ್' ಚಿತ್ರದಲ್ಲಿ ಅಭಿನಯಿಸಿದ್ದರು. ಆಗಲೆ ಇವರಿಬ್ಬರ ಮೇಲೆ ಬಾಲಿವುಡ್ ಒಂದು ಕಣ್ಣಿಟ್ಟಿತ್ತು. ಇಲ್ಲ ಇಲ್ಲ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದಿದ್ದರು. ಈಗ ಪ್ಯಾರಿಸ್ ಹಿಲ್ಟನ್ ಮುಂಬೈನಲ್ಲಿ ನಡೆಸಿದ ನೈಟ್ ಪಾರ್ಟಿಯಲ್ಲಿ ಇಬ್ಬರೂ ಮನಸೋ ಇಚ್ಛೇ ಕುಣಿದು ಧಣಿದಿದ್ದಾರೆ.
ಪ್ಯಾರಿಸ್ ಹಿಲ್ಟನ್ ಪಾರ್ಟಿಯಲ್ಲಿ ಎಲ್ಲರ ಕಣ್ಣು ಇವರಿಬ್ಬರ ಮೇಲೆ ನೆಟ್ಟಿತ್ತಂತೆ. ಬಿಪಾಶಾ ಬೇರೆ ಕಲರ್‌ಫುಲ್ ಡ್ರಸ್‌ನಲ್ಲಿ ಬಂದು ಕಣ್ಣು ಅಗಲಿಸಿ ನೋಡುವಂತೆ ಮಾಡಿದ್ದರು ಎಂಬುದು ಕಂಡವರ ಕಾಮೆಂಟು. ಈ ಜೋಡಿಗೆ ಸುಸ್ಮಿತಾ ಸೇನ್, ಕಂಗನಾ ರನೌತ್, ಗುಲ್ ಪನಾಗ್ ಮತ್ತಿತರು ಸಾಥ್ ನೀಡಿದ್ದಾರೆ. (ಏಜೆನ್ಸೀಸ್)
More from Filmibeat
English summary
Actress Bipasha Basu, who is starring alongside South hottie Rana Daggubati, was spotted dancing with the actor at Queenie Dhody bash for Paris Hilton in Mumbai. Sources claim that the duo danced away the whole night.


Click it and Unblock the Notifications











