»   » ಗಣೇಶ್, ಯಶ್, ದಿಗಂತ್ ನೆತ್ತಿ ಮೇಲೆ ಕೇಸುಗಳ ಕತ್ತಿ

ಗಣೇಶ್, ಯಶ್, ದಿಗಂತ್ ನೆತ್ತಿ ಮೇಲೆ ಕೇಸುಗಳ ಕತ್ತಿ

Posted By:
Subscribe to Filmibeat Kannada
<ul id="pagination-digg"><li class="next"><a href="/gossips/28-producer-a-ganesh-in-trouble-aid0052.html">Next »</a></li></ul>

ಗಣೇಶ್, ಯಶ್, ದಿಗಂತ್ ನೆತ್ತಿ ಮೇಲೆ ಕೇಸುಗಳ ತೂಗುಕತ್ತಿ ತೂಗುತ್ತಿದೆಯಂತೆ. ಅದರಲ್ಲೂ ಗಣೇಶ್ ಮೇಲೆ ಏಳು, ದಿಗಂತ್ ಹಾಗೂ ಯಶ್ ಮೇಲೆ ತಲಾ ನಾಲ್ಕು ಕೇಸುಗಳು ಬಿದ್ದಿವೆಯಂತೆ. ಇಲ್ಲಿ ಗಣೇಶ್ ಎಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅಲ್ಲ. ಇವರು 'ದಂಡಂ ದಶಗುಣಂ' ನಿರ್ಮಾಪಕ ಎ ಗಣೇಶ್!

ಇಷ್ಟಕ್ಕೂ ಇವರ ಮೇಲೆ ಇಷ್ಟೆಲ್ಲಾ ಕೇಸುಗಳು ತಾಂಡವವಾಡಲು ಕಾರಣ ಏನು? ಎ ಗಣೇಶ್ ತಮ್ಮ ನೋವು, ಸಂಕಟವನು 'ಸಿಐಡಿ ಈಶ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಹೊರಹಾಕಿದ್ದಾರೆ. ನಟರಾದ ಯಶ್ ಮತ್ತು ದಿಗಂತ್ ಚಿತ್ರೀಕರಣಕ್ಕೆ ಸಹಕರಿಸುತ್ತಿಲ್ಲ ಎಂಬ ಆರೋಪವಿದ್ದು, ಅವರ ಮೇಲೆ ತಲಾ ನಾಲ್ಕು ಕೇಸುಗಳು ಫಿಲಂ ಚೇಂಬರ್‌ನಲ್ಲಿ ದಾಖಲಾಗಿವೆಯಂತೆ.

ಇನ್ನು ಗಣೇಶ್ ಅವರು ಪರಭಾಷಾ ಚಿತ್ರಗಳ ವಿರುದ್ಧ ಹೋರಾಡಿದ್ದೇ ತಪ್ಪಾಗಿದೆ. ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾದಲ್ಲಿ ಇವರ ಮೇಲೆ ಏಳು ಕೇಸುಗಳು ದಾಖಲಾಗಿವೆಯಂತೆ. ಈ ಕೇಸುಗಳ ವಿಚಾರಣೆಗಾಗಿ ಅವರು ಆಗಾಗ ನವದೆಹಲಿಗೂ ಹೋಗಬೇಕಾಗುತ್ತಿದೆಯಂತೆ.

<ul id="pagination-digg"><li class="next"><a href="/gossips/28-producer-a-ganesh-in-trouble-aid0052.html">Next »</a></li></ul>
English summary
Is Kannada films producer A Ganesh (Dhandam Dashagunam) and actoros Yash, Diganth facing several cases? Ganesh reveals that, he is facing seven and four each on actors Yash and Diganth. Ganesh has received thousands of pages of cases from Competition Commission of India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada