»   » ನವಗ್ರಹ ವಿತರಣೆ ವ್ಯವಹಾರ ಅಣಜಿಗೆ ಕೊಕ್

ನವಗ್ರಹ ವಿತರಣೆ ವ್ಯವಹಾರ ಅಣಜಿಗೆ ಕೊಕ್

Subscribe to Filmibeat Kannada

ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ದರ್ಶನ್, ಜಯಣ್ಣ ಮತ್ತು ಅಣಜಿ ನಾಗರಾಜ್ ಅವರ ಸ್ನೇಹದಲ್ಲಿ ಬಿರುಕು ಬಿಟ್ಟಿದಿಯೇ? ಹೌದು ಅನ್ನುತಿದೆ ಗಾಂಧಿನಗರ !! ಅದಕ್ಕೆ ಉದಾಹರಣೆಯಾಗಿ ದರ್ಶನ್ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ವಾಗುತ್ತಿರುವ "ನವಗ್ರಹ" ಚಿತ್ರದ ವಿತರಣೆ ಹಕ್ಕನ್ನು "ರಾಮು ಎಂಟರ್ಪ್ರೈಸಸ್ ಗೆ ನೀಡಿದೆ.

ಇತ್ತೀಚಿಗೆ ಬಿಡುಗಡೆ ಗೊಂಡಿದ್ದ ಅರ್ಜುನ್ ಚಿತ್ರವು ಸೇರಿ ದರ್ಶನ್ ಅವರ ಹೆಚ್ಚಿನ ಚಿತ್ರಗಳನ್ನು ಜಯಣ್ಣ ಫಿಲಂಸ್ ಬಿಡುಗಡೆ ಮಾಡುತ್ತಿತ್ತು. ಅರ್ಜುನ್ ಚಿತ್ರ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿಲ್ಲ ವಾದರೂ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಸಂಪಾದನೆ ತಂದು ಕೊಟ್ಟಿತ್ತು.

ದರ್ಶನ್ ಮತ್ತು ಆದಿತ್ಯ ನಾಯಕರಾಗಿದ್ದ "ಸ್ನೇಹಾನ ಪ್ರೀತಿನಾ" ಚಿತ್ರ ನೆಲಕಚ್ಚಿದ ಮೇಲೆ ನಿರ್ಮಾಪಕ ಅಣಜಿ ನಾಗರಾಜ್ ಯಶಸ್ವಿ ತಾಜ್ ಮಹಲ್ ಚಿತ್ರದ ಹೀರೋ ಅಜಯ್ ರಾವ್ ಅವರನ್ನ ಹಾಕಿ ಚಿತ್ರ ತೆಗೆಯುತ್ತಿದ್ದರೆ ಇತ್ತ ಜಯಣ್ಣ "ದೇವತೈ ಕೊಂಡೇನ್" ತಮಿಳು ಚಿತ್ರದ ಕನ್ನಡ ಅವತರಿಣಿಕೆ "ಜಾಜಿ ಮಲ್ಲಿಗೆ" ನಿರ್ಮಿಸುತ್ತಿದ್ದಾರೆ.

ಮೂಲಗಳ ಪ್ರಕಾರ "ನವಗ್ರಹ" ಚಿತ್ರದ ಬಿಡುಗಡೆ ಹಕ್ಕನ್ನು ಹೆಚ್ಚಿನ ಮೊತ್ತಕ್ಕೆ "ರಾಮು ಎಂಟರ್ಪ್ರೈಸಸ್ ಪಡೆದುಕೊಂಡಿದೆ.

ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada