For Quick Alerts
  ALLOW NOTIFICATIONS  
  For Daily Alerts

  ಶೀಲಾ ಕಿ ಜವಾನಿ ಐಟಂ ಹಾಡಿಗೆ ಹಾಡುಹಗಲೆ ಒಬ್ಬ ಬಲಿ

  By Rajendra
  |

  ಕತ್ರಿನಾ ಕೈಫ್ ಮಾದಕ ನೃತ್ಯದ 'ತೀಸ್ ಮಾರ್ ಖಾನ್' ಚಿತ್ರದ "ಶೀಲಾ ಕಿ ಜವಾನಿ" ಐಟಂ ಹಾಡು ಮುಂಬೈನಲ್ಲಿ ಒಬ್ಬನನ್ನು ಹಾಡುಹಗಲೆ ಬಲಿತೆಗೆದುಕೊಂಡಿದೆ. ಈ ಘಟನೆ ಸೋಮವಾರ (ಜ.24) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಹಾಡನ್ನು ನಿಷೇಧಿಸುವಂತೆ ಈ ಹಿಂದೆ ಒತ್ತಾಯ ಹೇರಲಾಗಿತ್ತು.

  ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ಯುವಕರ ಗುಂಪೊಂದು ಈ ಹಾಡು ಹಾಡುತ್ತಾ ಮಹಿಳೆಯೊಬ್ಬರನ್ನು ಚುಡಾಯಿಸಿದೆ. ಈ ಸಂಬಂಧ ಆಕೆ ನೆರೆಹೊರೆಯವ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ನೆರೆಹೊರೆಯವರು ಯುವಕರ ಮೇಲೆ ಮುಗಿಬಿದ್ದಿದ್ದಾರೆ.

  ಆಗ ನಡೆದ ಮಾರಾಮಾರಿಯಲ್ಲಿ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಮಾರಾಮಾರಿಯಲ್ಲಿ 450ಕ್ಕೂ ಹೆಚ್ಚು ಜನ ಇದ್ದರು. ಈ ಸಂದರ್ಭದಲ್ಲಿ ಮಹಿಳೆಯ ಕಡೆಯಿಂದ ಬಂದಿದ್ದ ಜುಬೇರ್ ಮನ್ಸೂರಿ ಎಂಬುವವರಿಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾರೆ.

  ಬಿದಿರಿನ ಕಟ್ಟಿಗೆ, ಕಬ್ಬಿಣದ ಸರಳು ಹಾಗೂ ಮಚ್ಚುಗಳ ಅಬ್ಬರ ನಡುವೆ ಸಿನಿಮೀಯ ರೀತಿಯಲ್ಲಿ ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಜಿ ಖುರೇಷಿ ಹಾಗೂ ಅಮ್ಜಾದ್ ಶೇಖ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ 10 ಮಂದಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. [ಕತ್ರಿನಾ ಕೈಫ್]

  English summary
  The much controversial song of Tees Maar Khan films Sheila ki Jawani caused a fight between two groups, leading to the death of one person in Mumbai Bandra. A woman heading towards her residence at Bandra in the wee hours of Monday was teased by a group of drunk people singing the popular item number.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X