ಗಣೇಶ್ ಗೋಳಾಟ ಕೇಳೋರ್ಯಾರು ಶಿವನೇ?
ಇದರಿಂದ ತೀವ್ರವಾಗಿ ಧೃತಿಗೆಟ್ಟಿರುವ ಗಣೇಶ್, ಏನು ಮಾಡಬೇಕೋ ತಿಳಿಯದೆ ದಿಕ್ಕು ತೋಚದಂತಾಗಿದೆಯಂತೆ. ಅವರ ಮೇಲೆ ಕೇಸುಗಳ ಕತ್ತಿ ತೂಗುತ್ತಿರುವ ವಿಚಾರ ಮೊನ್ನೆ ಮೊನ್ನೆ ಅವರ ಪತ್ನಿಗೂ ಗೊತ್ತಾಗಿ, ಈಗ ಅವರೂ ಊಟ, ನಿದ್ದೆ ಬಿಟ್ಟು ಆತಂಕದಲ್ಲಿ ದಿನಗಳನ್ನು ದೂಡುತ್ತಿದ್ದಾರಂತೆ.
ತಾನು ಕನ್ನಡಕ್ಕಾಗಿ ಹೋರಾಡಿದ್ದೇನೆ. ಇದೇ ತನ್ನ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಅತ್ತ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ನವೆಂಬರ್‌ನಲ್ಲಿ ಪರಭಾಷಾ ಚಿತ್ರಗಳ ವಿರುದ್ಧ ಹೋರಾಡಿದ್ದೇ ನನ್ನ ತಪ್ಪಾ? ಈ ಸಂದಿಗ್ಧ ಪರಿಸ್ಥಿತಿಯಲ್ಲಿ 'ಮಾಯಾ' ಮತ್ತು 'ಮಾಸ್' ಚಿತ್ರಗಳನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ.
ಈ ಕೇಸುಗಳನ್ನು ಸಂಭಾಳಿಸಲು ಆಗದೆ ತಾವು ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ತಮ್ಮ ಹಲವಾರು ಚಿತ್ರಗಳ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. 'ದಂಡಂ ದಶಗುಣಂ' ಚಿತ್ರದಿಂದ ರು.1.80 ಕೋಟಿ ಲಾಸಾಗಿದೆ. ದಯವಿಟ್ಟು ಯಾರಾದರೂ ತಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿ ಎಂದು ಗಣೇಶ್ ಗೋಳಾಡುತ್ತಿದ್ದಾರೆ. (ಏಜೆನ್ಸೀಸ್)
More from Filmibeat
English summary
Is Kannada films producer A Ganesh (Dhandam Dashagunam) and actoros Yash, Diganth facing several cases? Ganesh reveals that, he is facing seven and four each on actors Yash and Diganth. Ganesh has received thousands of pages of cases from Competition Commission of India.


Click it and Unblock the Notifications











