»   » ಕೈಸುಟ್ಟುಕೊಂಡ 'ಕುಚೇಲನ್' ಕರ್ನಾಟಕ ವಿತರಕರು

ಕೈಸುಟ್ಟುಕೊಂಡ 'ಕುಚೇಲನ್' ಕರ್ನಾಟಕ ವಿತರಕರು

Posted By:
Subscribe to Filmibeat Kannada

ಬಿಡುಗಡೆಗೂ ಮುಂಚೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ 'ಕುಚೇಲನ್' ಚಿತ್ರ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ರಜನಿಕಾಂತ್ ಚಿತ್ರದ ಮೇಲೆ ನಿರ್ಮಾಪಕರು,ವಿತರಕರು ಇಟ್ಟಿದ್ದ ಅಪಾರ ಭರವಸೆ ಹುಸಿಯಾಗಿದೆ. 'ಕುಚೇಲನ್' ಚಿತ್ರದ ಮೇಲೆ ಬಂಡವಾಳ ಹೂಡಿದ್ದ ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡು ವಿತರಕರು ಈಗ ಕೈಸುಟ್ಟಿಕೊಂಡಿದ್ದಾರೆ. ಹಿಂದೆ ಮುಂಚೆ ನೋಡದೆ ಬಂಡವಾಳ ಹೂಡಿದ ತಪ್ಪಿನ ಅರಿವಾಗಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ತಮಗಾದ ನಷ್ಟವನ್ನು ಕಟ್ಟಿಕೊಂಡುವಂತೆ 'ಕುಚೇಲನ್' ಚಿತ್ರದ ನಿರ್ಮಾಪಕರ ದುಂಬಾಲು ಬಿದ್ದಿದ್ದಾರೆ. ಪ್ರಸ್ತುತ ಕುಚೇಲನ್ ಚಿತ್ರದ ಕರ್ನಾಟಕ ವಿತರಕರು ನಷ್ಟ ಪರಿಹಾರ ಕಟ್ಟಿಕೊಂಡುವಂತೆ ಚೆನ್ನೈನಲ್ಲಿ ಕುಚೇಲನ್ ಚಿತ್ರದ ನಿರ್ಮಾಪಕರ ಹಿಂದೆ ಅಲೆಯುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ 'ಕುಚೇಲನ್' ಚಿತ್ರ ಕನ್ನಡ ಮತ್ತು ತೆಲುಗು ವಿತರಕರಿಗೆ 40 ಕೋಟಿ ರು.ಗಳು ನಷ್ಟ ತಂದೊಡಿದ್ದರೆ, ಚಿತ್ರ ಪ್ರದರ್ಶಕರಿಗೆ 20 ಕೋಟಿ ರು.ಗಳಷ್ಟು ನಷ್ಟ ಉಂಟು ಮಾಡಿದೆ. ''ಕುಚೇಲನ್ ಚಿತ್ರದ ವಿತರಕರು ಸಾಕಷ್ಟು ಕೈಸುಟ್ಟಿ ಕೊಂಡಿದ್ದಾರೆ, ಆದಕಾರಣ ದಯವಿಟ್ಟು ವಿತರಕರಿಗಾಗಿರುವ ನಷ್ಟವನ್ನು ಕಟ್ಟಿಕೊಡಿ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ಮಾಪಕರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ'' ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಕರ್ನಾಟಕದ ವಿತರಕರೊಬ್ಬರು.

ನಂಬಲರ್ಹ ಮೂಲಗಳ ಪ್ರಕಾರ, ಈಗಾಗಲೇ ರಜನಿಕಾಂತ್ ಹಾಗೂ ಕುಚೇಲನ್ ನಿರ್ಮಾಪಕರು ಬಿಡುಗಡೆ ಹಕ್ಕುಗಳನ್ನು ಪಡೆದಿದ್ದ ತಮಿಳುನಾಡಿನ ವಿತರಕರಿಗೆ ಆದ ನಷ್ಟವನ್ನು ಕಟ್ಟಿಕೊಡಲು ಮುಂದೆ ಬಂದಿದ್ದಾರಂತೆ. ಏಳು ಕೋಟಿ ರು.ಗಳ ಪರಿಹಾರ ಧನ ನೀಡುವ ಸಿದ್ಧತೆಯಲ್ಲಿದ್ದಾರೆ. 'ಕುಚೇಲನ್' ಚಿತ್ರಪ್ರದರ್ಶನದ ಹಕ್ಕುಗಳನ್ನು ಪಡೆದ ವಿತರಕರಿಗಾದ ನಷ್ಟದ ಪ್ರಮಾಣದ ಮೇಲೆ ಪರಿಹಾರ ತುಂಬಿಕೊಡಲಿದ್ದಾರೆ.

ಪ್ರಮುಖ ವಿತರಕರಾದ ಪಿರಮಿಡ್ ಸಾಯಿಮಿರಾ ಸಂಸ್ಥೆಗೆ ನಷ್ಟಭರ್ತಿ ಕಟ್ಟಿಕೊಡುವ ಬದಲು ರಜನಿಕಾಂತ್ ಆ ಸಂಸ್ಥೆಗಾಗಿ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಪ್ರಸ್ತುತ 'ರೋಬೋಟ್ ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅವರು ಆ ಚಿತ್ರದ ನಂತರಪಿರಮಿಡ್ ಸಾಯಿಮಿರಾ ಸಂಸ್ಥೆಗೆ ತನ್ನ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಂತರ ತಮಿಳುನಾಡು ಚಿತ್ರವಿತರಕರು ಸಭೆ ಸೇರಿ ಈ ಕಣ್ಣೊರೆಸುವ ತಂತ್ರಗಳೆಲ್ಲಾ ನಮಗೆ ಬೇಡ ತಮಗಾದ ನಷ್ಟವನ್ನು ಸಂಪೂರ್ಣವಾಗಿ ತುಂಬಿಕೊಡುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ನಷ್ಟಭರ್ತಿ ತುಂಬಿಕೊಡದಿದ್ದರೆ ರಜನಿಕಾಂತ್‌ರ ಮುಂದಿನ ಚಿತ್ರಗಳ ವಿತರಣೆಯನ್ನು ಬಹಿಷ್ಕರಿಸುವುದಾಗಿ ತಮಿಳುನಾಡು ವಿತರಕರ ಸಂಘದ ಪನ್ನೀರ್ ಸೆಲ್ವಂ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಕನ್ನಡಿಗರಿಗೆದುರು ಕ್ಷಮೆ ಕೇಳೇ ಇಲ್ಲ : ರಜನಿಕಾಂತ್
ರಾಜ್ಯಾದ್ಯಂತ ರಜನಿಯ ಕುಸೇಲನ್ ಪ್ರದರ್ಶನ
ಕನ್ನಡದಲ್ಲಿ 'ಸಾಹೇಬ'ರಿಗೆ 'ಕುಸೇಲನ್' ಬರೆದ ಪತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada