ಪ್ರತಿಭಾವಂತೆ ನಿತ್ಯಾಗೆ ಪೊಗರು ಜಾಸ್ತಿ ಅಂತೆ!

By Mahesh
<ul id="pagination-digg"><li class="next"><a href="/gossips/29-actress-nithya-menon-ban-mollywood-kfpa-amma-aid0039.html">Next »</a></li></ul>

ತೆಲುಗಿನ ಖ್ಯಾತ ನಟ ಪ್ರಭಾಸ್ ಜೊತೆ ನಟಿಸಲು ಆಫರ್ ಸಿಗುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, 'ಪ್ರಭಾಸ್ ಎಂದರೆ ಯಾರು?' ಎಂದು ನಿತ್ಯಾ ಪ್ರಶ್ನಿಸಿದ್ದಳು.

ನಾಗಾರ್ಜುನ, ವಿಕ್ಟರಿ ವೆಂಕಟೇಶ್ ರಂಥ ವಯಸ್ಸಾದ ಹೀರೋಗಳ ಜೊತೆ ನಟಿಸಲಾರೆ ಎಂದು ಮೂಗು ಮುರಿದಿದ್ದ ನಿತ್ಯಾಗೆ ಕೆಲ ಅವಕಾಶಗಳು ಕೈ ತಪ್ಪಿದ್ದಳು. 'ಬುದ್ಧಿಜೀವಿ'ನಿತ್ಯಾ ಸಹವಾಸ ಬೇಡ ಎಂದು ಶ್ರುತಿ ಹಾಸನ್ ಗೆ ನಿರ್ಮಾಪಕರು ಚಾನ್ಸ್ ಕೊಟ್ಟಿದ್ದರು.

ಆದರೆ, ನಿತ್ಯಾ ನಟನೆ, ಗಾಯನದ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಚಿತ್ರರಂಗದಲ್ಲಿ ಈಗಲೂ ಆಕೆಗೆ ಬೆಂಬಲವಿದೆ. ಅಸಂಖ್ಯಾತ ಅಭಿಮಾನಿಗಳನ್ನು ನಿತ್ಯಾ ಹೊಂದಿದ್ದಾಳೆ.

ನಿಖಿತಾಳನ್ನು ಕನ್ನಡ ನಿರ್ಮಾಪಕರು ಬ್ಯಾನ್ ಮಾಡಿದಾಗ ನಿಖಿತಾಳಿಗೆ ಬೆಂಬಲ ಸಿಕ್ಕಿದ್ದು ತೀರಾ ತಡವಾಗಿ, ಅದರಲ್ಲೂ ಮಹಿಳಾ ಸಂಘಟನೆಗಳ ಬೆಂಬಲವಂತೂ ಸರಿಅಯದ ಸಮಯಕ್ಕೆ ಸಿಗಲೇ ಇಲ್ಲ. ಆದರೆ, ನಿತ್ಯಾ ವಿಷಯದಲ್ಲಿ ಹಾಗೇ ಆಗಲು ಸಾಧ್ಯವಿಲ್ಲ. ಕೇರಳದಲ್ಲಿ ಮಹಿಳಾ ಸಂಘಟನೆಗಳು, ನಟ, ನಟಿಯರ ಸಂಘ ಸಕತ್ ಶಕ್ತಿಯುತವಾಗಿದೆ. ನಿತ್ಯಾ ಅವರ ಮೊರೆ ಹೋಗಬೇಕು ಅಷ್ಟೆ.

ನಿತ್ಯಾ ಪರಿಚಯ: ಕಾಲಿಕಾಟ್ ಮೂಲದ ಅಪ್ಪ, ಪಾಲಕ್ಕಾಡ್ ಮೂಲದ ಅಮ್ಮನ ಮುದ್ದಿನ ಕೂಸು ನಿತ್ಯಾ ಜನಿಸಿದ್ದು ಬೆಂಗಳೂರಿನಲ್ಲಿ, ಜರ್ನಲಿಸಂ ಓದಿದ್ದು ಮಣಿಪಾಲದಲ್ಲಿ, ಛಾಯಾಗ್ರಾಹಕ ಕೊರ್ಸ್ ಕಲಿಯಲು ಪುಣೆ ಫಿಲ್ಮ್ ಇನ್ಸ್ ಸ್ಟಿಟ್ಯೂಟ್ ಗೆ ಪಯಣ ನಂತರ ನಟಿಯಾಗಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ನಲ್ಲಿ ನಟನೆ.

ಮಲೆಯಾಳಂನಲ್ಲಿ 9, ತೆಲುಗಿನಲ್ಲಿ 2, ತಮಿಳಿನಲ್ಲಿ 3, ಕನ್ನಡದಲ್ಲಿ 3 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರತಿಭಾವಂತ ನಟಿಗೆ ಪೊಗರು ಜಾಸ್ತಿ ಎಂದಿರುವ ಮಲೆಯಾಳಂ ನಿರ್ಮಾಪಕರ ಮುಂದಿನ ನಡೆ ಬಗ್ಗೆ ಕಾದು ನೋಡಬೇಕಿದೆ.

<ul id="pagination-digg"><li class="next"><a href="/gossips/29-actress-nithya-menon-ban-mollywood-kfpa-amma-aid0039.html">Next »</a></li></ul>

More from Filmibeat

English summary
South Indian Actress Nithya Menon is talented but arrogant and intellectual says the Tollywood. Nithya now leading actress in Malayam film industry has faced ire in other industries also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X