ಏನ್ 'ಪ್ರಿಯಾ' ಕೆಲ್ಸ ಇಲ್ವಾ ಎಂದರೆ ಥಕ ಥಕ ಕುಣಿವ 'ಮಣಿ'
ಪ್ರತಿಭಾವಂತ ನಟಿ ಪ್ರಿಯಾಮಣಿಗೆ ಯಾಕೋ ಈಗ ಯಾರಾದರೂ ಏನಾದ್ರೂ ಕೇಳಿದ್ರೆ ಗುರ್ ಅನ್ನುತ್ತಿದ್ದಾರೆ. ಪರ್ಸನಲ್ ವಿಷ್ಯ ಅಷ್ಟೇ ಅಲ್ಲ, ಪ್ರೊಫೆಷನಲ್ ಮ್ಯಾಟರ್ ಆದ್ರೂ ಅಷ್ಟೇ.
ಇತ್ತೀಚೆಗೆ ಕಾಲಿವುಡ್, ಟಾಲಿವುಡ್ ಕಡೆಯಿಂದ ಶ್ರೀಗಂಧದ ಚಿತ್ರರಂಗದ ವಾಸನೆ ಹಿಡಿದು ಬೆಂಗಳೂರಿನ ಕಡೆ ಕಾರು ತಿರುಗಿಸುತ್ತಿದ್ದ ಪ್ರಿಯಾರನ್ನು ತಡೆದ ಕೆಲ ಪತ್ರಕರ್ತರು, ಮೇಡಂ ಏನ್ ಇಲ್ಲಿ ನಿಮಗೆ ಡಿಮ್ಯಾಂಡ್ ಕಮ್ಮಿ ಆಯ್ತ.. ಆ ಕಡೆ ಹೊರಟ್ಟಿದ್ದೀರಲ್ಲ ಎಂದು ಕೇಳಿಬಿಟ್ಟಿದ್ದಾರೆ.
ಇಷ್ಟಕ್ಕೆ ಅರುಂಧತಿ ಚಿತ್ರದ ಅನುಷ್ಕಾ ಶೆಟ್ಟಿ ಥರಾ ಕಣ್ಣು ಕೆಂಪಗೆ ಮಾಡಿಕೊಂಡ ಪ್ರಿಯಾ, ನಾನೇನು ನಿರುದ್ಯೋಗಿ ಆಗಿಲ್ಲ. ಇಲ್ಲಿ ನನಗೆ ನಾಲ್ಕಾರು ಸಿನಿಮಾ ಇದೆ ಗೊತ್ತಾ. ಕಾಲ್ ಶೀಟ್ ಸಿಕ್ತಾ ಇಲ್ಲ ಅಂಥ ನಿರ್ಮಾಪಕರು ಒದ್ದಾಡ್ತಾ ಇದ್ದಾರೆ ಎಂದಿದ್ದಾಳೆ.
ಆದ್ರೆ ಅಸ್ಮಿ ವಿಷ್ಯ ಎಂದರೆ, ಪ್ರಿಯಾಮಣಿ ಕಾಲಿವುಡ್, ಟಾಲಿವುಡ್ ನಲ್ಲಿ ಯಾವುದೇ ಹೊಸ ಸಿನಿಮಾಗೆ ಡೇಟ್ಸ್ ಕೊಟ್ಟಿಲ್ಲ, ಕನ್ನಡದಲ್ಲಿ ಶ್ರೀನಗರ ಕಿಟ್ಟಿ ಜೊತೆ ಕೋತಿ ಕೋಳಿ ಆಟ ಆಡ್ತಾ ಇದ್ದೀನಿ ಎಂದು ಅಲ್ಲೆಲ್ಲಾ ಹೇಳಿಕೊಳ್ಳುವಂತಿಲ್ಲ. ಇತ್ತೀಚಿಗೆ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟ ಪ್ರಿಯಾಗೆ ಬೇಡಿಕೆ ಕಮ್ಮಿಯಾಗಿರುವುದೇನೋ ನಿಜ.
ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮೈ ಚಳಿ ಬಿಟ್ಟು ಯರ್ರಾಬಿರ್ರಿ ಕುಣಿಯುವ ಪ್ರಿಯಾ ಕೊಡುವ ಉತ್ತರವೇ ಬೇರೆ. ಟಾಲಿವುಡ್ ನಲ್ಲಿ ಸಿನಿಮಾ ರಂಗವೇ ಬಂದ್ ಆಚರಿಸಿದೆ. ಹಾಗಾಗಿ ಹೊಸ ಚಿತ್ರಗಳು ಸೆಟ್ಟೇರುತ್ತಿಲ್ಲ. ಜಗಪತಿಬಾಬು ಜೊತೆಗಿನ ಹಳೆ ಚಿತ್ರ ಕ್ಷೇತ್ರ ಇನ್ನೂ ತೆರೆ ಕಾಣಬೇಕಿದೆ. ನಾನೇನು ಮಾಡ್ಲಿ ಎನ್ನುತ್ತಾಳೆ ಮಣಿ.
ಬಾಲಿವುಡ್ ಗಿಂತ ದಕ್ಷಿಣ ಚಿತ್ರರಂಗವೇ ವಾಸಿ ಎನ್ನುವ ಪ್ರಿಯಾಗೆ ಮುಂಬೈ ನಗರಿಯಲ್ಲಿ ಕುಣಿಯುವ ಬಯಕೆಯಂತೂ ಹೋಗಿಲ್ಲ.


Click it and Unblock the Notifications











