ಸೋನಾ ಆಂಟಿಗೆ 50 ಲಕ್ಷ ಆಫರ್ ಕೊಟ್ಟ ಎಸ್ಪಿಬಿ
ವೃತ್ತಿಯಲ್ಲಿ ತನ್ನ ಮಗ ನನಗಿಂತ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಕನಸು ಕಂಡಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಇಂದು ಅದೇ ಮಗನಿಂದ ತಲೆ ತಗ್ಗಿಸುವಂತಾಗಿದೆ.
ಯಾವುದೇ ಒಪ್ಪಂದ ಸಂಧಾನಕ್ಕೆ ಒಪ್ಪದೆ ರಚ್ಚೆ ಹಿಡಿದು ಕೂತಿರುವ ಸೆಕ್ಸ್ ಬಾಂಬ್ ಸೋನಾ ಮುಂದೆ ತಲೆ ಬಾಗಿದರೂ ಆಕೆ ಸೊಪ್ಪು ಹಾಕಿಲ್ಲ.
ಎಸ್ ಪಿಬಿ ಚರಣ್ ನನ್ನು ಜೈಲಿಗೆ ಕಳಿಸುವುದೇ ನನ್ನ ಧ್ಯೇಯ ಎಂಬಂತೆ ಆಡುತ್ತಿರುವ ಸೋನಾ ವರ್ತನೆ ಕಂಡು ಕಾಲಿವುಡ್ ಕೂಡಾ ಬೆರಗಾಗಿದೆ.
ಚರಣ್ ಮೈ ಮುಟ್ಟಿದ್ದಕ್ಕಿಂತ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೇ ಸೋನಾ ಈ ಪರಿ ಕೆರಳಲು ಕಾರಣ ಎಂದು ಕಾಲಿವುಡ್ ನ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
ಇತ್ತ ಮಗನ ಮರ್ಯಾದೆ ಉಳಿಸಲು ಹೆಣಗಾಡುತ್ತಿರುವ ಹಿರಿಯ ಗಾಯಕ, ಪ್ರಕರಣವನ್ನು ತಣ್ಣಗಾಗಿಸಿ ಮಾನ ಕಾಪಾಡುವಂತೆ ಸೋನಾ ಮುಂದೆ ಕೈ ಜೋಡಿಸಿದ್ದಾರೆ ಎಂಬ ಸುದ್ದಿ ಗಾಸಿಪ್ ಕಾಲಂಗಳಲ್ಲಿ ಹರಿದಾಡುತ್ತಿದೆ.
ಆದರೆ, ದುಡ್ಡಿಗಿಂತ ಮಾನ ಮುಖ್ಯ ಎಂದು ಅಪ್ಪಟ ಭಾರತೀಯ ನಾರಿಯಂತೆ ಸೋನಾ ಪೋಸ್ ಕೊಟ್ಟಿದ್ದಾಳಂತೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹಿಂತಿರುಗಿದ ಹಿರಿಯ ಗಾಯಕ ತಲೆ ಮೇಲೆ ಕೈ ಹೊತ್ತುಕೊಂಡು ವಿಷಾದರಾಗ ಹಾಡುತ್ತಿದ್ದಾರಂತೆ.
'ನಾರಿ ಮುನಿದರೆ ಮಾರಿ' ಎಂಬ ಚಿತ್ರ ತಮಿಳಿನಲ್ಲಿ ಬಂದರೆ ಸ್ಥೂಲಕಾಯದ ಸೋನಾ ನಾಯಕಿಯಾಗಲು ರೆಡಿಯಂತೆ.


Click it and Unblock the Notifications











