ದಸರಾ ಚಲನಚಿತ್ರೋತ್ಸವ; ರಾಜ್ ಕುಟುಂಬಕ್ಕಿಲ್ಲ ಆಹ್ವಾನ

By Rajendra
<ul id="pagination-digg"><li class="next"><a href="/news/29-rebel-star-ambarish-inaugurate-dasara-film-festival-aid0052.html">Next »</a></li></ul>

Parvathamma Rajkumar
ಪ್ರತಿವರ್ಷದಂತೆ ಈ ಬಾರಿಯೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 30ರಂದು ಮಧ್ಯಾಹ್ನ 12.15ಕ್ಕೆ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದ್ದು, ಕನ್ನಡ ಚಲನಚಿತ್ರ ರಂಗದ ಹಿರಿಯ ಕಿರಿಯ ಕಲಾವಿದರು, ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆದರೆ ಆಹ್ವಾನಿತರ ಪಟ್ಟಿಯಲ್ಲಿ ವರನಟ ಡಾ.ರಾಜ್ ಕುಟುಂಬದವರ ಒಬ್ಬರ ಹೆಸರು ಇಲ್ಲದಿರುವುದು ಕನ್ನಡ ಚಿತ್ರೋದ್ಯಮವನ್ನು ಚಕಿತಗೊಳಿಸಿದೆ.

ಮುಖ್ಯ ಅತಿಥಿಗಳ ಪಟ್ಟಿಯಲ್ಲೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಹೆಸರಾಗಲಿ ಅಣ್ಣಾವ್ರ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ಹೆಸರಾಗಲಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಹೆಸರು ಕೈಬಿಟ್ಟಿದ್ದಾರೂ ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಆದರೆ ವಿಶೇಷ ಎಂದರೆ ಚಲನಚಿತ್ರೋತ್ಸವದಲ್ಲಿ ವರನಟ ಡಾ.ರಾಜ್ ಅಭಿನಯದ ಚಿತ್ರಗಳು ಪ್ರದರ್ಶನ ಕಾಣುತ್ತಿರುವುದು. ಡಾ.ರಾಜ್ ಅಭಿನಯದ ಬಬ್ರುವಾಹನ, ಕಿತ್ತೂರು ಚೆನ್ನಮ್ಮ, ಬಂಗಾರದ ಮನುಷ್ಯ ಸೇರಿದಂತೆ ಒಟ್ಟು 36 ಹಳೆಯ ಹಾಗೂ ಲೇಟೆಸ್ಟ್ ಚಿತ್ರ 'ಲೈಫು ಇಷ್ಟೇನೆ' ಚಿತ್ರ ಪ್ರದರ್ಶನ ಕಾಣಲಿದೆ. ಚಲನಚಿತ್ರೋತ್ಸವ ಆಹ್ವಾನಿತರ ಪಟ್ಟಿ ದೀರ್ಘವಾಗಿದೆ ಸ್ವಲ್ಪ ತಾಳ್ಮೆಯಿಂದ ಮುಂದೆ ಓದಿ.

<ul id="pagination-digg"><li class="next"><a href="/news/29-rebel-star-ambarish-inaugurate-dasara-film-festival-aid0052.html">Next »</a></li></ul>

More from Filmibeat

English summary
The seven-day Dasara Filmvoltsav at Kalamandira on September 30 will inaugurate Actor-turned-politician Ambarish. More than 36 old Kannada films will be screened in three theatres in the Mysore as part of Dasara. But we heard that Dr.Rajkumar family was not even invited to be part of the film festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X