»   » ರಾಧಿಕಾ ಮತ್ತು ಯಶ್ ನಡುವೆ ಸಂಥಿಂಗ್ ಸಂಥಿಂಗ್‌

ರಾಧಿಕಾ ಮತ್ತು ಯಶ್ ನಡುವೆ ಸಂಥಿಂಗ್ ಸಂಥಿಂಗ್‌

Posted By:
Subscribe to Filmibeat Kannada

ಈ ರೀತಿಯ ಗಪ್‌ಚಿಪ್ ಸುದ್ದಿಯೊಂದು ಗಾಂಧಿನಗರದಲ್ಲಿ ಕಿವಿಗಳಿಗೆ ಎಡತಾಕುತ್ತಿದೆ. ಇವರಿಬ್ಬರು ಕದ್ದುಮುಚ್ಚಿ ಓಡಾಡುತ್ತಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ದಟ್ಟ ಗುಮಾನಿ ಹಬ್ಬಿದೆ.

ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸು' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದರು. ಅಷ್ಟೇ ಅಲ್ಲದೆ ಇಬ್ಬರೂ ಕಿರುತೆರೆ ಹಿನ್ನೆಲೆಯಿಂದ ಬಂದವರು. 'ಮೊಗ್ಗಿನ ಮನಸು' ಚಿತ್ರ ಇಬ್ಬರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತು. ಇಬ್ಬರೂ ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡಿದ್ದರು.

ಅದಾದ ಬಳಿಕ ರಾಧಿಕಾ ಪಂಡಿತ್ ಹಾಗೂ ಯಶ್ ಮತ್ತೆ ಒಟ್ಟಾಗಿ ಅಭಿನಯಿಸಲಿಲ್ಲ. ಈಗ ಮತ್ತೊಮ್ಮೆ ಯೋಗರಾಜ್ ಭಟ್ ತಮ್ಮ 'ಡ್ರಾಮಾ' ಚಿತ್ರಕ್ಕಾಗಿ ಇಬ್ಬರನ್ನೂ ಒಂದು ಮಾಡಿದ್ದಾರೆ. ಮುಂಚೆಯಿಂದಲೂ ಇವರಿಬ್ಬರೂ ಬೆಸ್ಟ್ ಫ್ರೆಂಡ್ಸ್.

"ಕಾಫಿ ಶಾಪ್‌ಗಳಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದರು. ಇದರಲ್ಲೇನು ತಪ್ಪಿಲ್ಲ. ಆದರೆ ಕಂಡವರು ಮಾತ್ರ ಅಪಾರ್ಥಗಳನ್ನು ಕಲ್ಪಿಸುತ್ತಿದ್ದಾರೆ. ಇಬ್ಬರ ನಡುವೆ ಒಳ್ಳೆಯ ವೃತ್ತಿಪರತೆ ಇದೆ. ಸ್ನೇಹ ಬಿಟ್ಟರೆ ಅವರಿಬ್ಬರ ನಡುವೆ ಪ್ರೀತಿ ಪ್ರೇಮ ಪ್ರಣಯಕ್ಕೆ ಜಾಗವೇ ಇಲ್ಲ" ಎನ್ನುತ್ತಾರೆ ಇಬ್ಬರಿಗೂ ಗೊತ್ತಿರುವ ಆಪ್ತಮಿತ್ರರೊಬ್ಬರು. ಆದರೆ ಗಾಂಧಿನಗರಕ್ಕೆ ಈ ಮಾತುಗಳು ಕೇಳಿಸುತ್ತಿಲ್ಲ. (ಏಜೆನ್ಸೀಸ್)

English summary
The latest Sandalwood grapevines are that actress Radhika Pandit and Yash have been dating together. The buzz is that Radhika and Yash are in love and have been trying to get some private time for each other.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X