»   » ನೀರಜ್ ಕೊಲೆ : ಮೋನಿಕಾ ಸುಸೈರಾಜ್ ತಪ್ಪೊಪ್ಪಿಗೆ

ನೀರಜ್ ಕೊಲೆ : ಮೋನಿಕಾ ಸುಸೈರಾಜ್ ತಪ್ಪೊಪ್ಪಿಗೆ

Subscribe to Filmibeat Kannada

ಮುಂಬೈ, ಮೇ 29 : ಟಿವಿ ನಿರ್ಮಾಪಕ ನೀರಜ್ ಗ್ರೋವರ್ ಅವರ ಹತ್ಯೆಯ ಆರೋಪದ ಮೇಲೆ ಬಂಧಿತರಾಗಿರುವ ಕನ್ನಡ ಚಿತ್ರನಟಿ ಮರಿಯಾ ಮೋನಿಕಾ ಸುಸೈರಾಜ್ ಅವರು ಕೊಲೆ ಆರೋಪ ತನ್ನ ಮೇಲೆ ಬಂದಿದ್ದಕ್ಕಾಗಿ ಪ್ರಿಯಕರ ಮತ್ತು ನೌಕಾಧಿಕಾರಿ ಲೆಫ್ಟಿನೆಂಟ್ ಎಮ್ಎಲ್ ಜೇರೋಮ್ ಮ್ಯಾಥ್ಯೂ ಅವರ ಮೇಲೆ ಗೂಬೆ ಕೂರಿಸಿದ್ದಾರೆ.

ಕೊಲೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮೋನಿಕಾ ಭಾರೀ ಚರ್ಚೆಗೀಡಾಗಿರುವ ಪ್ರಕರಣದಲ್ಲಿ ಮುಂಬೈ ನ್ಯಾಯಾಲಯದ ಮುಂದೆ ಬುಧವಾರ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾರೆ. ಬುಧವಾರ ಮೋನಿಕಾರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಜೇರೋಮ್ ಒತ್ತಾಯ ಮಾಡಿದ್ದರಿಂದಲೇ ತಾನು ನೀರಜ್ ಅವರ ದೇಹವನ್ನು ಚೂರುಚೂರು ಮಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನೀರಜ್ ಕೊಲೆ ಮಾಡುವುದಕ್ಕೆ ನಾನು ವಿರೋಧಿಸಿದೆ. ಜೋರೋಮ್‌ನನ್ನು ತಡೆಯಲು ಪ್ರಯತ್ನಿಸಿದೆ. ಆದರೆ, ವಿಪರೀತ ಸಿಟ್ಟಿಗೆದ್ದಿದ್ದ ಜೇರೋಮ್ ನೀರಜ್‌ನನ್ನು ಚಾಕುವಿನಿಂದ ಅನೇಕ ಬಾರಿ ಚುಚ್ಚಿ ಕೊಲೆ ಮಾಡಿದ ಎಂದು 27 ವರ್ಷ ವಯಸ್ಸಿನ ಮೋನಿಕಾ ನ್ಯಾಯಾಲಯಕ್ಕೆ ಅರುಹಿದ್ದಾರೆ.

ನಂತರ ಅಂಗಡಿಯಿಂದ ಬ್ಯಾಗ್ ಮತ್ತು ದೊಡ್ಡ ಬಾಕನ್ನು ತರಲು ಪ್ರೇರೇಪಿಸಿದ ಜೇರೋಮ್, ನೀರಜೇ ದೇಹವನ್ನು ತುಂಡುತುಂಡು ಮಾಡಲು ಬಲವಂತ ಮಾಡಿದ ಎಂದು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರಿಗೆ ಮೋನಿಕಾ ಅವರ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೇರೋಮ್ ಕೂಡ ತಾನು ನೀರಜ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

(ಏಜೆನ್ಸೀಸ್)

ಮೋನಿಕಾ ಯಾರು? ಕೊಲೆ ನಡೆದದ್ದು ಎಂದು?
ಮರ್ಡರಸ್ ಮರಿಯಾ ಮೋನಿಕಾ ಸುಸೈರಾ ಚಿತ್ರಪಟ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada