'ಬಾವ' ಸಿದ್ಧಾರ್ಥ್ ತುಟಿಗೆ ತುಟಿ ಸೇರಿಸಿದ್ದ ಪ್ರಣೀತಾ
ಪ್ರಣೀತಾ ತನ್ನ ಮೊದಲ ಚಿತ್ರ 'ಪೊರ್ಕಿ'ಯಲ್ಲೇ ಕೊಂಚ ಬಿಂದಾಸ್ ಆಗಿ ಕಾಣಿಸಿಕೊಂಡವರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿದ್ದ ಚಿತ್ರದಲ್ಲಿ 'ಸೆಕ್ಸೀ' ಉಡಿಗೆ-ತೊಡುಗೆ ತೊಟ್ಟು ಪ್ರೇಕ್ಷಕ ಕಣ್ಣುಮುಚ್ಚುವುದನ್ನು ಮರೆಯುವಂತೆ ಮಾಡಿದವರು. ನಂತರ ತೆಲುಗು, ತಮಿಳುಗಳಿಂದ ಬಂದ ಅವಕಾಶಗಳನ್ನು ಬಾಚಿಕೊಂಡಿದ್ದ ಈಕೆ, ತಾನು ಯಾವುದಕ್ಕೂ ಸಿದ್ಧ ಅಂದಿದ್ದರು.
ಪೊರ್ಕಿಯ ನಂತರ ತೆಲುಗು-ತಮಿಳುಗಳಲ್ಲಿ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಗಮನ ಸೆಳೆದದ್ದು, ಸಿದ್ಧಾರ್ಥ್ ಜತೆಗಿನ 'ಬಾವಾ' ಚಿತ್ರ. ನೀರಲ್ಲಿ ಬಿದ್ದು ಹೊರಳಾಡಿ, ನಾಯಕ ಸಿದ್ದಾರ್ಥನ ತುಟಿಗೆ ತುಟಿ ಸೇರಿಸಿ ಸುದ್ದಿಯಾಗಿದ್ದರು. ಆದರೆ ಸುದ್ದಿಯಾದದ್ದೇ ಬಂತು, ಚಿತ್ರ ಮಕಾಡೆ ಮಲಗಿತ್ತು.
ಈಗ ಇದ್ದಕಿದ್ದಂತೆ ಹೀಗೆ ಬದಲಾವಣೆಗೆ ಕಾರಣ ತಿಳಿದು ಬಂದಿಲ್ಲ. ಬಹುಶಃ ಪ್ರತಿಭೆಗೆ ಅವಕಾಶವಿರುವಷ್ಟು, ಮೈತೋರಿಸಿದರೆ ಇಲ್ಲ ಅಂತ ಮನದಟ್ಟಾಗಿರಬೇಕು. ಈ ಅಚ್ಚಗನ್ನಡದ ಹುಡುಗಿ ಈಗ ದುನಿಯಾ ವಿಜಯ್ ನಾಯಕರಾಗಿರುವ 'ಜರಾಸಂಧ'ದಲ್ಲಿ 'ಬ್ರೇಕ್' ನಿರೀಕ್ಷೆಯಲ್ಲಿದ್ದಾರೆ. ಶಶಾಂಕ್ ನಿರ್ದೇಶನದ ಈ ಚಿತ್ರ, ಪ್ರಣೀತಾರನ್ನು ಎಷ್ಟು ಎತ್ತರಕ್ಕೆ ಏರಿಸುತ್ತದೆ ಎಂಬುದನ್ನು ಭವಿಷ್ಯ ನಿರ್ಧರಿಸಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











