»   » ಕನ್ನಡದಲ್ಲಿ 'ಸಾಹೇಬ'ರಿಗೆ 'ಕುಸೇಲನ್' ಬರೆದ ಪತ್ರ

ಕನ್ನಡದಲ್ಲಿ 'ಸಾಹೇಬ'ರಿಗೆ 'ಕುಸೇಲನ್' ಬರೆದ ಪತ್ರ

Subscribe to Filmibeat Kannada

ಹೊಗೇನಕಲ್ ವಿವಾದ ಭುಗಿಲೆದ್ದಾಗ ತಮಿಳಿಗರ ಪರವಾಗಿ, ಕನ್ನಡಿಗರ ವಿರುದ್ಧವಾಗಿ ಮಾತನಾಡಿದ್ದ ತಮಿಳಿಗರ ಕಣ್ಮಣಿ ಸ್ಟೈಲ್‌ಕಿಂಗ್ ರಜನಿಕಾಂತ್ ಅವರ ಹೊಸ ಚಿತ್ರ 'ಕುಸೇಲನ್' ಕರ್ನಾಟಕದಲ್ಲಿ ಬಿಡುಗಡೆಯಾಗಲೇಬಾರದು ಎಂದು ಕನ್ನಡಿಗರು ಬೊಬ್ಬೆಹೊಡೆಯುತ್ತಿರುವ ಹೊತ್ತಿನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 'ಸಾಹೇಬ'ರಾಗಿರುವ ಜಯಮಾಲಾ ಅವರು ಚಿತ್ರ ಬಿಡುಗಡೆಗೆ ಠಸ್ಸೆ ಒತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ರಜನಿಕಾಂತ್ ಸಮಸ್ತ ಕನ್ನಡಿಗರ ಕ್ಷಮೆ ಕೇಳುವವರೆಗೂ ಕುಸೇಲನ್ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ವೀರಾವೇಶ ಮೆರೆದಿದ್ದ ಕರ್ನಾಟಕ ರಕ್ಷಣಾ ವೇದಿಕೆಯವರು ಇಲ್ಲಿಯವರೆಗೆ ಚಕಾರವೆತ್ತಿಲ್ಲ. ಈ ಹೊತ್ತಿನಲ್ಲೇ ಕುಸೇಲನ್ ಬಿಡುಗಡೆ ಮಾಡಲು ಮಂಡಳಿ ಸಹಕರಿಸಬೇಕೆಂದು ಸ್ವತಃ ರಜನಿಕಾಂತ್ ಅವರು ತಮ್ಮ ಸ್ವಂತ ಕೈಬರಹದಲ್ಲಿ ಅದೂ ಅಚ್ಚ ಕನ್ನಡದಲ್ಲಿ ಮಂಡಳಿಗೆ ಬರೆದಿರುವ ಪತ್ರ ದಟ್ಸ್‌ಕನ್ನಡಕ್ಕೆ ದಕ್ಕಿದೆ. ಅದನ್ನು ಇಲ್ಲಿ ಯಥಾವತ್ ಪ್ರಕಟಿಸುತ್ತಿದ್ದೇವೆ.

ಪತ್ರದ ಒಕ್ಕಣೆಯಲ್ಲಿ ರಜನಿ ವ್ಯಕ್ತಪಡಿಸಿರುವ ವಿಷಾದಕ್ಕೆ, ಬೇಡಿಕೆಗೆ ಮನಸೋತು ಸಾಹೇಬರು ಕನ್ನಡಿಗರ ಪರವಾಗಿ 'ಹೂಂ' ಅಂದಿದ್ದಾರೆ. ಪತ್ರದಲ್ಲಿ ಏನು ಬರೆದಿದ್ದಾರೆಂದು ಕನ್ನಡಿಗರಿಗಾಗಿ ಇಲ್ಲಿ ಮತ್ತೆ ಬರೆಯುವ ಅಗತ್ಯವಿಲ್ಲ. ಒಂದು ಬಾರಿ ನೀವೇ ಓದಿ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಿ.

ಪೂರಕ ಓದಿಗೆ
ಕರ್ನಾಟಕದಲ್ಲಿ ಸದ್ದಿಲ್ಲದಂತೆ 'ಕುಸೇಲನ್' ಬಿಡುಗಡೆ
'ಕುಸೇಲನ್‌' ರಜನಿಗೆ ಕರ್ನಾಟಕದಲ್ಲಿ ಸಂಕಟಕಾಲ!
ತಮಿಳರ ಪ್ರತಿಭಟನೆಗೆ ರಜನಿ, ಕಮಲ್ ಸೇರ್ಪಡೆ
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada