For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರರ ಎಚ್‌ಟುಒ ಕನ್ನಡ ವಿರೋಧಿ ಚಿತ್ರವೇ?

  By Staff
  |

  ಕನ್ನಡದ ಸಿನೆಮಾಕ್ಕೆ ತಮಿಳು ಹಾಡುಗಳ ಹಂಗೇಕೆ ?
  ಇಂಥದೊಂದು ಪ್ರಶ್ನೆಯನ್ನೆತ್ತಿಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಉಪೇಂದ್ರ ನಾಯಕತ್ವದ ಎಚ್‌ಟುಒ ಸಿನಿಮಾ ವಿರುದ್ಧ ಸಮರ ಹೂಡಿದೆ.
  ಎಚ್‌ಟುಒ ಸಿನೆಮಾದಲ್ಲಿ ತಮಿಳು ಹಾಡುಗಳಿವೆ. ಸಂಭಾಷಣೆಗಳೂ ಇವೆ. ಇದನ್ನು ತೆಗೆದು ಹಾಕಿ, ಎಚ್‌ಟುಒ ಸಿನೆಮಾವನ್ನು ಅಚ್ಚ ಕನ್ನಡದಲ್ಲಿ ರೂಪಿಸಬೇಕು. ಕನ್ನಡ ಸಿನೆಮಾದಲ್ಲಿ ತಮಿಳು ಹಾಡುಗಳನ್ನು ಸೇರಿಸಿರುವುದಕ್ಕೆ ಪಂಚಕೋಟಿ ಕನ್ನಡಿಗರ ಬಳಿ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಷಮೆ ಕೋರಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್‌ಟುಒ ನಿರ್ಮಾಪಕ ಧನರಾಜ್‌ಗೆ ಧಮಕಿ ಹಾಕಿದ್ದಾರೆ.

  ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಾಣಗೆರೆ ವೆಂಕಟರಾಮಯ್ಯ ಎಚ್‌ಟುಒ ಸಿನೆಮಾವನ್ನು ಬಹಿಷ್ಕರಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಎಚ್‌ಟುಒ ಚಿತ್ರದಲ್ಲಿ ತಮಿಳು ಹಾಡನ್ನು ತುರುಕುವ ಮೂಲಕ ಕನ್ನಡಿಗರ ಎದೆಯಾಳದ ಬೇಗುದಿಯನ್ನು ನಿರ್ದೇಶಕರು ಕೆದಕಿದ್ದಾರೆ. ಕನ್ನಡಿಗರ ಅಭಿಮಾನಕ್ಕೆ ಧಕ್ಕೆ ತರುವ ಈ ಹಾಡುಗಳನ್ನು ತಕ್ಷಣವೇ ಕಿತ್ತು ಹಾಕಬೇಕು ಎಂಬುದು ಜಾಣಗೆರೆ ಅವರ ಆಗ್ರಹ.

  ನಿರ್ಲಜ್ಜೆಯಿಂದ, ಧನದಾಹದಿಂದ ಈ ತಮಿಳು ಹಾಡುಗಳನ್ನು ಹಾಕಿದ್ದೀರಿ. ಕರ್ನಾಟಕವನ್ನು, ಕನ್ನಡವನ್ನು ಅವಹೇಳನ ಮಾಡುವ ಸಂಭಾಷಣೆಯೂ ಸಿನೆಮಾದಲ್ಲಿದೆ. ಇದು ಕನ್ನಡ ಚಿತ್ರೋದ್ಯಮಕ್ಕೆ ಭೂಷಣವಲ್ಲ. ಎರಡು ರಾಜ್ಯಗಳ ನಡುವೆ ಹತ್ತಿಕೊಂಡು ಉರಿಯುತ್ತಿರುವ ಸಮಸ್ಯೆಯನ್ನು ಸಿನೆಮಾ ಮಾಡಿ ಸಾಮರಸ್ಯ ತುಂಬುವ ಹಾಗೆ ಮಾಡಿದ್ದರೆ ಅದು ಮೆಚ್ಚತಕ್ಕ ವಿಷಯವಾಗಿತ್ತು. ಆದರೆ ಧನರಾಜ್‌ ಹಾಗೂ ಉಪೇಂದ್ರರು ಮಾಡಿರುವುದು ದ್ವೇಷಾಗ್ನಿಗೆ ತುಪ್ಪ ಸುರಿಯುವ ಕೆಲಸ ಎಂದು ಜಾಣಗೆರೆ ಸಿನೆಮಾದ ವಿರುದ್ಧ ಕಿಡಿಕಾರಿದ್ದಾರೆ.

  ಸಿನೆಮಾ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆಯೇ ಈ ಅಪಾಯದ ಬಗ್ಗೆ ಧನರಾಜ್‌ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ, ಕನ್ನಡಿಗರ ಅಭಿಮಾನಕ್ಕೆ ಭಂಗ ತಾರದ ಹಾಗೆಯೇ ಸಿನೆಮಾ ಮಾಡುತ್ತೇವೆ ಅಂತ ನಿರ್ಮಾಪಕರು ಭರವಸೆ ನೀಡಿದ್ದರು. ಕೊಟ್ಟ ಮಾತನ್ನು ಧನರಾಜ್‌ ಉಳಿಸಿಕೊಂಡಿಲ್ಲ. ವೇದಿಕೆ ಸುಮ್ಮನೇ ಕೂರುವುದಿಲ್ಲ. ಸಿನೆಮಾ ಪ್ರದರ್ಶನವನ್ನು ವಿರೋಧಿಸಿ ಕನ್ನಡ ಸಂಘಗಳ ನೆರವಿನೊಂದಿಗೆ ಪ್ರತಿಭಟಿಸುತ್ತದೆ. ತಮಿಳು ಹಾಡು ಮತ್ತು ಸಂಭಾಷಣೆಗಳನ್ನು ಕೈಬಿಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಜಾಣಗೆರೆ ಹೇಳಿದ್ದಾರೆ.
  ಅಂದಹಾಗೆ, ಮಾರ್ಚ್‌ 29 ರ ಶುಕ್ರವಾರ ಎಚ್‌ಟುಒ ರಾಜ್ಯಾದ್ಯಂತ ಬಿಡುಗಡೆಯಾಗಿದೆ!

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X