»   » ಶಕೀಲ್‌-ಸಂಜಯ್‌ ದತ್‌ ನಡುವೆ ಮಾಫಿಯಾ ಸಂಭಾಷಣೆ ..

ಶಕೀಲ್‌-ಸಂಜಯ್‌ ದತ್‌ ನಡುವೆ ಮಾಫಿಯಾ ಸಂಭಾಷಣೆ ..

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಬಾಲಿವುಡ್‌ ನಟ ಸಂಜಯ್‌ ದತ್‌ಗೂ, ಭೂಗತ ದೊರೆ ಚೋಟಾ ಶಕೀಲ್‌ಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಪುರಾವೆಯಾಗಿ ಮುಂಬಯಿ ಪೊಲೀಸರು ಸೋಮವಾರ ಕೆಸೆಟ್ಟೊಂದನ್ನು ಬಿಡುಗಡೆ ಮಾಡಿದ್ದಾರೆ. ಅಂದಹಾಗೆ, ಇದು ಸಂಜಯ್‌ ದತ್‌ 43ನೇ ಹುಟ್ಟುಹಬ್ಬದ ಉಡುಗೊರೆ!

2000ನೇ ಇಸವಿಯ ಡಿಸೆಂಬರ್‌ ತಿಂಗಳಲ್ಲಿ ಪೊಲೀಸರು ದೂರವಾಣಿ ಕದ್ದಾಲಿಸಿ, ದಾಖಲಿಸಿಕೊಂಡಿರುವ ಸಂಜಯ್‌- ಶಕೀಲ್‌ ಮಾತುಗಳು ಸಿನಿಮಾ ಸುತ್ತಮುತ್ತ ಗಿರಕಿ ಹೊಡೆದಿವೆ. ಗೋವಿಂದ, ಹೃತಿಕ್‌ ರೋಷನ್‌ ಮತ್ತು ಕರಿಷ್ಮಾ ಕಪೂರ್‌ ಹೆಸರುಗಳು ಇವರ ಸಂಭಾಷಣೆಯಲ್ಲಿ ತೇಲಿ ಬಂದಿವೆ. ವಿಚಾರಣಾಧೀನ ಭರತ್‌ ಷಾ ಪ್ರಕರಣಕ್ಕೆ ಈ ಕೆಸೆಟ್‌ ಪೂರಕ ಪುರಾವೆಯಾಗಿದೆ.

ಸಂಭಾಷಣೆಯ ಆಯ್ದ ಭಾಗವನ್ನು ಯಥಾವತ್‌ ಓದಿಕೊಳ್ಳಿ....
Sanjay: That Govinda is a big fool
Shakeel: Yes, Yes
Sanjay: He just doesnt come though Im working with him
Shakeel: Yes, Yes
Sanjay: This is a 9 oclock job and he turns up for work at 2 pm
Shakeel: Really, know what? Is it on the Jodi Number Do?
Sanjay: Yes, Bhai
Shakeel: Ok
Sanjay: Yes
Shakeel: Ok, but he will come on time on our project
Sanjay: (laughs) Bhai, should I say something?
Shakeel: Yes
Sanjay: Its about that Chikna (Hrithik Roshan)
Shakeel: Yes, yes
Sanjay: He called up Karisma and abused and threatened her. What is this, Bhai?
Shakeel: Hmm
Sanjay: You think about this, Bhai
Shakeel: Hes not around for too many days now
Sanjay: Ok

ಹಿಂದೊಮ್ಮೆ ಡ್ರಗ್‌ ಅಡಿಕ್ಟ್‌ ಎಂಬ ಹಣೆಪಟ್ಟಿ ಕಟ್ಟಿಕೊಂಡ, ಆಮೇಲೆ ಬಂದೂಕಿನೊಟ್ಟಿಗೆ ಸಿಕ್ಕಿ, ಭೂಗತ ಲೋಕದ ಜೊತೆಗಿನ ತನ್ನ ಒಡನಾಟ ಬಯಲು ಮಾಡಿ, ಜೈಲಿನಲ್ಲಿ ದಿನಕಳೆದ. ಹಾಗೂಹೀಗೂ ಎಲ್ಲಾ ಸಹವಾಸ ಕಳಚಿಕೊಂಡು, ಒಳ್ಳೆ ನಟನಾದನಲ್ಲ ಅಂದುಕೊಳ್ಳುವಷ್ಟರಲ್ಲಿ ಸಂಜಯ್‌ ದತ್‌ ಹಳೇ ಚಾಳಿ ಪೊಲೀಸರಿಗೆ ಮತ್ತೆ ಸಿಕ್ಕಿ ಬಿದ್ದಿದೆ.

ಸಂಜಯ್‌ ದತ್‌ಗೆ ಇವತ್ತಿಗೆ ಸರಿಯಾಗಿ ನಲವತ್ತ ಮೂರು ವರ್ಷ. ಹ್ಯಾಪಿ ಬರ್ತಡೇ ಸಂಜಯ್‌ ಎನ್ನುವುದು ಔಚಿತ್ಯಪೂರ್ಣವೇ! ?

ಸಂಜಯ್‌ ಬಗ್ಗೆ ನಿಮಗೆ ಇನ್ನೂ ಏನಾದರೂ ಗೊತ್ತಿದ್ದರೆ ಬರೆಯಿರಿ

ನಮ್ಮ ಅಂಗಡಿಯಲ್ಲಿ...

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada