»   » ಅಂತಿಮ ಹೋರಾಟಕ್ಕೆ ಸಜ್ಜು ; ಇಂದಿನಿಂದ ಸ್ಯಾಂಡಲ್‌ವುಡ್‌ ಬಂದ್‌

ಅಂತಿಮ ಹೋರಾಟಕ್ಕೆ ಸಜ್ಜು ; ಇಂದಿನಿಂದ ಸ್ಯಾಂಡಲ್‌ವುಡ್‌ ಬಂದ್‌

Subscribe to Filmibeat Kannada

ಬೆಂಗಳೂರು : ಕನ್ನಡದ ಚಿತ್ರೋದ್ಯಮದ ಬಿಕ್ಕಟ್ಟು ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಭಾನುವಾರ (ನ.28) ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮ ಇಂದಿನಿಂದ (ನ.29) ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿದೆ.

ಚಿತ್ರೀಕರಣ, ಸಂಕಲನ, ಡಬ್ಬಿಂಗ್‌ ಸೇರಿದಂತೆ ಚಿತ್ರೋದ್ಯಮದ ಎಲ್ಲ ರೀತಿಯ ಚಟುವಟಿಕೆಗಳೂ ಸೋಮವಾರದಿಂದ ಸ್ಥಗಿತಗೊಳ್ಳಲಿವೆ ಎಂದು ಕನ್ನಡ ಕ್ರಿಯಾ ಸಮಿತಿ ತಿಳಿಸಿದೆ. ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸುವಂತೆ ಪ್ರದರ್ಶಕರನ್ನು ಒತ್ತಾಯಿಸಲೂ ಕ್ರಿಯಾ ಸಮಿತಿ ನಿರ್ಧರಿಸಿದೆ.

ಹೋರಾಟದ ಮುಂದಿನ ರೂಪುರೇಷೆಗಳನ್ನು ನಿರ್ಧರಿಸಲು ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಕನ್ನಡ ಚಿತ್ರೋದ್ಯಮದ ಗಣ್ಯರು, ಕನ್ನಡ ಹೋರಾಟಗಾರರು, ಲೇಖಕರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಲಿದೆ. ವರನಟ ರಾಜ್‌ಕುಮಾರ್‌, ವಿಷ್ಣುವರ್ಧನ್‌ರೊಂದಿಗೆ ದಲಿತ ನಾಯಕರು ಹಾಗೂ ರೈತ ಸಂಘದ ಮುಖಂಡರು ಸಭೆಯಲ್ಲಿ ಭಾಗವಹಿಸುತ್ತಿದ್ದು , ಇದು ನಿರ್ಣಾಯಕ ಹೋರಾಟ ಎಂದು ನಿರ್ಮಾಪಕರ ವಲಯ ಹೇಳಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada