»   » ಬಂದ್‌ಗೂ ನಮಗೂ ಸಂಬಂಧವಿಲ್ಲ -ಗಂಗರಾಜು

ಬಂದ್‌ಗೂ ನಮಗೂ ಸಂಬಂಧವಿಲ್ಲ -ಗಂಗರಾಜು

Subscribe to Filmibeat Kannada

ಬೆಂಗಳೂರು : ನಿರ್ಮಾಪಕರ ಸಂಘಕ್ಕೆ ಸೇರಿದ ಕೆಲವು ಸದಸ್ಯರಷ್ಟೇ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸಿ ಬಂದ್‌ನಲ್ಲಿ ತೊಡಗಿದ್ದಾರೆ. ಉಳಿದ ನಿರ್ಮಾಪಕರು ತಮ್ಮ ಎಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ಹೇಳಿದ್ದಾರೆ. ಇದರೊಂದಿಗೆ ಚಿತ್ರೋದ್ಯಮದ ಪ್ರಬಲ ಗುಂಪಿನೊಂದಿಗೆ ವಾಣಿಜ್ಯ ಮಂಡಳಿ ಪ್ರತ್ಯೇಕವಾಗಿ ಗುರ್ತಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಬಂದ್‌ಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ . ಚಿತ್ರೋದ್ಯಮದ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ನಿರ್ಮಾಪಕರ ಸಂಘಕ್ಕೆ ಸೇರಿದ ಕೆಲವರು ಮಾತ್ರ ಬಂದ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಪಿಟಿಐ ಪ್ರತಿನಿಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಸೋಮವಾರ ತಿಳಿಸಿದರು.

ಪರಭಾಷಾ ಚಿತ್ರಗಳ ಲಾಬಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಆರೋಪದ ಮೇರೆಗೆ, ಮಂಡಳಿಯನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಇತ್ತೀಚೆಗೆ ಕೆಲವು ನಿರ್ಮಾಪಕ-ನಿರ್ದೇಶಕರು ಬದಲಿಸಿದ ಕುರಿತು ಪ್ರತಿಕ್ರಿಯಿಸಿದ ಗಂಗರಾಜು- ಈ ರೀತಿಯ ಬದಲಾವಣೆ ಸಾಧ್ಯವಿಲ್ಲ . ಇದಕ್ಕೆಲ್ಲ ನೀತಿಸಂಹಿತೆ ಅವಕಾಶ ಮಾಡಿಕೊಡುವುದಿಲ್ಲ . ದಾಳಿ ಪ್ರಕರಣವನ್ನು ಮಂಡಳಿಯ ಕಾರ್ಯಕಾರಿ ಸಮಿತಿ ಖಂಡಿಸಿದೆ ಎಂದು ಗಂಗರಾಜು ಹೇಳಿದರು.

ಚಿತ್ರೋದ್ಯಮ ಬಂದ್‌ : ಚಿತ್ರೋದ್ಯಮ ಭಾಗಶಃ ಬಂದ್‌ ಆಚರಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಗಂಗರಾಜು ಹೇಳಿಕೆಯ ಬೆನ್ನಿಗೇ- ಬಂದ್‌ನಲ್ಲಿ ತೊಡಗಿರುವ ಚಿತ್ರೋದ್ಯಮದ ಗುಂಪಿನ ಹೇಳಿಕೆಯೂ ಬಿಡುಗಡೆಯಾಗಿದೆ. ನಿರ್ಮಾಣ, ಡಬ್ಬಿಂಗ್‌, ರೆಕಾರ್ಡಿಂಗ್‌, ಚಿತ್ರೀಕರಣ ಸೇರಿದಂತೆ ಉದ್ಯಮದ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ ಎಂದು ಈ ಪ್ರಕಟಣೆ ಹೇಳಿದೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada