For Quick Alerts
  ALLOW NOTIFICATIONS  
  For Daily Alerts

  ಜಂಭದ ಕೋಳಿ ಪ್ರಿಯಾಮಣಿ ಹಾಟ್ ಡರ್ಟಿ ಕಹಾನಿ

  By Rajendra
  |

  ಪ್ರತಿಯೊಬ್ಬ ತಾರೆಗೂ ಒಂದಲ್ಲಾ ಒಂದು ಕನಸಿನ ಪಾತ್ರ ಅಂಥ ಇರುತ್ತದೆ. ಹಾಗೆಯೇ ನಮ್ಮ ಜಂಭದ ಕೋಳಿ ಪ್ರಿಯಾಮಣಿಗೂ ಒಂದು ಆಸೆಯಿದೆಯಂತೆ. ಬಾಲಿವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿರುವ ವಿದ್ಯಾ ಬಾಲನ್ ಹಾದಿಯಲ್ಲಿ ಸಾಗಲು ಪ್ರಿಯಾಮಣಿ ಮುಂದಾಗಿದ್ದಾರೆ.

  'ದಿ ಡರ್ಟಿ ಪಿಕ್ಚರ್' ಮೂಲಕ ವಿದ್ಯಾ ಬಾಲನ್ ಒಂದಷ್ಟು ಒಳ್ಳೆಯದೋ ಕೆಟ್ಟದ್ದೋ ಹೆಸರು ಸಂಪಾದಿಸಿದರು. ಬಳಿಕ 'ಕಹಾನಿ' ಚಿತ್ರದ ಮೂಲಕ ಭಾವನಾತ್ಮಕವಾಗಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾದರು. ಈಗ ಈ ಎರಡೂ ಚಿತ್ರಗಳನ್ನು ಕಸಿಮಾಡಿ ಒಂದೇ ಕತೆ ಚಿತ್ರವನ್ನು ಯಾರಾದರು ಮಾಡಿ ಎಂದು ಪ್ರಿಯಾಮಣಿ ಕೇಳಿದ್ದಾರಂತೆ.

  ಇದಕ್ಕಾಗಿ ತಮ್ಮ ಸಂಭಾವನೆಯಲ್ಲೂ ಕೊಂಚ ರಿಯಾಯಿತಿ ನೀಡುವುದಾಗಿ ಆಸೆ ಹುಟ್ಟಿಸಿದ್ದಾರೆ. ಆದರೆ ಎರಡೂ ಚಿತ್ರಗಳನ್ನು ಕೂಡಿಸಿ ಭಾಗಿಸಿ ಗುಣಿಸಿ ಕಾಕ್‌ಟೈಲ್ ತಯಾರಿಸಿ ಕೊಡುವ ನಿರ್ದೇಶಕ ಯಾರು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಸದ್ಯಕ್ಕೆ ಪ್ರಿಯಾಮಣಿ ಐಡಿಯಾ ಮಾತ್ರ ಕೊಟ್ಟಿದ್ದಾರೆ. ಉಳಿದದ್ದು ನಿರ್ಮಾಪಕ, ನಿರ್ದೇಶಕರಿಗೆ ಬಿಟ್ಟಿದ್ದಾರೆ. (ಏಜೆನ್ಸೀಸ್)

  English summary
  It is heard that actress Priyamani has been showing a lot of interest in doing a film with a combination of both flavours, The Dirty Picture and Kahaani. If someone has got that kind of story she is willing to work with less remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X