ರಿಷಬ್ ಶೆಟ್ಟಿ ಜೊತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಾಲ್ಕು ಚಿತ್ರಗಳು ನಿರ್ಮಾಣ?

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ರೇಕಿಂಗ್ ನ್ಯೂಸ್ ಕೊಟ್ಟಿರುವುದು ಗೊತ್ತೇಯಿದೆ. ತೆಲುಗು ನಟ ಪ್ರಭಾಸ್ ಜೊತೆ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಈಗಾಗಲೇ 'ಸಲಾರ್' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸಿ ಗೆದ್ದಿದೆ.

'ಸಲಾರ್- 2' ಚಿತ್ರೀಕರಣ ಆರಂಭವಾಗಿದೆ. ಮೊದಲ ಭಾಗಕ್ಕಿಂತ ದೊಡ್ಡದಾಗಿ ಪ್ಲ್ಯಾನ್ ಮಾಡಲಾಗ್ತಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ. 'ಸಲಾರ್- 2' ಬಳಿಕ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮತ್ತೆರಡು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಸಂಸ್ಥೆ ಘೋಷಿಸಿದೆ. ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ 3 ಚಿತ್ರಗಳು ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿದೆ.

3 films Along with Prabhas Hombale Films also planning 4 films with rishab Shetty

'ನಿನ್ನಿಂದಲೇ' ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿತ್ತು. ಮೊದಲ ಸಿನಿಮಾ ಕೈ ಕೊಟ್ಟಿತ್ತು. ಬಳಿಕ 'ಮಾಸ್ಟರ್‌ಪೀಸ್' ಹಾಗೂ 'ರಾಜಕುಮಾರ' ಚಿತ್ರಗಳನ್ನು ಮಾಡಿ ಸಂಸ್ಥೆ ಚೇತರಿಸಿಕೊಂಡಿತ್ತು. ಬಳಿಕ 'KGF' ಸರಣಿ ಸಿನಿಮಾಗಳನ್ನು ನಿರ್ಮಿಸಿ ಗೆದ್ದಿತ್ತು. ಕನ್ನಡದಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು 'KGF' ಚಾಪ್ಟರ್-2 ಸಾಬೀತು ಮಾಡಿತ್ತು.

ಈಗಾಗಲೇ ಪರಭಾಷೆಗಳಲ್ಲಿ ಹೊಂಬಾಳೆ ಸಂಸ್ಥೆ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತಲಾ ಒಂದೊಂದು ಸಿನಿಮಾ ನಿರ್ಮಿಸಿದೆ. ಇನ್ನು 'ಕಾಂತಾರ' ಸಕ್ಸಸ್ ಹೊಂಬಾಳೆ ಸಂಸ್ಥೆ ಹುಮ್ಮಸ್ಸನ್ನು ದುಪ್ಪಟ್ಟು ಮಾಡಿದೆ. ಮುಂದಿನ 5 ವರ್ಷಗಳಲ್ಲಿ 3000 ಕೋಟಿ ರೂ. ಹಣವನ್ನು ಚಿತ್ರ ನಿರ್ಮಾಣಕ್ಕೆ ಹೂಡಿಕೆ ಮಾಡುವುದಾಗಿ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರ್ ಘೋಷಿಸಿದ್ದರು.

3 films Along with Prabhas Hombale Films also planning 4 films with rishab Shetty

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ 'ಕಾಂತಾರ- 1' ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸುವ 'ರಿಚರ್ಡ್ ಆಂಟನಿ' ಸಿನಿಮಾ ಕೂಡ ಘೋಷಣೆ ಆಗಿದೆ. 'KGF' ಚಾಪ್ಟರ್-3 ಖಚಿತವಾಗಿದೆ. ಇದೆಲ್ಲದರ ಜೊತೆಗೆ ಪ್ರಭಾಸ್ ಜೊತೆ ಮತ್ತೆರಡು ಚಿತ್ರಗಳು ಮೂಡಿ ಬರಲಿದೆ. ಒಂದು ಚಿತ್ರಕ್ಕೆ ಲೋಕೇಶ್ ಕನಕರಾಜ್ ಹಾಗೂ ಮತ್ತೊಂದಕ್ಕೆ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ.

ಕನ್ನಡದಲ್ಲಿ ಯಾಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೆಚ್ಚು ಚಿತ್ರ ನಿರ್ಮಾಣ ಮಾಡ್ತಿಲ್ಲ ಎನ್ನುವ ಚರ್ಚೆ ಕೂಡ ನಡೀತಿದೆ. ಆದರೆ ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ಕಸರತ್ತು ನಡೆಯುತ್ತಿದೆ ಎನ್ನಲಾಗ್ತಿದೆ. ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ 'ಕಾಂತಾರ- 1' ಬಳಿಕ ಮತ್ತೆ ಮೂರು ಚಿತ್ರಗಳನ್ನು ನಿರ್ಮಿಸುವ ಬಗ್ಗೆ ಮಾತುಕತೆ ನಡೀತಿದೆ ಎನ್ನುವ ಗುಸುಗುಸು ಶುರುವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

'ಕಾಂತಾರ- 1' ನಂತರ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುವ ಮತ್ತೊಂದು ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಹಣ ಹೂಡಲಿದೆಯಂತೆ. ಬಳಿಕ ರಿಷಬ್ ಹೀರೊ ಆಗಿ ಮತ್ತೆರಡು ಚಿತ್ರಗಳು ಮೂಡಿ ಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಇತ್ತೀಚೆಗೆ ಬಿಡುಗಡೆಯಾದ 'ಬಘೀರ' ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿದೆ. ಮೊದಲ ವಾರವೇ ಸಿನಿಮಾ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಮುಂದಿನ ವರ್ಷ ಆಗಸ್ಟ್ ವೇಳೆಗೆ ಬಹುನಿರೀಕ್ಷಿತ 'ಕಾಂತಾರ- 1' ಸಿನಿಮಾ ತೆರೆಗೆ ಬರಲಿದೆ.

'ರಿಚರ್ಡ್ ಆಂಟನಿ' ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗುತ್ತಿಲ್ಲ. ಇದು ಸಹಜವಾಗಿಯೇ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಈ ಚಿತ್ರವನ್ನು ಹೊಂಬಾಳೆ ಬದಲು ಬೇರೊಂದು ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನುವ ಊಹಾಪೋಹ ಕೂಡ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

More from Filmibeat

English summary
After 3 film contract with Prabhas, Is Hombale Films planning 4 films deal with Rishab Shetty?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X