For Quick Alerts
  ALLOW NOTIFICATIONS  
  For Daily Alerts

  ಪ್ರಭುದೇವ ಜೊತೆ ತಾರೆ ಸೋನಾಕ್ಷಿ ಕುಚ್ ಕುಚ್

  By Rajendra
  |

  ಡಾನ್ಸ್ ಮಾಸ್ಟರ್ ಪ್ರಭುದೇವಗೆ ಹೊಸ ಗರ್ಲ್ ಫ್ರೆಂಡ್ ಸಿಕ್ಕಿದ್ದಾಳೆ. ಈಕೆ ಬೇರಾರು ಅಲ್ಲ ಬಾಲಿವುಡ್‌ ಬಾಕ್ಸಾಫೀಸಲ್ಲಿ ಹೊಸ ದಾಖಲೆ ನಿರ್ಮಿಸಿದ 'ದಬಾಂಗ್' ಚಿತ್ರದ ಚೆಂದುಳ್ಳಿ ಚೆಲುವೆ ಸೋನಾಕ್ಷಿ ಸಿನ್ಹಾ. ಬೆಡಗಿ ನಯನತಾರಾ ಜೊತೆಗಿನ ಸಂಬಂಧ ಮುರಿದುಬಿದ್ದ ಬಳಿಕ ಸೋನಾಕ್ಷಿಗೆ ಪ್ರಭು ಈಗ ತುಂಬ ಹತ್ತಿರವಾಗಿದ್ದಾರಂತೆ.

  ಈ ಹಿಂದೆ ಹಂಸಿಕಾ ಎಂಬ ಚೆಲುವೆಯೊಂದಿಗೂ ಪ್ರಭುದೇವ ಐಸ್‌ಪೈಸ್ ಆಡಿದ್ದ ಸುದ್ದಿ ಇತ್ತು. ಹಂಸಿಕಾರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಪ್ರಭುದೇವ. ಇವರಿಬ್ಬರು ಹತ್ತಿರವಾಗಿದ್ದೇ ನಯನತಾರಾ ದೂರವಾಗಲು ಕಾರಣ ಎನ್ನಲಾಗಿತ್ತು.

  ಬಳಿಕ ಹಂಸಿಕಾ ಮಧ್ಯಪ್ರವೇಶಿಸಿ ಪ್ರಭುದೇವ ನನಗೆ ಅಣ್ಣ ಸಮಾನ. ನಮ್ಮಿಬ್ಬರದ್ದು ಅಣ್ಣ ತಂಗಿಯರ ಈ ಬಂಧ ಜನುಮಜನುಮಗಳ ಅನುಬಂಧ, ಜೀವಕ್ಕೆ ಕೊರಳು, ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ ...ಈ ರಕ್ಷಾಬಂಧನ....ಎಂದು 'ಅಣ್ಣತಂಗಿ' ಚಿತ್ರದ ಹಾಡನ್ನು ನೆನಪಿಸಿ ಗಾಸಿಪ್ ಸುದ್ದಿಗೆ ಫುಲ್‌ಸ್ಟಾಪ್ ಇಟ್ಟಿದ್ದರು.

  ಇದೆಲ್ಲಾ ರಾಮಾಯಣ ಮುಗಿದ ಮೇಲೆ ಪ್ರಭುದೇವ ಲೇಟ್ ನೈಟ್ ಹುಟ್ಟುಹಬ್ಬ ಪಾರ್ಟಿಯಲ್ಲಿ ತ್ರಿಷಾ ಡಿಂಗ್‌ಡಾಂಗ್ ಎಂದು ಕುಣಿದದ್ದು ಸುದ್ದಿಯಾಗಿತ್ತು. ಈ ಸುದ್ದಿ ಇನ್ನೂ ಚಾಲ್ತಿಯಲ್ಲಿರುವಾಗಲೇ ಪ್ರಭುದೇವ ಹೆಸರು ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಜೊತೆ ಕೇಳಿಬಂದಿದೆ.

  ಪ್ರಭುದೇವ ನಿರ್ದೇಶಿಸುತ್ತಿರುವ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ರೌಡಿ ರಾಥೋಡ್' ಚಿತ್ರದಲ್ಲಿ ಸೋನಾಕ್ಷಿ ನಾಯಕಿ. ಇತ್ತೀಚೆಗೆ ಇವರಿಬ್ಬರೂ ಐಪಿಎಲ್ ಮ್ಯಾಚ್‌ನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡದ್ದು, ಕದ್ದುಮುಚ್ಚಿ ಸುತ್ತಾಡುತ್ತಿರುವುದು ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಆಸ್ಪದ ನೀಡಿದೆ. (ಏಜೆನ್ಸೀಸ್)

  English summary
  Dance Master Prabhudeva’s liking for love affairs continues unabated. Sources close to him say that he has recently found solace in the company of Bollywood starlet Sonakshi Sinha especially after his recent split with actress Nayanthara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X