twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ವಿವಾದಲ್ಲಿ ಗೀತಾ ಕೃಷ್ಣ ಚಿತ್ರ ಕಾಫಿ ಶಾಪ್

    By Rajendra
    |

    ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಕಾಫಿ ಶಾಪ್. ಈ ಚಿತ್ರಕ್ಕೆ ಈಗ ಹೊಸ ವಿವಾದವೊಂದು ಎದುರಾಗಿದೆ. ಅದೇನೆಂದರೆ ಇದು ಡಬ್ಬಿಂಗ್ ಚಿತ್ರವೇ ಎಂಬ ಸಣ್ಣ ಅನುಮಾನ ಫಿಲಂ ಚೇಂಬರ್‌ನಲ್ಲಿ ವ್ಯಕ್ತವಾಗಿದೆ. ಈ ಅನುಮಾನವನ್ನು ಪರಿಹರಿಸಲು ಚಿತ್ರದ ನಿರ್ದೇಶಕ, ನಿರ್ಮಾಪಕ ಗೀತಾ ಕೃಷ್ಣ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿದ್ದರು.

    ತಮ್ಮ ಚಿತ್ರ ಅಪ್ಪಟ ಸ್ವಮೇಕ್ ಚಿತ್ರ. ಯಾವುದೇ ರೀತಿಯಲ್ಲೂ ಇದು ಡಬ್ಬಿಂಗ್ ಚಿತ್ರ ಅಲ್ಲ್ ಗೀತಾಕೃಷ್ಣ ಸ್ಪಷ್ಟಪಡಿಸಿದ್ದಾರೆ.ಕಳೆದ 30 ವರ್ಷಗಳಿಂದ ನಾನು ಹಲವಾರು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದೇನೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರವನ್ನು ಹೊರತರುತ್ತಿದ್ದೇನೆ. ಕನ್ನಡದಲ್ಲಿ ಡಬ್ಬಿಂಗ್ ಭಾಷೆಗಳಿಗೆ ನಿಷೇಧವಿದೆ ಎಂಬ ಸಂಗತಿ ನನಗೆ ಗೊತ್ತು.

    ನಾನೊಬ್ಬ ಕ್ರಿಯಾಶೀಲ ನಿರ್ದೇಶಕ. ನನಗೂ ಜವಾಬ್ದಾರಿಯಿದೆ. ಹಾಗಿರುವಾಗ ನಾನೇಕೆ ಡಬ್ಬಿಂಗ್ ಚಿತ್ರ ಮಾಡಲಿ ಎಂದು ಪ್ರಶ್ನಿಸಿದ್ದಾರೆ ಗೀತಾ ಕೃಷ್ಣ.ನಾನು ರೀಮೇಕ್ ಅಥವಾ ಡಬ್ಬಿಂಗ್ ಚಿತ್ರಗಳನ್ನು ಮಾಡಿಲ್ಲ. ಕಾಫಿ ಶಾಪ್ ಚಿತ್ರ ಕೂಡ ಸ್ವಮೇಕ್. ಈ ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿವೆ. ಹಾಗಿದ್ದೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮಾನ ವ್ಯಕ್ತಪಡಿಸಿದ್ದೇಕೆ ಎಂಬ ಪ್ರಶ್ನೆಗೆ ಅವರು ಹೇಳಿದ್ದಿಷ್ಟು.

    ಈ ಚಿತ್ರ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಈ ಅನುಮಾನ ಅವರಲ್ಲಿ ಮೂಡಿರಬಹುದು. ಈ ಅನುಮಾನಕ್ಕೆ ಮುಖ್ಯ ಕಾರಣ ಸಂವಹನ ಕೊರತೆ. ಮಂಡಳಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದಿತ್ತು. ಅಥವಾ ಚಿತ್ರವನ್ನು ನೋಡಿ ಅನುಮಾನ ಬಗೆಹರಿಸಿಕೊಳ್ಳಬಹುದಿತ್ತು. ಚಿತ್ರದ ಪ್ರಿಂಟ್ ಈಗಲೂ ಬೆಂಗಳೂರಿನ ಪ್ರಸಾದ್ ಲ್ಯಾಬ್‌ನಲ್ಲಿದೆ.

    ಆದರೆ ಮಂಡಲಿ ಹಾಗೆ ಮಾಡದೆ ಚಿತ್ರದ ಜಾಹೀರಾತನ್ನು ಪ್ರಕಟಿಸಬಾರದು ಎಂದು ಪತ್ರಿಕಾ ಕಚೇರಿಗೆ ಏಕಾಏಕಿ ಪತ್ರ ಬರೆದದ್ದೇಕೆ ಎಂಬುದು ನನಗೆ ಅರ್ಥವಾಗಿಲ್ಲ ಎಂದಿದ್ದಾರೆ ಗೀತಾ ಕೃಷ್ಣ. ಈಗಾಗಲೆ ಸೆನ್ಸಾರ್‌ನಲ್ಲಿ ಪಾಸಾಗಿರುವ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.ಏಪ್ರಿಲ್ 8ಕ್ಕೆ ಕಾಫಿ ಶಾಪ್ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ಚಿತ್ರದ ತಾರಾಗಣದಲ್ಲಿ ಶಶಾಂಕ್ ಮತ್ತು ಬಿಯಾಂಕಾ ದೇಸಾಯಿ ಜೊತೆಗೆ ಅತುಲ್ ಕುಲಕರ್ಣಿ, ಗಿರೀಶ್ ಕಾರ್ನಾಡ್ ಪ್ರಮುಖ ಅಭಿನಯಿಸಿದ್ದಾರೆ.

    English summary
    Geetha Krishna directed and produced latest filck Koffi Shop stuck in new controversy. Karnataka Film Chamber of Commerce suspects that Koffi Shop is a dubbing film. However Geetha Krishan clarifies that the movie is not a dubbing one. According to reliable sources producer and director Geethakrishna has thought of releasing the film on 8th of April.
    Wednesday, March 30, 2011, 15:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X