ಕಡೆಗೂ ವಿಷ್ಣುವರ್ಧನ ಟೈಟಲ್ ಗೆದ್ದ ದ್ವಾರಕೀಶ್
ಭಾರತಿ ವಿಷ್ಣುವರ್ಧನ್ ಹಾಗೂ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಡುವಿನ ಹಗ್ಗ ಜಗ್ಗಾಟ ಸುಖಾಂತ್ಯ ಕಂಡಿದೆ. ಯಾವುದೇ ಕಾರಣಕ್ಕೂ 'ವಿಷ್ಣುವರ್ಧನ' ಟೈಟಲ್ ದ್ವಾರಕೀಶ್‌ಗೆ ಕೊಡುವುದಿಲ್ಲ ಎಂದು ಭಾರತಿ ಬಿಗಿಪಟ್ಟು ಹಿಡಿದಿದ್ದರು. ಕಡೆಗೂ ವಿಷ್ಣುವರ್ಧನ ಟೈಟಲ್ ಗೆಲ್ಲುವಲ್ಲಿ ದ್ವಾರಕೀಶ್ ಯಶಸ್ವಿಯಾಗಿದ್ದಾರೆ.
ಭಾರತಿ ಅವರು ವಿಷ್ಣುವರ್ಧನ ಶೀರ್ಷಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದ್ವಾರಕೀಶ್ ಕೇಂದ್ರ ಮಾಹಿತಿ ಸಚಿವರಿಗೆ ಪತ್ರ ಬರೆದು, ಈ ವಿವಾದವನ್ನು ಅವರ ಗಮನಕ್ಕೂ ತಂದಿದ್ದರು. ಶೀರ್ಷಿಕೆ ಸಮಸ್ಯೆಯನ್ನು ಬಗೆಹರಿಸುವಂತೆ ವಿನಂತಿಕೊಂಡಿದ್ದರು.
ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೂ ಹತ್ತಿದ್ದರು. ಅವರು ಶೀರ್ಷಿಕೆಯ ಜೊತೆ ವೀರ ಅಥವಾ ರಾಜಾ ಸೇರಿಸುವಂತೆ ಸಲಹೆ ನೀಡಿದ್ದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಮಧ್ಯಪ್ರವೇಶಿಸಿ ಬಿಗಡಾಯಿಸಿದ್ದ ಸಮಸ್ಯೆಯನ್ನು ಪರಿಹರಿಸಿದೆ.
ಈಗ ವಿಷ್ಣುವರ್ಧನ ಶೀರ್ಷಿಕೆ ದ್ವಾರಕೀಶ್ ಪಾಲಾಗಿದೆ. ಈ ಬಗ್ಗೆ ಮಾತನಾಡಿರುವ ದ್ವಾರಕೀಶ್, ಚಿತ್ರದಲ್ಲಿ ನನ್ನ ಗೆಳಯ ವಿಷ್ಣುವರ್ಧನ್ ಅವರ ಗುಣಾತ್ಮಕ ಅಂಶಗಳನ್ನು ತೋರಿಸುತ್ತಿದ್ದೇನೆ. ಸುದೀಪ್ ಆ ಪಾತ್ರಕ್ಕೆ ಪೂರ್ಣಪ್ರಮಾಣದಲ್ಲಿ ನ್ಯಾಯ ಒದಗಿಸಿದ್ದಾರೆ. ವಿಷ್ಣುವರ್ಧನ ಶೀರ್ಷಿಕೆ ಸಿಕ್ಕಿದ್ದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











