ಪ್ರಭುದೇವ, ನಯನತಾರಾ ಸಂಬಂಧದಲ್ಲಿ ಬಿರುಕು
ಹಲವಾರು ನಾಟಕೀಯ ಬೆಳವಣಿಗೆಗಳ ನಂತರ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಹಾಗೂ ತಾರೆ ನಯನತಾರಾ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಪ್ರಭುದೇವ ಅವರನ್ನು ಮದುವೆಯಾಗಬೇಕು ಎಂದಿದ್ದ ನಯನತಾರಾ ಆಸೆ ಕಡೆ ಗಳಿಗೆಯಲ್ಲಿ ಕೈಕೊಟ್ಟಿದೆ ಎನ್ನುತ್ತವೆ ಮೂಲಗಳು.
ಕೆಲ ತಿಂಗಳ ಹಿಂದೆಯೇ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿರುಬ ಬಗ್ಗೆ ಅನುಮಾನಗಳು ಸ್ಟುಡಿಯೋಗಳಲ್ಲಿ ರೌಂಡಪ್ ಹೊಡೆಯುತ್ತಿದ್ದವು. ಆಗ ಸ್ವತಃ ನಯನತಾರಾ ಇದೆಲ್ಲಾ ಕೇವಲ ವದಂತಿ ಅಷ್ಟೇ ಎಂದು ಸ್ಪಷ್ಟಪಡಿಸಿದ್ದರು. ಇಬ್ಬರೂ ಮದುವೆಯಾಗಿ ಸಿಂಗಪುರದಲ್ಲಿ ಸೆಟ್ಲ್ ಆಗಬೇಕೆಂದು ತೀರ್ಮಾನಿಸಿದ್ದರು.
ಪ್ರಭು ಮತ್ತು ನಯನಿ ಮದುವೆ ಮುಂಬೈನಲ್ಲಿ ನೆರವೇರಲಿದೆ ಎನ್ನಲಾಗಿತ್ತು. ಆದರೆ ನಯನತಾರಾಗೆ ಪ್ರಭುದೇವ ಸಿನಿಮಾಗಳಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂಬುದೇ ಇವರಿಬ್ಬರ ಸಂಬಂಧ ಮುರಿದುಬೀಳಲು ಕಾರಣ ಎನ್ನಲಾಗಿದೆ. ಈಗ ನಯನತಾರಾ ಸಿನಿಮಾ ಒಂದಕ್ಕೆ ಸಹಿ ಹಾಕಿರುವುದು ಅನುಮಾನಗಳನ್ನು ಬಲಪಡಿಸುತ್ತಿವೆ. (ಏಜೆನ್ಸೀಸ್)
More from Filmibeat
English summary
Prabhu Deva and Nayantara who is dating for the last four months and were going steady finally called it a quit due to some differences. To settle with Nayantara, Prabhu Deva divorced his first wife Latha from which he had two sons and even paid her a good sum of alimony. After so much of drama, Nayan and Prabhu’s relationship could not reach to the final destination and they split-up.


Click it and Unblock the Notifications











