»   » ‘ಸಜನಿ’ ರೀಮೇಕೋ-ಸ್ವಮೇಕೋ? ರೆಹಮಾನ್‌ ಸಂಗೀತವಂತೂ ಇದೆ!

‘ಸಜನಿ’ ರೀಮೇಕೋ-ಸ್ವಮೇಕೋ? ರೆಹಮಾನ್‌ ಸಂಗೀತವಂತೂ ಇದೆ!

Subscribe to Filmibeat Kannada


ಸಿಂಪಲ್‌ ಆಗಿ ಹೇಳಬೇಕು ಅಂದರೆ, ಇದು ಜಸ್ಟ್‌ ರೀಮೇಕ್‌ ಅಷ್ಟೇ. ತಮಿಳಿನ ‘ಜೋಡಿ’ ಹಾಗೂ ಅದಕ್ಕೂ ಮುಂಚೆ ‘ಡೋಲಿ ಸಜಾಕೆ ರಖ್‌ನಾ’ ಎಂಬ ಹಿಂದಿ ಚಿತ್ರಕ್ಕೆ ರೆಹಮಾನ್‌ ನೀಡಿದ ಸಂಗೀತದ ಯಾಥಾವತ್ತು ಕಾಪಿ, ಕನ್ನಡದ ‘ಸಜನಿ’!

  • ಅಮೃತಾ
ಖ್ಯಾತ ಸಂಗೀತ ನಿರ್ದೇಶಕ ಎ.ಅರ್‌. ರೆಹಮಾನ್‌, ಕನ್ನಡ ಸಿನಿಮಾಕ್ಕೆ ಸಂಗೀತ ನೀಡುವುದು ನೆನ್ನೆ ಮೊನ್ನೆಯವರೆಗೂ ಬರೀ ಗಾಳಿಮಾತಾಗಿತ್ತು. ಅದರೆ ಇಂದು ‘ಸಜನಿ’(ಕನ್ನಡ ಚಿತ್ರನಾ!?) ಚಿತ್ರದ ಅಡಿಯೋ ಬಿಡುಗಡೆ ಅಗಿದೆ. ಎಫ್‌ ಎಂ ರೇಡಿಯೋ ಚಾನೆಲ್‌ಗಳಲ್ಲಿ ರೆಹಮಾನ್‌ ಸಂಗೀತದ ಹಾಡುಗಳು ಕೇಳಿ ಬರುತ್ತಿದೆ.

ಅದರೆ ಸಂತೋಷ ಪಡುವ ಯಾವ ಸಂಗತಿಯೂ ಇದರಲ್ಲಿ ಇಲ್ಲಾ ಅನ್ಬೇಕು. ಯಾಕೆ ಅಂತೀರಾ. ‘ಸಜನಿ’ ಎನ್ನುವ ಶೀರ್ಷಿಕೆಯೇ, ಹಿಂದಿ ಚಿತ್ರದ ಟೈಟಲ್‌ ರೀತಿ ಇದೆ. ಈ ಸಿನಿಮಾಕ್ಕೆ ರೆಹಮಾನ್‌ ಸಂಗೀತ ನೀಡೇ ಇಲ್ಲ ಅನ್ನಬಹುದು. ಹೇಗೆ ಅಂದರೆ, ಚಿತ್ರದ ಹಾಡುಗಳನ್ನು ಕೇಳಿದರೆ ಯಾರಿಗಾದರೂ ತಿಳಿಯುತ್ತದೆ! ಹೀಗಾಗಿ ಈ ಚಿತ್ರಕ್ಕೆ ರೆಹಮಾನ್‌ ಸಂಗೀತವನ್ನು ಬಳಸಲಾಗಿದೆ ಅಥವಾ ಎರವಲು ಪಡೆಯಲಾಗಿದೆ ಎನ್ನಬಹುದು.

ಇನ್ನೂ ಸಿಂಪಲ್‌ ಆಗಿ ಹೇಳಬೇಕು ಅಂದರೆ, ಇದು ಜಸ್ಟ್‌ ರೀಮೇಕ್‌ ಅಷ್ಟೇ. ರೆಹಮಾನ್‌ ತಮಿಳಿನ ‘ಜೋಡಿ’ ಹಾಗೂ ಅದಕ್ಕೂ ಮುಂಚೆ ‘ಡೋಲಿ ಸಜಾಕೆ ರಖ್‌ನಾ’ ಎಂಬ ಹಿಂದಿ ಚಿತ್ರಕ್ಕೆ ನೀಡಿದ ಸಂಗೀತದ ಯಾಥಾವತ್ತು ಕಾಪಿ, ಕನ್ನಡದ ‘ಸಜನಿ’.

ಈ ಕೆಲಸಕ್ಕೆ ರಾಜೇಶ್‌ ರಾಮನಾಥನ್‌ ಇದ್ದರಲ್ಲಾ?

ಹಿಂದೆಲ್ಲಾ ರೆಹಮಾನ್‌ ಕೂಡ ತಾನು ಒಂದು ಚಿತ್ರಕ್ಕೆ ನೀಡಿದ ಹಾಡು ಮತ್ತು ಸಂಗೀತವನ್ನು ತನ್ನದೇ ಇನ್ನೊಂದು ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದದ್ದು ವಾಡಿಕೆ. ಅದರಲ್ಲೂ ಹಿಂದಿಯಿಂದ ತಮಿಳಿಗೆ ರೀಮೇಕ್‌ ಅದ ಅಥವಾ ಡಬ್‌ ಅದ ಚಿತ್ರಗಳಲ್ಲಿ ಈ ರೀತಿ ಕಾಪಿ ಚೆಟ್‌ ನಡೆಯುತ್ತಿದ್ದದ್ದು ಸಾಮಾನ್ಯ. ಅದರಲ್ಲಿ ಏನೂ ತಪ್ಪಿಲ್ಲ ಬಿಡಿ. ಆದರೆ ಈ ಕೇಸಲ್ಲಿ ಚಿತ್ರದ ಕಥೆನೇ ಬೇರೆ! ಸಂಗೀತನೇ ಬೇರೆ!

‘ಸಜನಿ’ ಚಿತ್ರಕ್ಕೆ ಸಾಹಿತ್ಯ ರಚಿಸಿರುವವರಲ್ಲಿ ಒಬ್ಬರಾದ ಪ್ರಹ್ಲಾದ್‌ ಅವರ ಪ್ರಕಾರ, ಒರಿಜನಲ್‌ ಸಾಂಗ್‌ ಇಟ್ಟುಕೊಂಡು ಅಲ್ಪ ಸ್ವಲ್ಪ ಬದಲಾಯಿಸಿದ್ದಾರಂತೆ. ಈ ಕೆಲಸವನ್ನು ನಮ್ಮ ರಾಜೇಶ್‌ ರಾಮನಾಥನ್‌ ಅಚ್ಚುಕಟ್ಟಾಗಿ ಮಾಡುತ್ತಿರಲಿಲ್ಲವೇ(ಬೇಕಾದರೆ ‘ಯಜಮಾನ’ ಚಿತ್ರದ ಸಂಗೀತ ಕೇಳಿ!)

ರೆಹಮಾನ್‌ ಕನ್ನಡಕ್ಕೆ ಬಂದು ಹೊಸದೇನನ್ನೂ ನೀಡಿಲ್ಲ. ಈಗಾಗಲೇ ಎಲ್ಲರ ಬಾಯಲ್ಲೂ (ಅಫ್‌ ಕೋರ್ಸ್‌ ಬೆಂಗ್ಳೂರಿನಲ್ಲಿ ಜಾಸ್ತಿ) ಗುನುಗುತ್ತಿರುವ ತಮಿಳು ಹಾಗೂ ಹಿಂದಿ ಹಾಡುಗಳ ಕನ್ನಡ ಅವತರಣಿಕೆ ನೀಡಿದ್ದಾರೆ. ಪಾಪ ರೆಹಮಾನ್‌ಗೆ ಪುರಸೊತ್ತಿಲ್ಲ ಅನ್ಸುತ್ತೆ . ಇಲ್ಲಾಂದ್ರೆ ಬರೀ ಆಡಿಯೋ ಹಕ್ಕು ಪಡೆದು, ಅಲ್ಪ ಸ್ವಲ್ಪ ಬದಲಾವಣೆ ಮಾಡಿ ನಿಮ್ಮ ಹೆಸರಲ್ಲೇ ಹಾಡುಗಳು ಕೇಳಿಸುತ್ತೇವೆ ಎಂದು ಹೇಳಿ ನಿರ್ಮಾಪಕರು ಪೂಸಿ ಹೊಡೆದಿರಬೇಕು.

ಒಟ್ಟಿನಲ್ಲಿ ಹೊಸತನವಿಲ್ಲ. ಅದೇ ರಾಗ, ಅದೇ ಹಾಡು. ಅದಕ್ಕೆ ರೆಹಮಾನ್‌ ಸಂಗೀತ ಎನ್ನೋ ಲೇಬಲ್‌ ಅಷ್ಟೇ. ಕೇವಲ ಕನ್ನಡ ಹಾಡುಗಳನ್ನಷ್ಟೇ ಕೇಳುವವರಿಗೆ ‘ಸಜನಿ’ ಚಿತ್ರದ ಹಾಡುಗಳು-ಸಂಗೀತ ಖಂಡಿತಾ ಇಷ್ಟವಾಗುತ್ತದೆ! ಧ್ಯಾನ್‌ ಚಿತ್ರದ ನಾಯಕ.

ಸಜನಿ - ಕನ್ನಡ ಸಿನೆಮಾದ್ದೇ ರೀಮೇಕ್ಕಾ?

ಚಿತ್ರದ ಸಹನಿರ್ಮಾಪಕಿ ಸೊನಾಲಿ ನಿಖಿಲ್‌ ಪ್ರಕಾರ ಚಿತ್ರದ ಕಥೆಯನ್ನು ರಚಿಸಿದವರು ಬಿ.ಎ.ಮಧು. ಅದರೆ ಈ ಮೊದಲು ಈ ಚಿತ್ರ ನಾಗತಿಹಳ್ಳಿ ಚಂದ್ರಶೇಖರ್‌ ಕೈಸೇರಿ , ನಾಲ್ಕಾರು ಸಿನಿಮಾಗಳ ರೀಮೇಕ್‌ ಥರಾ ಇದೇ ಎಂದು ರಿಜೆಕ್ಟ್‌ ಅಗಿ, ನಂಜುಡೇ ಗೌಡರ ಕೈಸೇರಿತು ಎಂದು ಗಾಂಧಿನಗರದ ಮಂದಿ ಹೇಳುತ್ತಿದ್ದಾರೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada