»   » ದಟ್ಸ್‌ ಕನ್ನಡ ಫಲಶ್ರುತಿ : ‘ರೋಮಾಂಚನ’ಕ್ಕೆ ಬಿತ್ತು ಕತ್ತರಿ!

ದಟ್ಸ್‌ ಕನ್ನಡ ಫಲಶ್ರುತಿ : ‘ರೋಮಾಂಚನ’ಕ್ಕೆ ಬಿತ್ತು ಕತ್ತರಿ!

Subscribe to Filmibeat Kannada


‘ಸ್ಯಾಂಡಲ್‌ವುಡ್‌ ಸೆಕ್ಸ್‌ವುಡ್‌ ಆಗುವುದೇ?’ ಎಂಬ ದಟ್ಸ್‌ ಕನ್ನಡ ಓದುಗರ ಆತಂಕವನ್ನು ಸೆನ್ಸಾರ್‌ ಅಧಿಕಾರಿಗಳು, ದೂರ ಮಾಡಿದ್ದಾರೆ. ಹೌದು. ಬೆಂಗಳೂರಿನ ಅಪರ್ಣ ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಸೆನ್ಸಾರ್‌ ಅಧಿಕಾರಿಗಳು, ಸೆಕ್ಸ್‌ ಚಿತ್ರ ‘ರೋಮಾಂಚನ’ಕ್ಕೆ ತಡೆಯಾಡ್ಡಿದ್ದಾರೆ.

ಉಪ್ಪಾರಪೇಟೆ ಪೊಲೀಸರ ಸಹಯೋಗದೊಂದಿಗೆ ದಾಳಿ ನಡೆಸಿದ ಸೆನ್ಸಾರ್‌ ಮಂಡಳಿ, ಚಿತ್ರದ ಪ್ರಿಂಟ್‌ ವಶಪಡಿಸಿಕೊಂಡಿದೆ. ಅಲ್ಲದೇ ಚಿತ್ರಮಂದಿರದ ಆಪರೇಟರ್‌ ಮತ್ತು ವ್ಯವಸ್ಥಾಪಕನನ್ನು ಬಂಧಿಸಿದ್ದಾರೆ. ಪ್ರದರ್ಶನ ಸ್ಥಗಿತಗೊಂಡದ್ದರಿಂದ, ಪ್ರೇಕ್ಷಕರಿಗೆ ಟಿಕೆಟ್‌ ಹಣವನ್ನು ವಾಪಸ್‌ ನೀಡಲಾಯಿತು.

ದಾಳಿ ಬಗ್ಗೆ ವಿವರ ನೀಡಿರುವ ಪ್ರಾಂತೀಯ ಸೆನ್ಸಾರ್‌ ಮಂಡಳಿ ಅಧಿಕಾರಿ ಎ.ಚಂದ್ರಶೇಖರ್‌, ರೋಮಾಂಚನ ಚಿತ್ರದ ಐದು ದೃಶ್ಯಗಳಿಗೆ ಕತ್ತರಿ ಹಾಕಿ ಕೇಂದ್ರ ಸೆನ್ಸಾರ್‌ ಮಂಡಳಿ, ಯು ಪ್ರಮಾಣ ಪತ್ರ ನೀಡಿತ್ತು. ಆದರೆ ಪ್ರದರ್ಶಕರು ಅಶ್ಲೀಲ ದೃಶ್ಯಗಳನ್ನು ಜೋಡಿಸಿ, ಪ್ರದರ್ಶನ ಮಾಡುತ್ತಿದ್ದರು. ಹೀಗಾಗಿ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದರು.

ಸೆನ್ಸಾರ್‌ ಅಧಿಕಾರಿಗಳ ವರ್ತನೆಯಿಂದ, ನೀಲಿ ಚಿತ್ರಗಳ ನಿರ್ಮಾಪಕರು ಗಲಿಬಿಲಿಗೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada