»   » ಕೋರ್ಟ್‌ ಕಟಕಟೆಯಲ್ಲಿ ಸಿನಿ ಸಮರ

ಕೋರ್ಟ್‌ ಕಟಕಟೆಯಲ್ಲಿ ಸಿನಿ ಸಮರ

Posted By:
Subscribe to Filmibeat Kannada

ಬೆಂಗಳೂರು : ಹೊಸ ಪರಭಾಷಾ ಚಿತ್ರಗಳ ಪ್ರದರ್ಶನದ ನಿಬಂಧವನ್ನು ಪ್ರಶ್ನಿಸಿ ನ್ಯಾಯವಾದಿ ಎಸ್‌.ವಾಸುದೇವ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ಪುರಸ್ಕರಿಸಿದೆ. ರಾಜ್ಯದಲ್ಲಿ ಪರಭಾಷಾ ಚಿತ್ರಗಳ ನಿರ್ಬಂಧ ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾಗಿದೆ. ಸರಕಾರಕ್ಕೂ ಅಧಿಕ ಮೊತ್ತದ ತೆರಿಗೆ ನಷ್ಟವಾಗಿದೆ. ಈ ನಿರ್ಣಯ ನೆರೆ ರಾಜ್ಯಗಳ ನಡುವಿನ ಬಾಂಧ ವ್ಯಕ್ಕೆ ಧಕ್ಕೆ ತಂದಿದೆ. ಕೂಡಲೇ ನಿಷೇಧವನ್ನು ತೆಗೆದು ಹಾಕಬೇಕು ಎಂದು ಅರ್ಜಿದಾರರು ಕೋರಿದ್ದರು.

ವಾದಿ ಮತ್ತು ಪ್ರತಿವಾದಿಗಳು ರಾಜಿ ಮೂಲಕ ಸಮಸ್ಯೆ ಬಗೆಹರಿಸಿಕೊಂಡರೆ, ನ್ಯಾಯಪೀಠದ ಅಭ್ಯಂತರವಿಲ್ಲ ಎಂದು ನ್ಯಾಯಮೂರ್ತಿ ಎನ್‌.ಕೆ. ಜೈನ್‌ ಹಾಗೂ ವಿ.ಜಿ.ಸಭಾಹಿತ್‌ ಅಭಿಪ್ರಾಯಪಟ್ಟಿದ್ದಾರೆ.

ಶಾಂತಿ-ಸಮರ : ಹೈಕೋರ್ಟ್‌ನ ನೋಟೀಸ್‌ಗೆ ಉತ್ತರ ನೀಡಲು ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿ ರಚಿಸಿರು ವ ಭಕ್ತವತ್ಸಲಂ ಅಧ್ಯಕ್ಷತೆಯ ಉಪಸಮಿತಿ, ಕಾನೂನು ತಜ್ಞರ ಸಲಹೆ ಪಡೆಯಲು ಹಾಗೂ ನೆರೆ ರಾಜ್ಯಗಳ ಚಿತ್ರೋದ್ಯ ಮಿಗಳ ಮನವೊಲಿಸಲು ನಡೆದ ಸಭೆಯಲ್ಲಿ ನಿರ್ಧರಿಸಿದೆ.

ಸಂಘರ್ಷಕ್ಕೆ ಸಿದ್ಧ : ರಾಜಧಾನಿ ಬೆಂಗಳೂರು ನಗರದಲ್ಲಿ ಕನ್ನಡ ಚಿತ್ರೋದ್ಯಮದ ನಿಲುವಿಗೆ ವ್ಯತಿರಿಕ್ತವಾಗಿ ಹಿಂದಿ ಚಿತ್ರ ಗಳಾದ ಪಾಪ್‌ಕಾರ್ನ್‌ ಕಾವೋ ಮಸ್ತ್‌ ಹೋಜಾವೋ, ಕಿಂಗ್‌ ಆಫ್‌ ಬಾಲಿವುಡ್‌, ಇಂಗ್ಲೀಷ್‌ ಚಿತ್ರ ಎಲಿಯನ್‌ ವರ್ಸ್‌ಸ್‌ ಪ್ರಿಡೇಟರ್‌ ಹಾಗೂ ತೆಲುಗು ಮತ್ತು ತಮಿಳು ಚಿತ್ರಗಳನ್ನು ಪ್ರದರ್ಶಿಸಲು ಸಿದ್ದತೆಗಳು ನಡೆದಿವೆ. ಮಲ್ಟಿಫ್ಲೇಕ್ಸ್‌, ಊರ್ವಶಿ, ಕಾವೇರಿ ಸೇರಿದಂತೆ ಹತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಶುಕ್ರವಾರ(ಅಕ್ಟೋಬರ್‌ 1)ಈ ಹೊಸ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada