»   » ನಿರ್ಮಾಪಕರ ಬಂಧಿಸಿ : ಒರಟ ವಿರುದ್ಧ ವಡ್ಡರ ಆಕ್ರೋಶ!

ನಿರ್ಮಾಪಕರ ಬಂಧಿಸಿ : ಒರಟ ವಿರುದ್ಧ ವಡ್ಡರ ಆಕ್ರೋಶ!

Posted By: Staff
Subscribe to Filmibeat Kannada

ಬೆಳಗಾವಿ, ನ.29 : ಆಗಾಗ ಕನ್ನಡ ಚಲನ ಚಿತ್ರಗಳು ವಿವಾದಕ್ಕೆ ಸಿಲುಕುವುದು ಹೊಸದೇನಲ್ಲ. ಮೊನ್ನೆ ಬಿಡುಗಡೆಯಾದ 'ಒರಟ ಐ ಲವ್ ಯು" ಚಿತ್ರವು ಹೊಸದೊಂದು ವಿವಾದಕ್ಕೆ ಸಿಕ್ಕಿದೆ. ಚಿತ್ರದಲ್ಲಿ ವಡ್ಡರ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ದಸಂಸ ಆರೋಪಿಸಿದೆ.
 
'ಒರಟ ಐ ಲವ್ ಯು" ಚಿತ್ರದಲ್ಲಿ ವಡ್ಡರ ಜನಾಂಗಕ್ಕೆ ಅವಮಾನ ಮಾಡಲಾಗಿದೆ. ಚಿತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆ ಚಿತ್ರದ ನಿರ್ಮಾಪಕರನ್ನು ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಮತ್ತು ರಾಜ್ಯಪಾಲರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ.

ಪತ್ರದಲ್ಲಿ ಚಿತ್ರದ ನಿರ್ಮಾಪಕರಾದ ಸಿ.ಆರ್. ಮನೋಹರ್ ಪರಿಶಿಷ್ಟ ಜಾತಿಗೆ ಸೇರಿದ ವಡ್ಡರ ಸಮುದಾಯದ ವಿರುದ್ಧ ವಡ್ಡನು ದಡ್ಡನೆಂದು ನಿಂದಿಸಿ ಅವಮಾನಿಸಿದ್ದಾರೆ. ಇದು ಸಂವಿಧಾನ ಬಾಹಿರ. ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಅವರನ್ನು ಬಂಧಿಸಿ ಚಿತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ರೀತಿ ಜಾತಿ ಜನಾಂಗದ ಹೆಸರು ಹೇಳಿ ಅಪಮಾಡಲಾಗಿದೆ ಎಂದು ಆಪಾದಿಸಿ ಚಿತ್ರ ಪ್ರದರ್ಶನ ರದ್ದತಿಗೆ ಆಗ್ರಹಿಸಿದ ಉದಾಹಣೆಗಳೂ ಪ್ರಕರಣಗಳು ನಮ್ಮ ಮುಂದಿವೆ. ಉಪೇಂದ್ರ ನಟಿಸಿದ್ದ, ರಾಮು ನಿರ್ಮಾಣದ  ಚಿತ್ರಕ್ಕೆ ಮೊದಲು 'ಮಾಸ್ತಿ" ಎಂದು ಹೆಸರಿಟ್ಟಿದ್ದರು. ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರರ ಹೆಸರಿಗೆ ಅವಮಾನ ಮಾಡುತ್ತಿದ್ದಾರೆಂದು ಕನ್ನಡಪರ ಸಂಘಟನೆಗಳು ವಿರೋಧಿಸಿದ್ದರಿಂದ ಚಿತ್ರಕ್ಕೆ 'ಮಸ್ತಿ" ಎಂದು ಹೆಸರನ್ನು ಹ್ರಸ್ವಗೊಳಿಸಿದರು.

'ಆ ದಿನಗಳು" ಚಿತ್ರದಲ್ಲಿ ಕಾಂಗ್ರೆಸ್ ಮುಖಂಡರಾದ ದಿ.ದೇವರಾಜ ಅರಸು, ಆರ್.ಎಲ್.ಜಾಲಪ್ಪ, ಬಿ.ಕೆ.ಹರಿಪ್ರಸಾದ್ ಅವರ ಘನತೆಗೆ ಚ್ಯುತಿ ತರಲಾಗಿದೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆರೋಪಿಸಿತ್ತು. ಹಾಗಾಗಿ 'ಆ ದಿನಗಳ" ಸುತ್ತಲೂ ಕೆಲದಿನ ವಿವಾದವೇರ್ಪಟ್ಟಿತ್ತು.   'ಬಲ್ಲಿ" ಚಿತ್ರಕ್ಕೂ ಹೆಸರಿನ ಸುತ್ತ ವಿವಾದದ ಬಳ್ಳಿ ಸುತ್ತಿಕೊಂಡಿತ್ತು. ಎಸ್. ನಾರಾಯಣ್‌ರ 'ಚೆಲುವಿನ ಚಿತ್ತಾರ", ಉಪೇಂದ್ರರ 'ಆಟೋ ಶಂಕರ್" ಹೀಗೆ ಹೆಸರಿಸುತ್ತಾ ಹೋದರೆ ವಿವಾದಾತ್ಮಕ ಚಿತ್ರಗಳ ಪಟ್ಟಿ ಕಮ್ಮಿ ಇಲ್ಲಾ ಅನ್ನಿಸುತ್ತದೆ.

'ಒರಟ..." ಚಿತ್ರ ವಿಮರ್ಶೆ

(ದಟ್ಸ್‌ಕನ್ನಡ ಸಿನಿವಾರ್ತೆ)

ಮತ್ತಷ್ಟು ಕಿರಿಕಿರಿ ಪಿರಿಪಿರಿಗಾಗಿ ಓದಿ :

ಮನೀಷಾ ಮನೆಸುತ್ತಲೂ ಪೊಲೀಸರ ಸರ್ಪಕಾವಲು!
ಯಾರಿಗೂ ಬೆದರದ ನಿರ್ಭೀತ ಮಾತಿನ ಮಲ್ಲ,

English summary
Orata I Love you' in controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada