»   » ಅಶ್ಲೀಲ ಎಂಎಂಎಸ್‌ : ಮತ್ತೊಮ್ಮೆ ನಟಿ ತ್ರಿಶಾ ಪ್ರತ್ಯಕ್ಷ...!

ಅಶ್ಲೀಲ ಎಂಎಂಎಸ್‌ : ಮತ್ತೊಮ್ಮೆ ನಟಿ ತ್ರಿಶಾ ಪ್ರತ್ಯಕ್ಷ...!

Posted By:
Subscribe to Filmibeat Kannada


ಈಗಿನ ಎಂಎಂಎಸ್‌ನಲ್ಲಿ ಬೆತ್ತಲೆಯಾಗಿರುವ ತ್ರಿಶಾರ ಹಿಂಭಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ನಟಿ ತ್ರಿಶಾ, ಅಶ್ಲೀಲ ಎಂಎಂಎಸ್‌ ಲೋಕದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ! ಈ ಮೊದಲು ಅವರು ಬೆತ್ತಲೆಯಾಗಿ ಷವರ್‌ನಲ್ಲಿ ಸ್ನಾನ ಮಾಡುತ್ತಿದ್ದ(ಇದರಲ್ಲಿದ್ದ ಹುಡುಗಿ ಬಹುತೇಕ ತ್ರಿಶಾರನ್ನೇ ಹೋಲುತ್ತಿದ್ದಳು)ಎಂಎಂಎಸ್‌ ಎಲ್ಲೆಡೆ ರವಾನೆಯಾಗಿ, ಬಿಸಿಬಿಸಿ ಸುದ್ದಿಗೆ ಕಾರಣವಾಗಿತ್ತು.

ಈಗಿನ ಎಂಎಂಎಸ್‌ನಲ್ಲಿ ಬೆತ್ತಲೆಯಾಗಿರುವ ತ್ರಿಶಾರ ಹಿಂಭಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಹಿಂದಿನಿಂದ ನೋಡಿದರೆ ತ್ರಿಶಾ ಎನಿಸುತ್ತದೆ. ಆಕಡೆ ಈಕಡೆ ತಿರುಗಿದಾಗ ಅಲ್ಲ ಎನಿಸುತ್ತದೆ ಎಂಬುದು ಎಂಎಂಎಸ್‌ ನೋಡಿದವರ ಅಂಬೋಣ.

ಕಳೆದ ಬಾರಿಯ ಎಂಎಂಎಸ್‌ ಪ್ರಕರಣಕ್ಕೆ ತ್ರಿಶಾ ನೀಡಿದ ಪ್ರತಿಕ್ರಿಯೆ ಅದನ್ನು ಮತ್ತಷ್ಟೂ ಜನಪ್ರಿಯಗೊಳಿಸಿದ್ದವು. ಆದರೆ ಈ ಬಾರಿ ಪ್ರತಿಕ್ರಿಯೆ ನೀಡಿದರೆ ಇದು ಮತ್ತಷ್ಟು ಗಮನ ಸೆಳೆಯುತ್ತದೆ ಎಂದು ಅರಿತಿರುವ ಅವರು, ಸುಮ್ಮನಿರಲು ನಿರ್ಧರಿಸಿದ್ದಾರಂತೆ.

ಸೆಲ್ವರಾಘವನ್‌ ನಿರ್ದೇಶನದ ತೆಲುಗು ಚಿತ್ರದಲ್ಲಿ ತ್ರಿಶಾ ಬಿಜಿಯಾಗಿದ್ದಾರೆ. ಈ ಚಿತ್ರದ ನಾಯಕ ವೆಂಕಟೇಶ್‌. ಅವರ ಮುಂದಿನ ತೆಲುಗು ಚಿತ್ರದಲ್ಲಿ ನಾಗಾರ್ಜುನ ಹಾಗೂ ತಮಿಳು ಚಿತ್ರದಲ್ಲಿ ಅಜಿತ್‌ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada