ನೈಜ ಪಾತ್ರಕ್ಕಾಗಿ ಬೆತ್ತಲಾಗಿ ಬೀಡಿ ಸೇದಿದ ಪೂಜಾ ಗಾಂಧಿ
'ಮುಂಗಾರು ಮಳೆ' ಹುಡುಗಿ ಪೂಜಾ ಗಾಂಧಿ ಈ ಮಟ್ಟದ ಸಾಹಸಕ್ಕೆ ಕೈಹಾಕುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 'ದಂಡುಪಾಳ್ಯ' ಚಿತ್ರದ ಆಕೆಯ ಅರೆ ಬೆತ್ತಲೆ ಫೋಟೋ ಲೀಕ್ ಆಗಿದ್ದೇ ತಡ ಗಾಂಧಿನಗರದಲ್ಲಿ ಎದೆಯ ಬಡಿತ ತೀವ್ರವಾಗಿದೆ. ಆದರೆ ಪೂಜಾಗಾಂಧಿ ಮಾತ್ರ ತಾವು ಬೆತ್ತಲಾಗಿರುವ ಸುದ್ದಿಯನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ. ಬೆತ್ತಲೆ ಸುದ್ದಿಯನ್ನು ಸುಳ್ಳು ಎಂದಿದ್ದಾರೆ.
ನೈಜ ಕತೆಯಾಧಾರಿತ 'ದಂಡುಪಾಳ್ಯ' ಚಿತ್ರದಲ್ಲಿ ಪೂಜಾ ಗಾಂಧಿ ಬೆತ್ತಲಾಗಿರುವ ಫೋಟೋಗಳು ಎಲ್ಲ ಪತ್ರಿಕೆಗಳನ್ನೂ ಅಲಂಕರಿಸಿವೆ. ಚಿತ್ರದಲ್ಲಿ ಬೆತ್ತಲೆ ಸೀನ್ ಕೇವಲ 20 ರಿಂದ 30 ಸೆಕೆಂಡ್ ಮಾತ್ರ ಇದೆಯಂತೆ. ಬೆತ್ತಲೆ ಎಂದರೆ ಬಟ್ಟೆ ಇಲ್ಲದೆ ನಟಿಸುವುದು. ಆದರೆ ಚಿತ್ರದಲ್ಲಿ ನಾನು ಎಲ್ಲೂ ಬಟ್ಟೆ ಕಳಚಿಲ್ಲ ಎಂದು ಪೂಜಾ ಸಮರ್ಥಿಸಿಕೊಂಡಿದ್ದಾರೆ.
ಈ ಚಿತ್ರದ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ. ಪೂಜಾ ಗಾಂಧಿ ತಮ್ಮ ಪಾತ್ರಕ್ಕೆ ನೈಜತೆ ತುಂಬಲು ನಿಜವಾಗಿಯೂ ಬೀಡಿ ಸೇದಿದ್ದಾರೆ. 'ದಂಡುಪಾಳ್ಯ'ದ ಲಕ್ಷ್ಮಿ ಪಾತ್ರ ನೈಜವಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ತಾನು ಬೀಡಿ ಸೇದಿದ್ದೇನೆ. ಬಾಲಿವುಡ್‌ನಲ್ಲಿ ರೇಖಾ, ವಿದ್ಯಾ ಬಾಲನ್, ಶಬಾನಾ ಅಜ್ಮಿ ಇವರೆಲ್ಲಾ ಸಿಗರೇಟು ಸೇದಿದ್ದಾರೆ, ಡ್ರಿಂಗ್ಸ್ ಮಾಡಿದ್ದಾರೆ. ಆದರೆ ಅವರೆಲ್ಲಾ ಶೋಕಿಗಾಗಿ ಮಾಡಿಲ್ಲ ಎಂದು ಪೂಜಾ ಒತ್ತಿ ಹೇಳಿದ್ದಾರೆ.
ಒಟ್ಟಾರೆಯಾಗಿ 'ದಂಡುಪಾಳ್ಯ' ಚಿತ್ರ ಗಾಂಧಿನಗರದಲ್ಲಿ ಹುಯಿಲೆಬ್ಬಿಸಿದೆ. ಪೂಜಾಗಾಂಧಿಗೆ ಈ ಚಿತ್ರ ಹೊಸ ತಿರುವು ನೀಡುವ ಸಾಧ್ಯತೆಗಳಿವೆ. ಕೇವಲ ಈ ಬೆತ್ತಲೆ ಸೀನ್ ಬಗ್ಗೆ ಮಾತನಾಡುವುದನ್ನು ಬಿಟ್ಟು, ಈ ಪಾತ್ರಕ್ಕಾಗಿ ತಾನೆಷ್ಟು ರಿಸ್ಕ್ ತಗೊಂಡಿದ್ದೀನಿ ಎಂಬುದರ ಬಗ್ಗೆ ಬರೀರಿ. ಅನಾವಶ್ಯಕವಾಗಿ ಈ ಸೀನ್ ವಿವಾದಕ್ಕೆಳೆಯಬೇಡಿ ಎಂದಿದ್ದಾರೆ ಪೂಜಾ ಗಾಂಧಿ. (ಏಜೆನ್ಸೀಸ್)


Click it and Unblock the Notifications











