ಪ್ರಿಯಾಂಕಾ ಇದೇನು ನಿನ್ನ ಸಂಗೀತ ಪ್ರೇಮದ ವರಸೆ?

ಬಾಲಿವುಡ್ ನಖರಾಗಳ ಸಂತೆ. ಅಲ್ಲಿ ಆಗಾಗ ಯಾರಾದರೊಬ್ಬರ ನಖರಾಗಳು ಇಲ್ಲವೆಂದರೆ ಬಹುಶಃ ಯಾರಿಗಾದರೂ ಆಗಬಹುದು ಚಿಂತೆ. ಇದೀಗ ನಟಿ ಪ್ರಿಯಾಂಕಾ ಛೋಪ್ರಾ ಸರದಿ. ತನ್ನ ಮ್ಯೂಸಿಕ್ ಆಲ್ಬಾಮ್ ಬಿಡಗಡೆಗೆಂದು ಉತ್ತರ ಅಮೆರಿಕಾ ಸುತ್ತುತ್ತಿರುವ ಪ್ರಿಯಾಂಕ, ಬರ್ಫಿ ಚಿತ್ರೀಕರಣಕ್ಕೆ ಬಾಲಿವುಡ್ ಅಂಗಳಕ್ಕೆ ಬರುವುದನ್ನೇ ಮರೆತಿದ್ದಾಳೆ.

ಪ್ರಿಯಾಂಕಾಳ ಮಿತಿಮೀರಿದ ಸಂಗೀತ ಪ್ರೇಮ ಬರ್ಫಿ ಚಿತ್ರಕ್ಕೆ ಶಾಪವಾಗಿ ಪರಿಣಮಿಸಿದೆ. ಎಚ್ಚರಿಸಿದರೂ ಆಕೆ ಕೇರ್ ಮಾಡುತ್ತಿಲ್ಲ. ನಿರ್ದೇಶಕ ಅನುರಾಗ್ ಬಸು ಸಾಕಷ್ಟು ಹೇಳಿದರೂ ಪ್ರಿಯಾಂಕ ಕಿವಿಗೊಡುತ್ತಿಲ್ಲವಂತೆ. ಆತ ಕೇಳುವುದನ್ನು ನಿಲ್ಲಿಸುವುದೇ ಸದ್ಯಕ್ಕಿರುವ ದಾರಿ ಎಂಬಂತಾಗಿದೆ.

ಪ್ರಿಯಾಂಕ ಡೇಟ್ ಸಮಸ್ಯೆಯಿಂದಾಗಿಯೇ ಬರ್ಫಿ ಚಿತ್ರ ಪ್ರಾರಂಭವಾಗಲು ತಡವಾಗಿದ್ದು. ಆಕೆಯನ್ನು ಕಾದಿದ್ದಕ್ಕೆ ಕನಿಷ್ಟ ಕೃತಜ್ಞತೆಯೂ ಇಲ್ಲವೆಂದರೆ ಹೇಗೆ ಎಂದು ಚಿತ್ರತಂಡ ಮಾತಾಡುತ್ತಿದ್ದರೆ ಪ್ರಿಯಾಂಕ ಮಾತ್ರ ಜಾಣ ಕಿವುಡಿಗೆ ಜೊತೆಯಾಗಿದ್ದಾರೆ. ಈಗ ಬರ್ಫಿ, ಪ್ರಿಯಾಂಕ ಬಿಸಿಗೆ ಕರಗಿ ಹೋಗದಿದ್ದರೆ ಸಾಕು ಎಂದು ಚಿತ್ರತಂಡ ಹರಕೆ ಹೊತ್ತರೆ ಆಶ್ಚರ್ಯವಿಲ್ಲ ಎಂಬುದು ಬಾಲಿವುಡ್ ಕುಹಕ. (ಏಜೆನ್ಸೀಸ್)

More from Filmibeat

English summary
Priyanka Chopra refused to return back to India for director Anurag Basu's Barfee's shooting. The film will also cast Ranbir Kapoor, Ileana D’Cruz.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X