»   » ಎಚ್‌ಟುಒ: ಒತ್ತಡಕ್ಕೆ ಮಣಿದ ಧನರಾಜ್‌, ಡಿಎಂಕೆ ಬಾವುಟಕ್ಕೆ ಕತ್ತರಿ!

ಎಚ್‌ಟುಒ: ಒತ್ತಡಕ್ಕೆ ಮಣಿದ ಧನರಾಜ್‌, ಡಿಎಂಕೆ ಬಾವುಟಕ್ಕೆ ಕತ್ತರಿ!

Subscribe to Filmibeat Kannada

ಉಪೇಂದ್ರ ಹಾಗೂ ಪ್ರಭುದೇವ್‌ ಅಭಿನಯದ ಎಚ್‌ಟುಒ ಚಿತ್ರದಲ್ಲಿರುವ ಕನ್ನಡಿಗರ ಮನಸ್ಸಿಗೆ ನೋವಾಗುವಂತಹ ದೃಶ್ಯಗಳನ್ನು ಕಿತ್ತು ಹಾಕಲು ಒತ್ತಾಯಿಸುತ್ತಿರುವ ಕನ್ನಡ ಸಂಘಟನೆಗಳ ಸೂಚನೆಗಳನ್ನು ಒಪ್ಪುವುದಾಗಿ ಎಚ್‌ಟುಒ ನಿರ್ಮಾಪಕ ಧನರಾಜ್‌ ತಿಳಿಸಿದ್ದಾರೆ.

ಕನ್ನಡ ಸಂಘಟನೆಗಳ ನಾಯಕರಿಗೆ ಎಚ್‌ಟುಒ ಸಿನಿಮಾ ತೋರಿಸಿದ್ದೇನೆ. ಅವರು ಸೂಚಿಸಿರುವ ಅಂಶಗಳನ್ನು ಕಿತ್ತುಹಾಕುವ ಪ್ರಯತ್ನದಲ್ಲಿದ್ದೇನೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಡಿಎಂಕೆ ಪಕ್ಷದ ಬಾವುಟವನ್ನು ಈಗಾಗಲೇ ಕಿತ್ತು ಹಾಕಲಾಗಿದೆ ಎಂದು ಧನರಾಜ್‌ ಹೇಳಿದ್ದಾರೆ.

ಒಬ್ಬ ತಂತ್ರಜ್ಞನನ್ನು ಎಚ್‌ಟುಒ ಪ್ರದರ್ಶನ ನಡೆಯುತ್ತಿರುವ ಎಲ್ಲ ಕೇಂದ್ರಗಳಿಗೂ ಕಳುಹಿಸಿ, ಸೂಕ್ತ ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದ್ದೇನೆ ಎಂದು ಧನರಾಜ್‌ ತಿಳಿಸಿದ್ದಾರೆ. ಡಿಎಂಕೆ ಬಾವುಟವಿರುವ ಸನ್ನಿವೇಶವನ್ನು ಕತ್ತರಿಸದಿದ್ದಲ್ಲಿ , ರಾಜ್ಯಾದ್ಯಂತ ಚಳವಳಿ ನಡೆಸುವುದಾಗಿ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಶನಿವಾರ ಸುದ್ದಿ ಹೇಳಿಕೆಯಲ್ಲಿ ಗುಡುಗಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada