»   » ಗಾಸಿಪ್ಪಿನಲ್ಲಿರೋದು ಅರ್ಧ ಸತ್ಯ ಮಾತ್ರ : ಕಮಲ ಹಾಸನ್‌

ಗಾಸಿಪ್ಪಿನಲ್ಲಿರೋದು ಅರ್ಧ ಸತ್ಯ ಮಾತ್ರ : ಕಮಲ ಹಾಸನ್‌

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ನಾನು ಸಾರಿಕಾನ ಡೈವೋರ್ಸ್‌ ಮಾಡಿ, ಸಿಮ್ರಾನ್‌ನ ಮದುವೆ ಆಗ್ತೀನಂತೆ ಅನ್ನೋದು ಇವತ್ತಿನ ಗಾಸಿಪ್‌. ಸುಮ್ಮನಿದ್ದು ಸಾಕಾಗಿಹೋಗಿದೆ. ನಿಜ ಹೇಳ್ತೀನಿ- ಈ ಗಾಸಿಪ್ಪಲ್ಲಿ ಅರ್ಧ ಮಾತ್ರ ಸತ್ಯ : ಕಮಲ ಹಾಸನ್‌.

ಈ ಅರ್ಧ ಸತ್ಯ ಯಾವುದು- ಸಾರಿಕಾಗೆ ಡೈವೊರ್ಸ್‌ ಕೊಡೋದೋ ಅಥವಾ ಸಿಮ್ರಾನ್‌ಳನ್ನು ಮದುವೆ ಆಗೋದೋ? ಈ ನೇರವಾದ ಪ್ರಶ್ನೆಗೆ ಮಾತ್ರ ಕಮಲ್‌ ಅಷ್ಟೇ ನೇರವಾದ ಉತ್ತರ ಕೊಡುತ್ತಿಲ್ಲ. ಇಷ್ಟು ದಿನ ಪುಕಾರುಗಳ ಗಾಳೀಪಟವನ್ನು ನೋಡುತ್ತಲೇ ಮುಗುಮ್ಮಾಗಿ ಮಂದಹಾಸ ಬೀರುತ್ತಿದ್ದ ಕಮಲ್‌ ಈಗ ಪಂಚತಂತ್ರದ ನಗೆ ನಕ್ಕು ಮಾತಿಗಿಳಿಯುತ್ತಾರೆ. ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ, ಸಾರಿಕಾ ಅಂತೂ ಕಮಲ್‌ಗೆ ಈಗ ಕಿರಿಕಿರಿ. ಯಾಕೆ ? ಕಮಲ್‌ ಮಾತಲ್ಲೇ ಕೇಳಿ...

‘ಸಾರಿಕಾ ಬುದ್ಧಿವಂತೆ. ಆಕೆಯನ್ನು ಮದುವೆ ಆಗುವ ಮುನ್ನ ಬೇಕಾದಷ್ಟು ಹುಡುಗೀರನ್ನು ನಾನು ಹತ್ತಿರದಿಂದ ಬಲ್ಲೆ. ಆದರೆ ಯಾರೊಟ್ಟಿಗೂ ಪ್ರೀತಿ ಹಂಚಿಕೊಳ್ಳುವಷ್ಟು ಮುಂದುವರೆಯಲಿಲ್ಲ. ಅದಕ್ಕೆ ಅವರೆಲ್ಲಾ ಲಾಯಕ್ಕಾಗಿರಲಿಲ್ಲ. ಸಾರಿಕಾಳನ್ನು ಮೆಚ್ಚಿ, ಮದುವೆಯಾದೆ. ಆದರೆ ಅವಳು ಮನೆಯಲ್ಲೇ ಕೊಳೆಯುವ ಹುಳುವಾಗಿಬಿಟ್ಟಳು. ದಿನಾ ಡೈನಿಂಗ್‌ ಟೇಬಲ್ಲಿನ ಮುಂದೆ 8 ತಾಸು ಕಳೆಯುವ ಹೆಂಗಸಿನ ಜೊತೆ ನಾನು ಹೇಗೆ ಸಂಸಾರ ಮಾಡಲಿ?

‘ನನ್ನ ದೊಡ್ಡ ಮಗಳು ಶೃತೀನ ಕಂಡರೆ ನಂಗೆ ತುಂಬಾ ಇಷ್ಟ . ಈಗ ಅವಳ ಮನಸ್ಸು ಎಷ್ಟು ನೊಂದುಕೊಂಡಿದೆಯೋ ಏನೋ? ಇಷ್ಟು ವರ್ಷ ಸುಮ್ಮನಿದ್ದ ವಾಣಿ ಗಣಪತಿ ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿದಾಳೆ. ನನಗೆ ಅವಳು ಡ್ಯಾನ್ಸ್‌ ಹೇಳಿಕೊಟ್ಟು, ಕುರಿಯಾಗ್ರಫರ್‌ ಮಾಡಿದಳಂತೆ. ಅವಳ ಮುಂದೆ ನಾನು ಒಂದೇ ಒಂದು ದಿನಾನೂ ಕುಣಿದಿಲ್ಲ. ನಾನು ವುಮನೈಸರ್‌ ಅಂತೆ, ಲೇಡಿ ಕಿಲ್ಲರ್‌ ಅಂತೆ... ಇನ್ನೂ ಏನೇನೋ ಅಂತೆ ಕಂತೆಗಳು.

‘ಹೆಂಗಸಿನ ಒಳತೋಟಿಗಳು, ತುಡಿತಗಳು ನನಗೆ ಚೆನ್ನಾಗಿ ಗೊತ್ತು. ನನ್ನ ಅನುಭವಕ್ಕೆ ಮೀರಿದ ನೋವುಗಳನ್ನು ಈಕೆ ಅನುಭವಿಸುತ್ತಾಳೆ ಅಂತಲೂ ಗೊತ್ತು. ಗುಣ ಚಿತ್ರದಲ್ಲಿ ನಾನು ಹೆಂಗಸಿನ ಮನಸ್ಸಿನ ಪುಟಗಳನ್ನು ತೆರೆದಿಟ್ಟಿದ್ದೇನೆ. ನೋಡಿ, ನನಗೆ ಸಿನಿಮಾದಲ್ಲಿ ಮಾಡೋಕೆ ಸಾಕಷ್ಟು ಕೆಲಸ ಇದೆ. ಇವೆಲ್ಲಾ ಕಿರಿಕ್ಕುಗಳ ಸಹವಾಸವೇ ಬೇಡ. ನನ್ನ ಮೇಲೆ ಬಾಣ ಬಿಡುವವರಿಗೆ ದೇವರು ಒಳ್ಳೆಯದನ್ನು ಮಾಡಲಿ :)’

ಅಂದಹಾಗೆ, ಕಮಲ್‌ ಒಪ್ಪಿಕೊಂಡಿರುವ ಹಾಗೆ ಸಾರಿಕಾಗೆ ಡೈವೊರ್ಸ್‌ ಕೊಡೋದಂತೂ ಗ್ಯಾರಂಟಿ. ಆದರೆ ಸಿಮ್ರಾನ್‌ ಜೊತೆ ಮದುವೆ? ಈ ಪ್ರಶ್ನೆ ಕೇಳಿ ಕಮಲ್‌ ಕೆಂಪಾದರೆ, ಮೂಗೂರು ಬಸವರಾಜ ಭಗ್ನ ಪ್ರೇಮಿಯ ಪೋಸಲ್ಲೇ ನಾಟ್ಯವಾಡತೊಡಗಿರುವುದಂತೂ ನಿಜ.

ಕಮಲ ದಳಗಳು...
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada