twitter
    For Quick Alerts
    ALLOW NOTIFICATIONS  
    For Daily Alerts

    ಮಿಸ್ಟರ್ ರಿಷಬ್ ಶೆಟ್ಟಿ ಅವರೇ ಇಂಥ ಶಿಕ್ಷಣ ಬೇಕು ಅಂತಿದ್ದೀರಲ್ಲ ಸರಿನಾ? ನೆಟ್ಟಿಗನ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರವೇನು?

    |

    ಕಳೆದ ಶುಕ್ರವಾರ ಬಿಡುಗಡೆಯಾದ ಕಾಂತಾರ ಚಿತ್ರದ ಮೂಲಕ ಇತರೆ ಎಲ್ಲಾ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿಗಳು ಕನ್ನಡ ಚಿತ್ರರಂಗದತ್ತ ಮತ್ತೆ ತಿರುಗಿ ನೋಡುವಂತೆ ಮಾಡಿದ್ದಾರೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ.

    ಕರ್ನಾಟಕದ ಕರಾವಳಿ ಭಾಗದ ಆಚರಣೆಗಳಾದ ದೈವ ನರ್ತನ ಹಾಗೂ ಭೂತ ಕೋಲದ ಕುರಿತಾದ ಕಥೆಯನ್ನು ಹೊಂದಿದ್ದ ಕಾಂತಾರ ಚಿತ್ರವನ್ನು ಸಿನಿಪ್ರೇಕ್ಷಕರು ದೊಟ್ಟಮಟ್ಟದಲ್ಲಿ ಮೆಚ್ಚಿಕೊಂಡರು. ಎಲ್ಲಾ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡ ಕಾಂತಾರ 99% ಬುಕ್ ಮೈ ಶೋ ರೇಟಿಂಗ್ ಮೂಲಕ ವಿಶ್ವ ದಾಖಲೆ ಬರೆಯಿತು.

    ಇನ್ನು ತೊಂಬತ್ತರ ದಶಕದ ಸಮಯದಲ್ಲಿ ಹೆಚ್ಚಾಗಿ ನಡೆಯುವ ಕಾಂತಾರ ಚಿತ್ರದ ಕಥೆಯಲ್ಲಿ ಆಗಿನ ಕಾಲದಲ್ಲಿದ್ದ ಮೇಲ್ವರ್ಗದವರು ಮತ್ತು ಕೆಳವರ್ಗದವರು, ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ಹಲವಾರು ದೃಶ್ಯಗಳನ್ನು ತೋರಿಸಲಾಗಿತ್ತು. ಈ ಅಂಶಗಳನ್ನು ಚಿತ್ರದಲ್ಲಿ ತೋರಿಸಿದ್ದಕ್ಕಾಗಿ ರಿಷಬ್ ಶೆಟ್ಟಿ ಕುರಿತು ಪ್ರಶಂಸೆಗಳು ಸಹ ವ್ಯಕ್ತವಾಗಿದ್ದವು. ಹೀಗೆ ಚಿತ್ರದಲ್ಲಿ ಅಸ್ಪೃಶ್ಯತೆಯ ದೃಶ್ಯಗಳನ್ನು ಇರಿಸಿದ್ದ ರಿಷಬ್ ಶೆಟ್ಟಿ ನಿಜ ಜೀವನದಲ್ಲಿ ಈಗಿನ ಶಿಕ್ಷಣ ಪದ್ಧತಿಯ ವಿರುದ್ಧ ಧನಿ ಎತ್ತಿದ್ದರು ಹಾಗೂ ಹಳೆಯ ಶಿಕ್ಷಣ ಪದ್ದತಿಯೇ ಸರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಿಷಬ್ ಶೆಟ್ಟಿ ಅವರ ಈ ಹೇಳಿಕೆ ಕುರಿತು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತಾಗಿ ರಿಷಬ್ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯೂ ಎದುರಾಗಿತ್ತು.

     ವೈರಲ್ ಆಗಿತ್ತು ಈ ಪೋಸ್ಟ್

    ವೈರಲ್ ಆಗಿತ್ತು ಈ ಪೋಸ್ಟ್

    ರಿಷಬ್ ಶೆಟ್ಟಿ ಈಗಿನ ಕಾಲದ ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಹೇಳಿಕೆ ನೀಡಿದ್ದಾರೆ ಎಂದು ಪೋಸ್ಟ್ ಒಂದು ವೈರಲ್ ಆಗಿತ್ತು. 'ಬ್ರಿಟಿಷರು ಸೆಟ್ ಮಾಡಿರುವ ಶಿಕ್ಷಣ ವ್ಯವಸ್ಥೆಯನ್ನು ನಾವು ಅನುಸರಿಸುತ್ತಿದ್ದೇವೆ. ಈ ಶಿಕ್ಷಣ ವ್ಯವಸ್ಥೆ ನಮಗೆ ಜೀವನ ಪ್ರೀತಿ, ಬದುಕುವುದನ್ನು ಕಲಿಸಿಕೊಡುತ್ತಿಲ್ಲ. ಗುಲಾಮಗಿರಿಯನ್ನು ಮುಂದುವರಿಸುತ್ತಿದೆ. ಗುಲಾಮ ಪದ್ಧತಿಗಾಗಿ ಈ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಗುರುಕುಲ ಪದ್ಧತಿಯ ಎಲ್ಲಾ ಕ್ರಮವನ್ನು ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ. ಶಾಲೆಗಳಲ್ಲಿ ಜೀವನ ಸಂಸ್ಕೃತಿಯ ಪಾಠ ಶುರುವಾಗಬೇಕಿದೆ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ' ಎಂಬ ಪೋಸ್ಟ್ ವೈರಲ್ ಆಗಿತ್ತು.

     ಈ ಹೇಳಿಕೆ ವಿರುದ್ಧ ವಿರೋಧ!

    ಈ ಹೇಳಿಕೆ ವಿರುದ್ಧ ವಿರೋಧ!

    ಹೀಗೆ ರಿಷಬ್ ಶೆಟ್ಟಿ ಈಗಿನ ಶಿಕ್ಷಣ ವ್ಯವಸ್ಥೆಯ ಬದಲು ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಮತ್ತೆ ಬರಬೇಕೆಂದು ಹೇಳಿಕೆ ನೀಡಿದ್ದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗನೋರ್ವ ಟ್ವೀಟ್ ಮಾಡಿ ಅದರಲ್ಲಿ ರಿಷಬ್ ಶೆಟ್ಟಿ ಅವರ ಖಾತೆಯನ್ನು ಉಲ್ಲೇಖಿಸಿ 'ಮಿಸ್ಟರ್ ರಿಷಬ್ ಶೆಟ್ಟಿ ಅವರೇ, ನಿಮ್ಮ ಗುರುಕುಲ ಪದ್ಧತಿ ಶಿಕ್ಷಣ ಬಹುಜನರಿಗೆ ಶಿಕ್ಷಣ ಕೊಟ್ಟೇ ಇರಲಿಲ್ಲ ಎನ್ನುವುದು ಜ್ಞಾಪಕವಿರಲಿ . ಗುರುಕುಲದಲ್ಲಿ ನಿಮ್ಮ ಮಕ್ಕಳಿಗೆ ಆಗ ಕಲಿಸುತ್ತಿದ್ದದ್ದು ಅಸ್ಪಶ್ಯತೆ ಆಚರಣೆ ಮಾಡಿ, ಜಾತಿಯನ್ನು ಗಟ್ಟಿಗೊಳಿಸಿ ಎಂದು ಉಪನ್ಯಾಸ ನೀಡುತ್ತಿದ್ದರು. ಇಂಥ ಶಿಕ್ಷಣ ವ್ಯವಸ್ಥೆ ಬೇಕಾ?' ಎಂದು ಪ್ರಶ್ನೆ ಹಾಕಿದ್ದಾರೆ. ಈ ಪ್ರಶ್ನೆಗೆ ಹಲವಾರು ಕಾಮೆಂಟ್ ಬಂದಿದ್ದು ಭಿನ್ನ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

     ರಿಷಬ್ ಈ ಅರ್ಥದಲ್ಲಿ ಹೇಳಿರಬಹುದು ಎಂಬ ನೆಟ್ಟಿಗ, ಧನ್ಯವಾದ ತಿಳಿಸಿದ ರಿಷಬ್

    ರಿಷಬ್ ಈ ಅರ್ಥದಲ್ಲಿ ಹೇಳಿರಬಹುದು ಎಂಬ ನೆಟ್ಟಿಗ, ಧನ್ಯವಾದ ತಿಳಿಸಿದ ರಿಷಬ್

    ಇನ್ನು ನೆಟ್ಟಿಗ ಕೇಳಿದ ಶಿಕ್ಷಣ ವ್ಯವಸ್ಥೆಯ ಕುರಿತಾದ ಪ್ರಶ್ನೆಗೆ ನೇರವಾಗಿ ಉತ್ತರಿಸದ ರಿಷಬ್ ಶೆಟ್ಟಿ ಈ ಪ್ರಶ್ನೆಗೆ ಮತ್ತೊಬ್ಬ ನೆಟ್ಟಿಗ ನೀಡಿದ ಉತ್ತರಕ್ಕೆ ಸ್ಪಂದಿಸುವ ಮೂಲಕ ತಾನು ಆ ಹೇಳಿಕೆ ನೀಡಿದ್ದರ ಹಿಂದಿನ ಉದ್ದೇಶವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ರಿಷಬ್ ಶೆಟ್ಟಿ ಈ ಹೇಳಿಕೆ ನೀಡಿರುವುದರ ಹಿಂದಿನ ಅರ್ಥ ಈಗಿನ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಬೇಕಾದದ್ದನ್ನು ಕಲಿಸುತ್ತಿಲ್ಲ ಎಂಬುದು ಇರಬಹುದು ಎಂದು ರಿಷಬ್ ಪರ ಟ್ವೀಟ್ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ರಿಷಬ್ ಶೆಟ್ಟಿ ನಿಮಗಾದರೂ ಆ ಹೇಳಿಕೆ ಅರ್ಥವಾಗಿದ್ದು ಸಂತೋಷವಾಯಿತು ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    English summary
    A fan questions Rishab Shetty's against statement about current education system. Read on
    Thursday, October 6, 2022, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X